ಜಯತೀರ್ಥ ಶ್ರೀಪಾಂದಗಳವರ ರಚಿಸಿದ ಗ್ರಂಥ ಓದಿದವರಿಗೆ ಪರಾಜಯವೇ ಇಲ್ಲ : ವಿದ್ಯಾಧೀಶ ತೀರ್ಥರ ಸಂದೇಶ

0
948

ಶ್ರೀಜಯತೀರ್ಥ ವೇದಿಕೆ, ಮಳಖೇಡ: ‘ಜಯತೀರ್ಥ ಶ್ರೀಪಾದಂಗಳವರು ರಚಿಸಿದ ಗ್ರಂಥಗಳನ್ನು ಓದಿದವರಿಗೆ ಪರಾಜಯವೇ ಎಲ್ಲ ಎಂದು ಉಡುಪಿ ಪಲಿಮಾರು ಮಠಾಧೀಶರಾದ ವಿದ್ಯಾಧೀಶ ತೀರ್ಥರು ಹೇಳಿದ್ದಾರೆ.
ಅವರು ಇಲ್ಲಿನ ಜಯತೀರ್ಥರ ಮೂಲ ವೃಂದಾವನ ಸನ್ನಿಧಾನದಲ್ಲಿ ಆಯೋಜಿಸಿರುವ ‘ಶ್ರೀಮನ್ನ್ಯಾಯ ಸುಧಾ ಮಂಗಳ ಮಹೋತ್ಸವ’ದ ಎರಡನೇ ದಿನವಾದ ಶುಕ್ರವಾರ, ಅವರು ಅನುಗ್ರಹ ಸಂದೇಶ ನೀಡಿದರು.
ಪರಾಜಯವೇ ಇಲ್ಲದ ಗ್ರಂಥಗಳನ್ನು ಜಯತೀರ್ಥ ಶ್ರೀಪಾದಂಗಳವರು ರಚಿಸಿದ್ದಾರೆ. ಅದು ಧಾರ್ಮಿಕವಾಗಿ ಪರಮೋಚ್ಚವಾದ ಗ್ರಂಥವಾಗಿದೆ ಎಂದರು.
‘ಜಯತೀರ್ಥರ ಪೂರ್ಣ ಸನ್ನಿಧಾನ ಮಳಖೇಡದಲ್ಲಿದೆ ಎಂಬುದಕ್ಕೆ ಎರಡು ಮಾತಿಲ್ಲ. ವ್ಯಾಸರಾಜರ ‘ತರ್ಕತಾಂಡವ’ ವ್ಯಾಖ್ಯಾನ ಇಲ್ಲಿ ಬಿಡುಗಡೆ ಆದದ್ದೂ ಸಹ ಜಯತೀರ್ಥರ ಮೂಲ ಬೃಂದಾವನ ಸನ್ನಿಧಿಯೇ ಕಾರಣವೆಂದು ಹೇಳಬಹುದು’ ಎಂದರು.

‘ಪಲಿಮಾರು ಮಠದ ಪ್ರಾಚೀನ ಪೀಠಾಧಿಪತಿಗಳಾದ ಜಯತೀರ್ಥರ ಸಮಕಾಲೀನರಾದ ವಿದ್ಯಾಮೂರ್ತಿ ಅವರ ಮೂಲ ವೃಂದಾವನ ಇರುವುದನ್ನೂ’ ಪಲಿಮಾರು ಶ್ರೀಗಳು ಸ್ಮರಿಸಿದರು.
‘ಸಾಕ್ಷಾತ್ ಇಂದ್ರದೇವರು ವಾಲಿ ಆಗಿ, ಅರ್ಜುನ ಆಗಿ ಬಂದಾಗ ಒಮ್ಮೊಮ್ಮೆ ಪರಾಜಯ ಆದದ್ದು ಉಂಟು. ಅದಕ್ಕೋಸ್ಕರ ಜಯತೀರ್ಥರಾಗಿ ಬಂದು ಪರಾಜಯ ಇಲ್ಲದ ಗ್ರಂಥ ರಚಿಸಿದ್ದಾರೆ. ಹೀಗಿರುವಾಗ, ಜಯತೀರ್ಥರಿಗೆ ಪರಾಜಯ ಹೇಗೆ ಸಾಧ್ಯ?’ ಎಂದರು.
‘ಮಳಖೇಡದ ಜಯತೀರ್ಥರ ಸನ್ನಿಧಿಯಲ್ಲಿ ನಾನು ಸುಧಾ ಮಂಗಳಕ್ಕೆ ಬರುತ್ತಿರುವುದು ಎರಡನೇ ಬಾರಿ. ಹಿಂದೆ ಸತ್ಯಪ್ರಮೋದ ತೀರ್ಥರ ಕಾಲದಲ್ಲಿ ಒಮ್ಮೆ ಆಗಿತ್ತು’ ಎಂದು ಕಾಣಿಯೂರು ಮಠಾಧೀಶ ವಿದ್ಯಾವಲ್ಲಭ ತೀರ್ಥರು ಸ್ಮರಿಸಿದರು.

