ಎಂಎಲ್ಸಿ ಚುನಾವಣೆ ಕಲಬುರಗಿ-ಯಾದಗಿರಿ ಜಿಲ್ಲೆಗಳಲ್ಲಿ ಶೇ. 99.73 ಪ್ರತಿಶತ ಮತದಾನ

0
918

ಕಲಬುರಗಿ, ಡಿ. 10: ಕಲಬುರಗಿ-ಯಾದಗಿರಿ ಸ್ಥಳೀಯ ಸಂಸ್ಥೆಗಳಿAದ ನಡೆದ ವಿಧಾನ ಪರಿಷತ್ ಸದಸ್ಯ ಸ್ಥಾನದ ಚುನಾವಣೆಯಲ್ಲಿ ಇಂದು ಶೇ. 99.73ರಷ್ಟು ಮತದಾನವಾಗಿದೆ.
ಇಂದು ಮುಂಜಾನೆ 8 ಗಂಟೆಯಿAದ ನಡೆದ ಮತದಾನವು ಎಲ್ಲಡೆ ಬಹುತೇಕವಾಗಿ ಮಧ್ಯಾಹ್ನವೇ ಪೂರ್ಣಗೊಂಡಿತ್ತು, ಅಂತಿಮವಾಗಿ ಸಂಜೆರ ಬಳಿಕ ಅಂಕಿ ಅಂಶಗಳ ಪ್ರಕಾರ ಒಟ್ಟು 7088 ಮತದಾರರ ಪೈಕಿ 7070 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಕಲಬುರಗಿ ಮಹಾನಗರಪಾಲಿಕೆಯ 55 ಸದಸ್ಯರು ಸೇರಿದಂತೆ ಎಂಪಿ, ಎಂಎಲ್‌ಎ, ವಿಧಾನ ಪರಷತ್ ಸದಸ್ಯರು ಸೇರಿದಂತೆ ಒಟ್ಟು 63 ಮತದಾರರಲ್ಲಿ 62 ಜನರು ಮತವನ್ನು ಚಲಾಯಿಸಿದ್ದಾರೆ. ಇಲ್ಲಿ ಶೇ. 98.41.
ಚಿತ್ತಾಪೂರ, ಜೇವರ್ಗಿ ಮತ್ತು ಕಮಲಾಪೂರ ತಾಲೂಕುಗಳಲ್ಲಿ ಶೇ. ನೂರಕ್ಕೆ ನೂರಷ್ಟು ಮತದಾನವಾಗಿದೆ.
ಎರಡು ಜಿಲ್ಲೆಗಳ ತಾಲೂಕವಾರು ಮತದಾನದ ವಿವರ ಇಂತಿದೆ:
ಅಫಜಲಪುರ ತಾಲೂಕಿನಲ್ಲಿ ಒಟ್ಟು 521 ಮತದಾರರ ಪೈಕಿ 520 ಮತದಾನವಾಗಿದ್ದು, ಇಲ್ಲಿ ಶೇ. 99.81ರಷ್ಟು ಮತದಾನವಾಗಿದೆ.
ಆಳಂದ 718 ಮತದಾರರ ಪೈಕಿ 716 ಜನರು ಮತಚಲಾಯಿಸಿದ್ದು 99.72ರಷ್ಟು ಮತದಾನ, ಕಮಲಾಪೂರ ತಾಲೂಕಿನಲ್ಲಿ 288ರ 288 ಜನರು ಮತದಾನ ಮಾಡಿದ್ದು, ಇಲ್ಲಿ ಶೇ. 100ಕ್ಕೆ ನೂರಷ್ಟು ಮತದಾನವಾಗಿದೆ.
ಚಿಂಚೋಳಿ ತಾಲೂಕಿನಲ್ಲಿ 477 ಮತದಾರರಲ್ಲಿ 476 ಮತದಾನವಾಗಿದ್ದು, ಶೇ. 99.79.
ಕಾಳಗಿ ತಾಲೂಕಿನಲ್ಲಿ 266ರ ಪೈಕಿ 265 ಮತದಾರರು ಮತಚಲಾಯಿಸಿದ್ದು, ಶೇ. 99.62ರಷ್ಟು ಮತದಾನವಾಗಿದೆ.
