2022ರ ಜನವರಿ 2 ಮತ್ತು 3ರಂದು ಕಲಬುರಗಿಯಲ್ಲಿ 36ನೇ ಪತ್ರಕರ್ತರ ರಾಜ್ಯ ಸಮ್ಮೇಳನ

0
696

ಕಲಬುರಗಿ, ಡಿ. 10: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 36ನೇ ರಾಜ್ಯ ಸಮ್ಮೇಳನ ಮುಂದಿನ ತಿಂಗಳು 2022ರ ಜನವರಿ 2 ಮತ್ತು 3ರಂದು ಕಲಬುರಗಿ ನಗರದ ಪೂಜ್ಯ ಬಸವರಾಜಪ್ಪ ಅಪ್ಪ ಸ್ಮಾರಕ ಭವನದಲ್ಲಿ ನಡೆಯಲಿದೆ.
ಕಳೆದ ತಿಂಗಳು ನಡೆಯಬೇಕಾಗಿ ಈ ಸಮ್ಮೇಳನ ಕಾರಣಾಂತರಗಳಿAದ ಮುಂದೂಟ್ಟಲ್ಪಟ್ಟು ಇಂದು ಮತ್ತೆ ಸಮ್ಮೇಳನವನ್ನು ಜನೆವರಿಯಲ್ಲಿ ನಡೆಸಲು ತೀರ್ಮಾನಿಸಲಾಯಿತು.
ಜನವರಿ 2ರಂದು ಈ ಸಮ್ಮೇಳನದ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನೆರವೇರಿಸಲಿದ್ದು, ಸಮಾರೋಪ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಲಿದ್ದಾರೆ.
ಉಳಿದಂತೆ ಉದ್ಘಾಟನಾ ಸಮಾರಂಭದಕ್ಕೆ 36ನೇ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾದ ಸಚಿವ ಮುರುಗೇಶ ನಿರಾಣಿ ಸೇರಿದಂತೆ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್ ಸದಸ್ಯರು, ರಾಜಕೀಯ ಮುಖಂಡರುಗಳು ಸೇರಿದಂತೆ ಹಲವಾರು ಗಣ್ಯರು ಆಗಮಿಸಲಿದ್ದಾರೆ.
ಕಳೆದ ಎರಡು ವರ್ಷಗಳ ಹಿಂದೆ ಮಂಗಳೂರಿನಲ್ಲಿ ಪತ್ರಕರ್ತರ ಸಂಘದ 35ನೇ ಸಮ್ಮೇಳನದ ಸಂದರ್ಭದಲ್ಲಿ 36ನೇ ಸಮ್ಮೇಳನ ಕಲಬುರಗಿಯಲ್ಲಿ ನಡೆಸುವ ಬಗ್ಗೆ ಸರ್ವ ಸದಸ್ಯರ ಸಭೆಯಲ್ಲಿ ಘೋಷಿಸಲಾಗಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಸಮ್ಮೇಳನ ಮುಂದೂಡಿ ಇದೀಗ ಮುಹೂರ್ತ ಫಿಕ್ಸ್ ಆಗಿ, ಜನವರಿಯಲ್ಲಿ ನಡೆಯಲಿದೆ.
ಈ ಸಮ್ಮೇಳನದ ಕುರಿತಾಗಿ ಪೂರ್ವಭಾವಿ ಸಿದ್ಧತೆಗಳ ಬಗ್ಗೆ ಚರ್ಚಿಸಲು ಮತ್ತು ಸಮ್ಮೇಳನ ಹೇಗೆ ನಡೆಯಬೇಕು ಎಂಬುದುರ ಬಗ್ಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರಾದ ಶಿವಾನಂದ ತಗಡೂರ ಅವರು ಕಲಬುರಗಿಗೆ ಈಗಾಗಲೇ ಎರಡು ಬಾರಿ ಆಗಮಿಸಿ, ಸಲಹೆ, ಸೂಚನೆಗಳನ್ನು ನೀಡಿದ್ದಾರೆ.
ಸಮ್ಮೇಳನ ಕುರಿತಂತೆ ಸ್ವಾಗತಿ ಸಮಿತಿಯೊಂದಿಗೆ ಸುಮಾರು 20 ಉಪ ಸಮಿತಿಗಳನ್ನು ಕೂಡ ಈಗಾಗಲೇ ರಚಿಸಿ ಕಾರ್ಯರೂಪಕ್ಕೆ ತರಲಾಗುತ್ತಿದೆ.
ಮುಖ್ಯವಾಗಿ ಸಮ್ಮೇಳನದಂಗವಾಗಿ ಪತ್ರಕರ್ತ ಎಂಬ ಸುಮಾರು 200 ಪುಟಗಳ ಬಹುವರ್ಣಗಳ ಸ್ಮರಣ ಸಂಚಿಕೆ ಕೂಡ ಸಮ್ಮೇಳನದ ನೆನಪಿಗಾಗಿ ಹೊರತರಲಾಗುತ್ತಿದೆ.

LEAVE A REPLY

Please enter your comment!
Please enter your name here