ಸುಬ್ರಹ್ಮಣ್ಯ ಮಠಾಧೀಶರಾದ ವಿದ್ಯಾಪ್ರಸನ್ನತೀರ್ಥರು ಮಾತನಾಡಿ, ‘ಭಗವಂತನೇ ಜಗತ್ತಾಗಿ ಪರಿಣಾಮ ಗೊಳ್ಳುವ ಎಂಬ ವಾದ ಸರಿಯಲ್ಲ.
ದುಃಖಮಯ ಪ್ರಪಂಚಯವಾಗಿ ಭಗವಂತ ಆಗಲು ಹೇಗೆ ಸಾಧ್ಯ? ಎಂದು ಆಚಾರ್ಯ ಮಧ್ವರು ಆಕ್ಷೇಪಿಸಿದ್ದಾರೆ. ಇದನ್ನು ಜಯತೀರ್ಥರು ಸಮರ್ಥಿಸಿ ಕೊಟ್ಟಿದ್ದಾರೆ. ಸತ್ಯಾತ್ಮತೀರ್ಥರು ಇದನ್ನು ಆಧುನಿಕ ಜಗತ್ತಿನಲ್ಲಿ ಸಮರ್ಥವಾಗಿ ಸಾರುತ್ತಿರುವುದು ಅಭಿನಂದನೀಯ’ ಎಂದರು.
ಕೊನೆಗೆ ಸತ್ಯಾತ್ಮತೀರ್ಥರು ಅನುಗ್ರಹ ನೀಡಿದರು.
ವಿದ್ಯಾರ್ಥಿಗಳಾದ ಸರ್ವಜ್ಞ ಶಹಾಪುರ ಅವರು ‘ಬಂಧಮಿಥ್ಯಾತ್ವ ನಿರಾಸ’ ಕುರಿತು ಮಾತನಾಡಿ, ‘ಸಂಸಾರವು ಬಂಧಕ. ಈ ಸಂಸಾರದ ಬಂಧನದಿAದ ಜೀವರನ್ನು ಪಾರಾಗಿಸಲು ನಮ್ಮ ಶಾಸ್ತ್ರಗಳು ಹೊರಟಿವೆ.
ಈ ಸಂಸಾರ ಬಂಧನ ಮಿಥ್ಯೆ ಎಂದು ಕೆಲವರು ಹೇಳುತ್ತಾರೆ. ಆದರೆ, ಮಧ್ವ ಮತದಲ್ಲಿಸಂಸಾರ ಬಂಧನ ಸತ್ಯ. ಮಿಥ್ಯೆ ಎಂದು ಪ್ರತಿಪಾದಿಸುವ ಮತಗಳ ನಿರಾಕರಣೆಯನ್ನು ಪ್ರಮಾಣಗಳ ಹಿನ್ನೆಲೆಯಲ್ಲಿ ಮಧ್ವಾಚಾರ್ಯರು ಮಾಡಿದ್ದಾರೆ. ಅದನ್ನು ಜಯತೀರ್ಥರು ನ್ಯಾಯಸುಧಾ ಗ್ರಂಥದಲ್ಲಿ ನಾನಾರೀತಿಯ ಆಕ್ಷೇಪಗಳಿಗೆ ಉತ್ತರ ನೀಡಿ ಸಮರ್ಥಿಸಿ ಕೊಟ್ಟಿದ್ದಾರೆ’ ಎಂದರು.

