ಕಲಬುರಗಿ ಪತ್ರಕರ್ತರ ಸಂಘಕ್ಕೆ ತುರುಸಿನ ಚುನಾವಣೆ: 25 ಸ್ಥಾನಗಳಿಗೆ 63 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

0
1103

ಕಲಬುರಗಿ, ಫೆ. 14: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕಕ್ಕೆ 2022-25ನೇ ಮೂರು ವರ್ಷಗಳ ಅವಧಿಗಾಗಿ ನಡೆಯಲಿರುವ ಚುನಾವಣೆಯಲ್ಲಿ ಪದಾಧಿಕಾರಿಗಳು ಸೇರಿದಂತೆ ಒಟ್ಟು 63 ಜನ ಅಭ್ಯರ್ಥಿಗಳು ನಾಮಪತ್ರಗಳನ್ನು ಸಲ್ಲಿಸಿದ್ದಾರೆ.
ತೀವ್ರ ಕುತೂಹಲ ಕೆರಳಿಸಿರುವ ಈ ಚುನಾವಣೆಯಲ್ಲಿ ಇಷ್ಟು ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದ್ದು ಇದೇ ಮೊದಲಾಗಿದೆ.
ಅಧ್ಯಕ್ಷ ಸ್ಥಾನಕ್ಕೆ ಒಟ್ಟು 6 ಅಭ್ಯರ್ಥಿಗಳು, ಉಪಾಧ್ಯಕ್ಷ ಸ್ಥಾನಕ್ಕೆ 6, ಪ್ರಧಾನ ಕಾರ್ಯದರ್ಶಿ ಹುದ್ದೆಗೆ 3, ಕಾಂiÀiðದರ್ಶಿ ಸ್ಥಾನಕ್ಕೆ 8 ಮತ್ತು ಜಿಲ್ಲಾ ಕಾರ್ಯಕಾರಿಣಿ ಸಮಿತಿ ಸದಸ್ಯ ಸ್ಥಾನಗಳಿಗೆ 34 ಜನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇನ್ನು ರಾಜ್ಯ ಕರ‍್ಯಕಾರಿಣಿ ಸ್ಥಾನಕ್ಕೆ 06 ಜನ ಅಭ್ಯರ್ಥಿಗಳು ಅಂತಿಮವಾಗಿ ನಾಮಪತ್ರ ಸಲ್ಲಿಸಿದ್ದಾರೆ.
ಚುನಾವಣೆ ಇದೇ ತಿಂಗಳು 27ರಂದು ನಡೆಯಲಿದ್ದು, ನಾಮಪತ್ರ ಸಲ್ಲಿಕೆಗೆ ಇಂದು ಕೊನೆಯ ದಿನವಾಗಿತ್ತು. ಕೊನೆಯ ದಿನವಾದ ಇಂದು 37 ಜನ ನಾಮಪತ್ರ ಸಲ್ಲಿಸಿದ್ದು, ಒಟ್ಟಾರೆಯಾಗಿ 63 ನಾಮಪತ್ರ ಸಲ್ಲಿಸಿದ್ದಾರೆ. ನಾಮಪತ್ರ ಸಲ್ಲಿಕೆ ಫೆಬ್ರುವರಿ 11 ರಿಂದ ಆರಂಭವಾಗಿತ್ತು.
ಜಿಲ್ಲಾಧ್ಯಕ್ಷ ಒಂದು ಸ್ಥಾನ, ಉಪಾಧ್ಯಕ್ಷ 03 ಸ್ಥಾನ, ಪ್ರಧಾನ ಕಾರ್ಯದರ್ಶಿ 01 ಸ್ಥಾನ, ಕಾರ್ಯದರ್ಶಿ 03 ಸ್ಥಾನ, ಖಜಾಂಚಿ 01, ರಾಜ್ಯ ಕರ‍್ಯಕಾರಿಣಿ 01 ಸ್ಥಾನ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸ್ಥಾನ 15 ಸ್ಥಾನಗಳಿಗೆ ಚುನಾವಣೆ ನಡೆಯಬೇಕಿದೆ.
ಸಲ್ಲಿಸಿದ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಫೆ. 19 ಕೊನೆಯ ದಿನವಾಗಿದ್ದು, ಅಂದು ಮಧ್ಯಾಹ್ನ 3 ಗಂಟೆಯ ನಂತರ ಅಂತಿಮ ಪಟ್ಟಿ ಪ್ರಕಟವಾಗಲಿದೆ.
ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಶಾಮಕುಮಾರ ಶಿಂಧೆ, ಶಿವರಂಜನ್ ಸತ್ಯಂಪೇಟೆ, ರಾಜು ದೇಶಮುಖ, ಬಾಬುರಾವ ಯಡ್ರಾಮಿ, ದೇವೀಂದ್ರಪ್ಪ ಅವಂಟಿ ಹಾಗೂ ಹಣಮಂತರಾವ ಭೈರಾಮಡಗಿ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ಸುರೇಶಕುಮಾರ, ಗುರುಬಸಪ್ಪ ಸಜ್ಜನಶೆಟ್ಟಿ, ದೇವೇಂದ್ರಪ್ಪ ಅವಂಟಿ, ರಮೇಶ ಖಮೀತಕರ್, ರಾಮಕೃಷ್ಣ ಬಡಶೇಷಿ, ಮೊಹಮ್ಮದ ಮುಕ್ತಾರೋದ್ದೀನ್ ಅವರುಗಳು ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳಾಗಿದ್ದಾರೆ.
ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶಾಮಕುಮಾರ ಶಿಂಧೆ, ಸಂಗಮನಾಥ ರೇವತಗಾಂವ, ಶಿವರಂಜನ್ ಸತ್ಯಂಪೇಟೆ ಅವರುಗಳು ನಾಮಪತ್ರವನ್ನು ಸಲ್ಲಿಸಿದ್ದಾರೆ.
ಜಿಲ್ಲಾ ಕಾರ್ಯದರ್ಶಿ ಸ್ಥಾನಕ್ಕೆ ಸಂಗಮನಾಥ ರೇವತಗಾಂವ, ಮಲ್ಲಿಕಾರ್ಜುನ ಜೋಗ, ಅರುಣ ಕದಮ್, ಸುರೇಶಕುಮಾರ, ಮಲ್ಲಿಕಾರ್ಜುನ ನೈಕೋಡಿ, ವಿರೇಂದ್ರ ಕೊಲ್ಲೂರ, ಶ್ರೀಮತಿ ಭೀಮಬಾಯಿ ದೇಶಮುಖ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ. ಖಜಾಂಚಿ ಸ್ಥಾನಕ್ಕೆ ರಾಜು ದೇಶಮುಖ ಮತ್ತು ಅಶೋಕ ಕಪನೂರ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.
ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ಥಾನಕ್ಕೆ ಅವಿನಾಶ ದೊಡ್ಡಮನಿ, ಮಂಜುನಾಥ ಹಿರೋಳ್ಳಿ, ವಿಜೇಂದ್ರ ಕೋಡ್ಲಾ, ಅಶೋಕ ಕಲ್ಲೂರ, ರವೀಂದ್ರ ವಕೀಲ, ಬಾಬುರಾವ ಕೋಬಾಳ, ರಾಜು ಕೋಷ್ಟಿ, ಚಂದ್ರಶೇಖರ ಕೌಲಗಾ, ಅನೀಲ ಸ್ವಾಮಿ, ಶಿವಕುಮಾರ ನಿಡಗುಂದಾ, ಬಸವರಾಜ ಹಡಪದ, ಅರುಣ ಕದಮ್, ಭೀಮಪ್ಪ ಮರಕಲ, ವಾಸುದೇವ ಚವ್ಹಾಣ, ಸಂತೋಷÀ ನಾಡಗಿರಿ, ಮಲ್ಲಿಕಾರ್ಜುನ ನೈಕೋಡಿ, ರಾಜಕುಮಾರ ಬಿ. ಉದನೂರ, ರಮೇಶ ಖಮೀತಕರ್, ಸುಭಾಷ ಬಣಗಾರ, ಶಿವರಂಜನ್ ಸತ್ಯಂಪೇಟ್, ಹಣಮಂತರಾವ ಭೈರಾಮಡಗಿ ನಾಮಪತ್ರ ಸಲ್ಲಿಸಿದ್ದಾರೆ.
ಇನ್ನು ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸ್ಥಾನಗಳಿಗೆ ಅನೀಲಕುಮಾರ ಶಿಂಧೆ, ಸುರೇಶಕುಮಾರ, ಮಹಾದೇವಪ್ಪ ಗೋಳಾ, ಭೀಮಾಶಂಕರ್ ಫಿರೋಜಾಬಾದ, ರಾಜಕುಮಾರ ಬಿ. ಉದನೂರ, ಬಿ. ವ್ಹಿ. ಚಕ್ರವರ್ತಿ, ಬೌದ್ಧಪ್ರೀಯ ನಾಗಶೇನ, ಮಲ್ಲಿಕಾರ್ಜುನ ಮಾಡಬೂಳಕರ್, ಸತೀಶಕುಮಾರ, ಭೀಮಬಾಯಿ ದೇಶಮುಖ, ವೀರುಪಾಕ್ಷ ಚಿನಗುಡಿ, ಕೃಷ್ಣ ಕುಲಕರ್ಣಿ, ಜಯತೀರ್ಥ ಪಾಟೀಲ, ನಾಗರಾಜ ಗದ್ದಿ, ಪ್ರಕಾ ಜಂಗಲೆ, ಎಂಡಿ ಸಲೀಮುದ್ದೀನ್, ಮುಜೀಬ್ ಅಲಿಖಾನ್, ಮೊಹ್ಮದ ಮುಕ್ತಾರೋದ್ದೀನ್ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾ ಪತ್ರಕರ್ತರ ಸಂಘದ ಚುನಾವಣಾಧಿಕಾರಿಗಳಾದ ಶಿವಶರಣಪ್ಪ ಬನ್ನಿಕಟ್ಟಿ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here