ವಿಜಯಪುರ, ಅ. 20: ಬಿಜೆಪಿಯ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರು ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಒಬ್ಬ ಡ್ರಗ್ ಪೆಡ್ಲರ್ ಅನ್ನೋ ಹೇಳಿಕೆ ಬಗ್ಗೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಹೆಚ್. ಡಿ. ದೇವೇಗೌಡ್ರು, ನಾವು ಅವರ ಬಗ್ಗೆ ಟೀಕೆ ಮಾಡುವಷ್ಟು ಶಕ್ತಿಯಿಲ್ಲಾ ಎಂದು ಅವರು ರಾಮಪುರ ಗ್ರಾಮದಲ್ಲಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಗೌಡರು, ಇದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ನಡುವಿನ ಸ್ಪರ್ಧೆಯಾಗಿದೆ, ಇಲ್ಲಿ ಚುನಾವಣೆ ಮುಖ್ಯವಾಗಿಲ್ಲ, ಇವರುಗಳಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಮುಖಂಡರ ನಡುವಿನ ಸ್ಪರ್ಧೆಯಾಗಿ ಏರ್ಪಟ್ಟಿದೆ, ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿ, ವ್ಯಕ್ತಿಗರ ನಿಂದನೆ ಮಾಡುವ ಹವ್ಯಾ ಹಚ್ಚಿಕೊಂಡಿದ್ದಾರೆ ಎಂದರು.
ಇನ್ನು ಕುಮಾರಸ್ವಾಮಿ ವಿರುದ್ಧದ ಬೈಗಮಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಗೌಡರು, ಟ್ವೀಟ್ ಮತ್ತು ಮರುಟ್ವೀಟ್ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತುಂಬಾನೆ ನಡೆಯುತ್ತಿದೆ, ಟ್ವೀಟ್‌ನಿಂದ ಚುನಾವಣೆಯಲ್ಲಾಗಲೀ, ರಾಜಕೀಯದಲ್ಲಾಗಲಿ ಗೆಲ್ಲಲು ಆಗಲ್ಲ, ಅದರಿಂದ ಲಾಭ ಸಿಗುತ್ತೇ ಅಂದ್ರೆ ಎಷ್ಟು ಬೇಕಾದ್ರು ಮಾಡಿಕೊಳ್ಳಲಿ ಅದಕೆಕ ನನ್ನ ಅಭ್ಯಂತರವಿಲ್ಲ ಎಂದರು.
ಎರಡು ಪಕ್ಷಗಳಿಗೆ ಹಣಕಾಸಿನ ಶಕ್ತಿಯಿದೆ, ಈ ರೀತಿ ವ್ಯಯಕ್ತಿಕ ಟೀಕೆಗಳ ಮಾಡಿದ್ರೆ ಲಾಭ ಅಂತ ಅವರು ತಿಳಿದಿದ್ದಾರೆ. ಅವರಿಗೆ ಬುದ್ಧಿ ಹೇಳೋ ಶಕ್ತಿ ನನಗಿಲ್ಲ ಎಂದು ಮಾರ್ಮಿಕವಾಗಿ ನುಡಿದರು.