ಜೈ ಕನ್ನಡಿಗರ ರಕ್ಷಣಾ ವೇದಿಕೆಯಿಂದ ಬುಧುವಾರ ವಿವೇಕಾನಂದರ ಜನ್ಮದಿನಾಚರಣೆ

0
574

ಕಲಬುರಗಿ, ಜ. 11: ಸ್ವಾಮಿ ವಿವೇಕಾನಂದರು ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ತ್ವಜ್ಞಾನಿಗಳಲ್ಲಿ ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿರುವ ಅವರ 159ನೇ ಜನ್ಮ ದಿನಾಚರಣೆ ನಾಳೆ (ಬುಧುವಾರ) ನಗರದ ವಿಶ್ವನಾಥರೆಡ್ಡಿ ಮುದ್ನಾಳ ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಲಾಗಿದೆ.
ಜೈ ಕನ್ನಡಿಗರ ರಕ್ಷಣಾ ವೇದಿಕೆಯವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಸುಮಾರು 10ಕ್ಕೂ ಹೆಚ್ಚು ಜನರಿಗೆ ಯುವರತ್ನ ಪ್ರಶಸ್ತಿಯನ್ನು ಸಹ ನೀಡಲಾಗುತ್ತಿದೆ.
ಪದವಿಮಹಾವಿದ್ಯಾಲದಯಲ್ಲಿ ನಾಳೆ ಬೆಳಿಗ್ಗೆ 11 ಗಂಟೆಗೆ ನಡೆಯುವ ಈ ಕಾರ್ಯಕ್ರಮದ ಗುಲಬಗಾ ವಿವಿ ಕುಲಪತಿಗಳಾದ ಪ್ರೋ ದಯಾನಂದ ಅಗಸರ ಅವರು ಉದ್ಘಾಟಿಸಲಿದ್ದು, ಚಿತ್ತಾಪೂರದ ಕಂಬಳೇಶ್ವರಮಠದ ಪೂಜ್ಯಶ್ರೀ ವೀರಸೋಮೇಶ್ವರ ಶಿವಾಚಾರ್ಯರು ಸಾನಿಧ್ಯ ವಹಿಸಲಿದ್ದಾರೆ.
ಕಾರ್ಯಕ್ರದಮ ಅಧ್ಯಕ್ಷತೆಯನ್ನು ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಸಚಿನ ಪರತಾಬಾದ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕಾಂಗ್ರೆಸ್ ಪಕ್ಷದ ಧುರೀಣರಾದ ನೀಲಕಂಠರಾವ ಮೂಲಗೆ, ಮನೀಷ ಪತ್ರಿಕೆ ಸಂಪಾದಕರಾದ ರಾಜು ದೇಶಮುಖ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಸುರೇಶ ಬಡಿಗೇರ, ಕಾಮತ್ ಹೊಟೆಲ್ ಮಾಲೀಕರಾದ ವಿನಯರಾವ ಆಗಮಿಸಲಿಸ ಲಿದ್ದಾರೆ.
ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರ ಕುರಿತು ಖ್ಯಾತ ವಿಮರ್ಶಕರು ಹಾಗೂ ವಿಶ್ರಾಂತ ಪ್ರಾಚಾರ್ಯರಾದ ಡಾ. ಶ್ರೀಶೈಲ್ ನಾಗರಾಳ ಅವರು ಅವರು ಉಪನಸ್ಯಾಸ ನೀಡಲಿದ್ದಾರೆ.

LEAVE A REPLY

Please enter your comment!
Please enter your name here