ನಕಲಿ ಸಹಿ ವಿಚಾರ ಸಂಸದರಿಗೆ ಪಂಚ ಪ್ರಶ್ನೆಗಳನ್ನು ಕಳಿಸಿದ ಶಾಸಕ ಪ್ರಿಯಾಂಕ್ ಖರ್ಗೆ

0
953
Q&A: I am not my dad's Achilles' heel, says Priyank Kharge

ಕಲಬುರಗಿ.ನ.10:ಬಂಜಾರ / ಲಂಬಾಣಿ ಸಮೂದಾಯವನ್ನು ಎಸ್‌ಟಿಗೆ ಸೇರಿಸಬೇಕೆಂದು ಪ್ರಧಾನಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಮಾಡಿರುವ ಆರಾಧ್ಯ ದೈವ ಶ್ರೀ ರಾಮರಾವ್ ಮಹಾರಾಜರ ಸಹಿ ನಕಲಿಯಾಗಿದೆ. ಒಂದು ವೇಳೆ ಆ ಸಹಿ ರಾಮರಾಮ್ ಮಹಾರಾಜರದ್ದೆ ಎಂದು ಸಾಬೀತುಪಡಿಸಿದರೆ ಸಂಸದರಾದ ಉಮೇಶ್ ಜಾಧವ್ ಅವರು ರಾಜೀನಾಮೆ ನೀಡುವುದಾಗಿ ಹೇಳಿರುವ ಹೇಳಿಕೆಗೆ ತೀಕ್ಷ್ಣವಾದ ಪ್ರತ್ತ್ಯುತ್ತರ ನೀಡಿರುವ ಕೆಪಿಸಿಸಿ ವಕ್ತಾರರಾದ ಹಾಗೂ ಶಾಸಕರದ ಪ್ರಿಯಾಂಕ್ ಖರ್ಗೆ ಅವರು ಐದು (ಪಂಚ) ಪ್ರಶ್ನೆ ಕೇಳುವ ಮೂಲಕ ಟಾಂಗ್ ನೀಡಿದ್ದಾರೆ.
ತಮ್ಮಟ್ವಿಟ್ ಖಾತೆಯಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು ತಮ್ಮ ಐದು ಪ್ರಶ್ನೆಗಳಿಗೆ ಉತ್ತರಿಸುವಂತೆ ಆಗ್ರಹಿಸಿದ್ದಾರೆ.

  1. ಇಷ್ಟು ದಿನಗಳ ಕಾಲ ನಕಲಿ ಸಹಿ ವಿಚಾರವಾಗಿ ತುಟಿಬಿಚ್ಚಿಲ್ಲ ಏಕೆ?
  2. ನಕಲಿ ಸಹಿ ಮಾಡಿದವರು ಯಾರು ? ಮತ್ತು ಅವರ ಉದ್ದೇಶವೇನು?
  3. ನಕಲಿ ಎಂದು ತಿಳಿದಿದ್ದರೂ ಆ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಸಲ್ಲಿಸಿದ್ದೂ ಯಾಕೆ?.
  4. ಪ್ರಧಾನಿಯನ್ನೇ ವಂಚಿಸಲು ಉದ್ದೇಶವೇನಿತ್ತು ?
  5. ನೀವು ಮಹಾರಾಜರ ಒಳ್ಳೆತನವನ್ನು ದುರುಪಯೋಗಪಡಿಸಿಕೊಂಡಿದ್ದೀರಾ?
    ಹೀಗೆ ಐದು ಪಶ್ನೆ ಕೇಳುವ ಮೂಲಕ ಕಲಬುರಗಿ ಸಂಸದರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ.

LEAVE A REPLY

Please enter your comment!
Please enter your name here