ಬೆಂಗಳೂರು, ಡಿ.5- ಬೆಂಗಳೂರಿನಲ್ಲಿ ದಿನೇ ದಿನೇ ಕೋವಿಡ್ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿರುವ ಹಿನ್ನೆಲೆ ಹಾಗೂ ಇತ್ತಿಚೆಗೆ ದಕ್ಷಿಣ ಆಪ್ರಿಕಾದ ಪ್ರಜೆಗಳಿಬ್ಬರಿಗೆ ಓಮಿಕ್ರಾನ್ ಸೊಂಕು ಹಿನ್ನೆಲೆಯಲ್ಲಿ ಪ್ರಾಥಮಿಕ ಹಂತದಲ್ಲಿ ’ನೈಟ್ ಕರ್ಫ್ಯೂ’ ಜಾರಿಗೆ ಬಿಬಿಎಂಪಿ ಗಂಭೀರವಾಗಿ ಚಿಂತನೆ ನಡೆಸಿ ಸರಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಕೆ ಮಾಡಲಿದೆ ಎಂದು ಹೇಳಲಾಗಿದೆ.
ನಗರದಲ್ಲಿ ಕಳೆದ ನಾಲ್ಕು ದಿನಗಳಿಂದ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ.ಇದೇ ಅಂಶಗಳನ್ನಿಟ್ಟುಕೊAಡು ಕಠಿಣ ನಿಯಮಗಳ ಜಾರಿಗೆ ಚಿಂತಿಸಿ ಸರಕಾರದ ಗಮನಕ್ಕೆ ತರಲಿದೆ.
ಸಭೆ ಸಮಾರಂಭಗಳಿಗೆ ಜನರ ಮಿತಿ ನಿಗದಿ ಮಾಡುವುದು ಮತ್ತು 2 ಡೋಸ್ ಲಸಿಕೆ ಕಡ್ಡಾಯ ಮಾಡಲು ಸರ್ಕಾರಕ್ಕೆ ಇತ್ತೀಚೆಗೆ ಬಿಬಿಎಂಪಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಸರ್ಕಾರ ಒಪ್ಪಿದೆ.
ಇದೀಗ, ಕೋವಿಡ್ ಪ್ರಕರಣ ಸಂಖ್ಯೆ ಹೆಚ್ಚಾಗುತ್ತಿ ರುವುದರಿಂದ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಮತ್ತೆ ಪ್ರಸ್ತಾವನೆ ಸಲ್ಲಿಸಲಿದೆ. ಪ್ರಸ್ತಾವನೆಯಲ್ಲಿ ನೈಟ್ ಕರ್ಫ್ಯೂ ಜಾರಿಗೆ ಮನವಿ ಮಾಡಲು ಮುಂದಾಗಿದೆ.
ಇನ್ನೂ, ಮಾಲ್, ಚಿತ್ರಮಂದಿರ, ಕಲ್ಯಾಣ ಮಂಟಪ, ರೆಸ್ಟೋರೆಂಟ್, ಹೋಟೆಲ್ ಗಳಲ್ಲಿ ಶೇ.50ರಷ್ಟು ಜನರಿಗೆ ಮಾತ್ರ ಪ್ರವೇಶ ನೀಡುವಂತೆ ಬಿಬಿಎಂಪಿ ತನ್ನ ಪ್ರಸ್ತಾವನೆಯಲ್ಲಿ ಉಲ್ಲೇಖಿಸುವ ಸಾಧ್ಯತೆ ಹೆಚ್ಚಿದೆ.
ಎಷ್ಟು ಏರಿಕೆ: ನವೆಂಬರ್ ತಿಂಗಳಲ್ಲಿ 160ರ ಆಸುಪಾಸಿನಲ್ಲಿದ್ದ ಸೋಂಕಿತರ ಸಂಖ್ಯೆ, ಡಿ. 1ರಂದು 165ಕ್ಕೆ ಏರಿದೆ. ಡಿ.2ಕ್ಕೆ 206, ಡಿ.3ರಂದು 212, ಡಿ.4 ರಂದು 207 ಸೋಂಕಿತರ ಸಂಖ್ಯೆ ಕಂಡುಬAದಿದೆ. ಇಂದು ಕೂಡಾ ಸೋಂಕಿತರ ಸಂಖ್ಯೆ 200 ಗಡಿ ದಾಟುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಮತ್ತೊಂದೆಡೆ, ಹತ್ತು ದಿನದಲ್ಲೇ ಬೆಂಗಳೂರಿನಲ್ಲಿ 286 ಮಕ್ಕಳಿಗೆ ಕೊರೋನಾ ಸೋಂಕು ದೃಢಪಟ್ಟಿದೆ. 19 ವರ್ಷದೊಳಗಿನ 286 ಮಕ್ಕಳಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ 9 ವರ್ಷದೊಳಗಿನ 85 ಮಕ್ಕಳಿಗೆ ಕೊರೋನಾ ಸೋಂಕು ತಗುಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.