ಕಲಬುರಗಿ, ಡಿ. 12: ಚಿಂಚೋಳಿ ತಾಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ತಡರಾತ್ರಿ ಹಾಗೂ ಇಂದು ನಸುಕಿನ ಜಾವ ಲಘುನವಾದ ಬಗ್ಗೆ ವರದಿಯಾಗಿದೆ.
ಚಿಂಚೋಳಿ ತಾಲೂಕಿನ ಗಡಿಕೇಶ್ವರ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಳೆದ 9 ವರ್ಷಗಳಿಂದ ಭೂಮಿಯಿಂದ ವಿಚಿತ್ರ ಭಯಾನಕ ಸದ್ದು ಕೇಳಿಬರುತ್ತಿತ್ತು, ಇತ್ತೀಚೆಗೆ ಕಳೆದ ಮೂರು ತಿಂಗಳಿAದ ಈ ಸದ್ದು ಹೆಚ್ಚಾಗಿದ್ದರಿಂದ ಈ ಗ್ರಾಮಗಳಿಗೆ ಭೂವಿಜ್ಞಾನಿಗಳ ತಂಡ ಭೇಟಿ ನೀಡಿ, ಪರಿಶೀಲನೆ ನಡೆಸಿತ್ತು. ಈ ಗ್ರಾಮಗಳಲಲ್ಲಿ ಹೆಚ್ಚು ಮಳೆಯಾದಾಗ ಭೂಮಿಯಿಂದ ಸದ್ದು ಬರುವ ಬಗ್ಗೆ ವರದಿ ನೀಡಿತ್ತು.
ಸುಮಾರು 20 ದಿನಗಳಿಂದ ಯಾವುದೇ ಸದ್ದು ಕೇಳಿ ಬಂದಿರಲಿಲ್ಲ, ಆದರೆ ಇದೀಗ ಮತ್ತೆ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರಿ ಪ್ರಮಾಣದ ಸದ್ದು ಬಂದಿರುವುದು ಮತ್ತೆ ಇದು ಪದೇ ಪದೇ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯ ಕಂಪನ ಉಂಟಾಗುತ್ತಿದ್ದು, ಜನರು ಈಗಾಗಲೇ ಗ್ರಾಮಗಳಿಂದ ಶೇ. 70 ಜನರು ಬೇರೆಡೆ ನೆಲೆಸಿದ್ದು, ಇನ್ನುಳಿದ ಜನರು ಭಯಭೀತರಾಗಿ ಜೀವ ಕೈಯಲ್ಲಿ ಹಿಡಿದು ಬದುಕವಂತಾಗಿದೆ.