ಸೇಡಂ ತಾಲೂಕನಲ್ಲಿ 479 ಜನರು ಮತದಾನ ಮಾಡಿದ್ದು, ಇಲ್ಲಿ ಶೇ. 99.79 ಮತದಾನವಾಗಿದೆ.
ಚಿತ್ತಾಪೂರ ತಾಲೂಕಿನಲ್ಲಿ ಕೂಡ ಶೇ. 100ಕ್ಕೆ ನೂರಷ್ಟು ಮತದಾನವಾಗಿದೆ. ಇಲ್ಲಿ 479 ಮತದಾರರಿದ್ದರು.
ಕಲಬುರಗಿ ತಾಲೂಕಿನಲ್ಲಿ ಶೇ. 99.81 ಮತದಾನವಾಗಿದೆ. ಇಲ್ಲಿ 519 ಸದಸ್ಯರು ಮತಚಲಾಯಿಸಿದ್ದಾರೆ. ಕೇವಲ ಒಬ್ಬ ಸದಸ್ಯ ಮಾತ್ರ ಮತ ಚಲಾಯಿಸಿಲ್ಲ.
ಶಹಾಬಾದ ತಾಲೂಕಿನಲ್ಲಿ 99.18ರಷ್ಟು ಮತದಾನವಾಗಿದೆ. 121 ಜನ ಸದಸ್ಯರು ಮತದಾನ ಮಾಡಿದ್ದಾರೆ.
ಜೇವರ್ಗಿ ತಾಲೂಕಿನಲ್ಲಿ ಕೂಡ ಶೇ. 100ಕ್ಕೆ ನೂರರಷ್ಟು ಮತದಾನವಾಗಿದೆ. 420 ಸದಸ್ಯರು ಎಲ್ಲರೂ ಮತದಾನ ಮಾಡಿದ್ದಾರೆ.
ಯಡ್ಡಾಮಿ ತಾಲೂಕಿನಲ್ಲಿ 274 ಸದಸ್ಯರು ಮತದಾನ ಮಾಡಿದ್ದು, ಶೇ. 99.28ರಷ್ಟು ಮತದಾನವಾಗಿದೆ.
ಯಾದಗಿರಿ ಜಿಲ್ಲೆಯ ಗುರಮಿಟಕಲ್ ಶೇ. 99.42ರಷ್ಟು ಮತದಾನವನ್ನು 342 ಸದಸ್ಯರು ಮಾಡಿದಂತಾಗಿದೆ.
ಯಾದಗಿರಿ ತಾಲೂಕ ಶೇ. 99.81ರಷ್ಟು ಮತದಾನ, 492 ಸದಸ್ಯರು ಮತದಾನ ಮಾಡಿದ್ದಾರೆ.
ವಡಗೇರಾ ತಾಲೂಕಿನಲ್ಲಿ ಕೂಡ ನೂರನಕ್ಕೆ ನೂರಷ್ಟು ಮತದಾನವಾಗಿದೆ. ಇಲ್ಲಿ ಎಲ್ಲ 282 ಸದಸ್ಯರು ಮತದಾನ ಮಾಡಿದ್ದಾರೆ.
ಶಹಾಪೂರ ತಾಲೂಕಿನಲ್ಲಿ 532 ಮತದಾರರ ಪೈಕಿ 530 ಜನ ಮತದಾರರು ಮತಚಲಾಯಿಸಿದ್ದಾರೆ. ಇಲ್ಲಿ ಶೇ. 99.62ರಷ್ಟು ಮತದಾನವಾಗಿದೆ.
ಸುರಪುರ ತಾಲೂಕಿನಲ್ಲಿ 438 ಜನರು ಮತಚಲಾಯಿಸಿದ್ದು, 99.62ರಷ್ಟಿ ಮತದಾನವಾಗಿದೆ.
ಹುಣಸಗಿ ತಾಲೂಕಿನಲ್ಲಿ ಕೂಡ 99.73 ಮತದಾನವಾಗಿದ್ದು. ಇಲ್ಲಿ 438 ಜನ ಮತದಾರರು ಮತಚಲಾಯಿಸಿದ್ದಾರೆ.

LEAVE A REPLY

Please enter your comment!
Please enter your name here