ಎರಡನೆಯ ವಿದ್ಯಾರ್ಥಿ ಪ್ರಹ್ಲಾದ ಮಣ್ಣೂರ ಅವರು ‘ವಿಷಯತ್ವ ನಿರೂಪಣ’ ಕುರಿತು ಮಾತನಾಡಿ, ‘ಇಲ್ಲಿ ‘ವಿಷಯ’ ಎಂದರೆ ಪದಾರ್ಥಗಳು. ಒಂದೊAದು ಇಂದ್ರಿಯಕ್ಕೆ ವಿಷಯಗಳು ಬೇರೆ ಬೇರೆ. ಉದಾಹರಣೆಗೆ ಕಣ್ಣಿಗೆ ರೂಪ , ಕಿವಿಗೆ ಶಬ್ದ. ಆದರೆ, ನಮಗೆ ಅದ್ಭುತ ದೇಹ ಇಂದ್ರಿಯಗಳನ್ನು ನೀಡಿ ಉಪಕರಿಸಿದ ಭಗವಂತನೇ ಎಲ್ಲ ಇಂದ್ರಿಯಗಳಿಗೆ ವಿಷಯ ನೆಂದು ತಿಳಿಸಿ, ನಮ್ಮ ಸಾಧನದ ಗುರಿ ಭಗವಂತನೇ ಎಂದು ಮಧ್ವಾಚಾರ್ಯರು ತೋರಿಸಿ ಕೊಟ್ಟದ್ದಾರೆ’ ಎಂದು ವಿವರಿಸಿದರು.
ಮೂರನೇ ವಿದ್ಯಾರ್ಥಿ ಕೇಶವ ಕುಲಕರ್ಣಿ ‘ಅನಾದಿ ಯೋಗ್ಯತಾ’ ಕುರಿತು ಮಾತನಾಡಿ, ‘ಮಧ್ವ ಮತದ ದಲ್ಲಿ ಪ್ರತಿ ಒಬ್ಬ ಜೀವ ತನ್ನದೇ ಆದ ಅನಾದಿಯಾದ ಯೋಗ್ಯತೆ ಹೊಂದಿದೆ. ಜೀವರು ಅನಂತ ಇದ್ದಾರೆ. ಈ ವಿಷಯದ ಮೇಲೆ ಇತರರ ನಿಲುವನ್ನು ವಿಮರ್ಶೆ ಮಾಡಿ ಮಧ್ವಾಚಾರ್ಯರ ನಿಲುವನ್ನು ಅನೇಕ ಪ್ರಮಾಣಗಳ ಹಿನ್ನೆಲೆಯಲ್ಲಿ ಸಾಧಿಸಿ ತೋರಿಸಿದವರು ಜಯತೀರ್ಥರು’ ಎಂದರು.
ನಾಲ್ಕನೇ ವಿದ್ಯಾರ್ಥಿ ಸತ್ಯಪ್ರಮೋದ ಕಟ್ಟಿ ‘ಭೇದವು ಧರ್ಮಿ ಸ್ವರೂಪವು’ ಕುರಿತು ಮಾತನಾಡಿ, ‘ಒಂದು ವಸ್ತುವಿನ ಜ್ಞಾನ ಆಗಬೇಕಾದರೆ ಆ ವಸ್ತು ಇತರ ಎಲ್ಲ ವಸ್ತುಗಳಿಗಿಂತ ಬೇರೆ (ಭೇದ) ಎಂದೇ ಆಗಬೇಕು.
ಇಲ್ಲದಿದ್ದರೆ ಭ್ರಮೆ ಉಂಟಾಗುತ್ತದೆ. ಇದು ನಮ್ಮ ನಿತ್ಯದ ಅನುಭವ. ಜಗತ್ತಿನಲ್ಲಿ ಭೇದವೇ ಇಲ್ಲ ಎಂದು ಹೇಳಿದವರು ಇದ್ದಾರೆ.
ಅವರ ಹೇಳಿಕೆ ಅವೈಜ್ಞಾನಿಕ ಅನುಭವ ವಿರುದ್ಧ ಮತ್ತು ಅಪ್ರಾಮಾಣಿಕ ಎಂದು ಇಲ್ಲಿ ತೋರಿಸಲಾಗಿದೆ.
ಈ ಭೇದ ಎನ್ನುವುದು ವಸ್ತು ವಿನ ಸ್ವರೂಪ ವೇ ಆಗಿದೆ’ ಎಂದರು. “ಪ್ರಮಾಣ ದ ಲಕ್ಷಣ” ಕುರಿತು ಮಾತನಾಡಿದ ಐದನೇ ವಿದ್ಯಾರ್ಥಿ ಪವನ ಜಾಗೀರ್ದಾರ, ‘ಯಾವುದೇ ವಸ್ತುವನ್ನು ವಿಷಯವನ್ನು ಸರಿಯಾಗಿ ತಿಳಿಯಬೇಕಾದರೆ ಅದಕ್ಕೆ ನಿರ್ದುಷ್ಟ ಪ್ರಮಾಣ ಗಳ ಆವಶ್ಯಕತೆ ಇದೆ. ಆ ನಿರ್ದುಷ್ಟ ಪ್ರಮಾಣಗಳು ಅಪೌರುಷೇಯವಾದ ವೇದಗಳು ಮತ್ತು ವೇದಾನುಸಾರೀಯಾದ ಗ್ರಂಥಗಳೆAದು ಸಿದ್ಧ ಮಾಡಿ ತೋರಿಸಿದ್ದಾರೆ’ ಎಂದರು.
ಭದ್ರಾಚಲA, ಮೋತಂಪಲ್ಲಿ ಮುತ್ತಿಗಿ, ಶೂರ್ಪಾಲಯ, ಯಲಗೂರ ಮುಂತಾದ ಕ್ಷೇತ್ರಗಳಿಂದ ಪ್ರಧಾನ ಅರ್ಚಕರು ಕ್ಷೇತ್ರ ಮೂರ್ತಿಗಳ ಪ್ರಸಾದವನ್ನು ಸತ್ಯಾತ್ಮತೀರ್ಥ ಶ್ರೀಪಾದಂಗಳವರಿಗೆ ಸಮರ್ಪಿಸಲಾಯಿತು.

LEAVE A REPLY

Please enter your comment!
Please enter your name here