ಕಲಬುರಗಿ, ಅ. 13: ರಾಜಕೀಯವಾಗಿ ನನ್ನನ್ನು ಕಂಡೆ ಕುಮಾರಸ್ವಾಮಿಗೆ ಭಯ, ಯಾರ ಮೇಲೆ ಭಯ ಇರುತ್ತದೋ ಅವರನ್ನೇ ಟಾರ್ಗೆಟ್ ಮಾಡ್ತಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಯಾವತ್ತೂ ಕುಮಾರಸ್ವಾಮಿಗೆ ಸತ್ಯ ಹೇಳುವುದೇ ಗೊತ್ತಿಲ್ಲ, ಜನರ ಅನುಕಂಪ ಗಿಟ್ಟಿಲು ಆ ರೀತಿ ಹೇಳಿಕೆ ನೀಡ್ತಾರೆ ಎಂದರು.
ಮುAದುವರೆದು ಮಾತನಾಡಿದ ಅವರು ಕುಮಾರಸ್ವಾಮಿ ಕಾಲು ಕರೆದು ಜಗಳ ಮಾಡ್ತಾರೆ, ನಾನು ಅವರ ಬಗ್ಗೆ ಮಾತನಾಡಬಾರದು ಅಂತ ಅಂದುಕೊAಡಿದ್ದೇನೆ, ಹೆದರಿಸೋರನ್ನ, ಬೆದರಿಸೋರನ್ನ ನಾನು ಜೀವನದಲ್ಲಿ ಬಹಳ ನೋಡಿದ್ದೇ, ಇಂದಿನಿAದ ನಾನು ರಾಜಕೀಯ ಬಂದಿಲ್ಲ, ಬರೋಬರಿ ಐವತ್ತು ವರ್ಷದಿಂದ ರಾಜಕೀಯದಲ್ಲಿನೆ, ಕುಮಾರಸ್ವಾಮಿ ಇತ್ತೀಚೆಗಷ್ಟೆ ರಾಜಕೀಯಕ್ಕೆ ಬಂದಿದ್ದಾರೆ. 1996ರ ವರಗೆ ಕುಮಾರಸ್ವಾಮಿ ಎಲ್ಲಿದ್ದರು. ನನ್ನ ಬಗ್ಗೆ ವಿರೋಧ ಪಕ್ಷದ ನಾಯಕರ ಹುದ್ದೆ ಪುಟಗೋಸಿ ಎಂದು ಹೇಳಿದ ಕುಮಾರಸ್ವಾಮಿ, ದೇವೇಗೌಡರು ವಿರೋಧ ಪಕ್ಷದ ನಾಯಕರಾಗಿದ್ದರು, ಹಾಗಾದ್ರೆ ಅದು ಪುಟಗೋಸಿ ಹುದ್ದೇನಾ? ಮುಖ್ಯಮಂತ್ರಿಯಾಗಿದ್ದವರು ಜವಾಬ್ದಾರಿಯಿಂದ ಮಾತನಾಡಬೇಕು ವಿನಃ ಸಂವಿಧಾನಿಕ ಹುದ್ದೆಗಳಿಗೆ ಲಘುವಾಗಿ ಮಾತನಾಡುವುದು ಸರಿಯಲ್ಲ ಮತ್ತು ವ್ಯಯಕ್ತಿಕವಾಗಿ ಮತನಾಡಬಾರದು ಎಂದು ಹೇಳಿದರು.
ಇನ್ನು ಕುಮಾರಸ್ವಾಮಿ ಸರಕಾರ ಬೀಳಿಸೋದಾದ್ರೆ ಮುಖ್ಯಮಂತ್ರಿ ಮಾಡಲು ಒಪ್ಪುತ್ತಿರಲಿಲ್ಲ, ಸಮ್ಮಿಶ್ರ ಸರಕಾರ ಬಿದ್ದು ಹೋಗಿದ್ರೆ ಅದಕ್ಕೆ ಕಾರಣ ನಾವಲ್ಲ, ಕುಮಾರಸ್ವಾಮಿ, ನಮ್ಮ ಪಕ್ಷದಿಂದ ಶಾಸಕರು ಹೋದಂತೆ ಅವರ ಪಕ್ಷದ ಮೂರು ಶಾಸಕರು ಜೆಡಿಎಸ್ ಬಿಟ್ಟು ಹೋದರಲ್ಲ, ಅವರನ್ನು ನಾನು ಕಳುಹಿಸಿದ್ದೇನಾ ಎಂದು ಪ್ರಶ್ನಸಿದ ಅವರು ಕುಮಾರಸ್ವಾಮಿ ಜವಾಬ್ದಾರಿಯಿಂದ ಮಾತನಾಡಬೇಕು, ಅವರು ಎರಡು ಬಾರಿ ಸಿಎಂ ಆಗಿದ್ದಾರೆ ಎಂದರು.
ಮೋದಿ ಅಧಿಕಾರಕ್ಕೆ ಬಂದ ಮೇಲೆ
ರಾಜಕ್ಯ ದೊಡ್ಡ ಅನ್ಯಾಯ:ಸಿದ್ದು
ಕಲಬುರಗಿ, ಅ. 13: ಬಿಜೆಪಿ ನೇತೃತ್ವದ ಎನ್.ಡಿ.ಎ. ಸರಕಾರದ ಪ್ರದಾನ ಮಂತ್ರಿಗಳಾದಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬಂದ ಮೇಲೆ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ, ಮೋದಿ ಅವರು ಅಧಿಕಾರಕ್ಕೆ ಬಂದಾಗಿನಿAದಲೂ ಕೇಂದ್ರದಿAದ ರಾಜ್ಯಕ್ಕೆ ಬರುವ ಸಹಾಯಧನ ಕಡಿಮೆ ಬರುತ್ತಿದೆ, ರಾಜ್ಯದಿಂದ 25 ಸಂಸದರು ಇದ್ದು ಸಹ ಒಂದೇ ಒಂದು ದಿನ ಅನ್ಯಾಯದ ವಿರುದ್ಧ ಧ್ವನಿ ಎತ್ತಲಿಲ್ಲ, ಇವರ ಗುಲಾಮಗಿರಿ, ಹೊಣೆಗೇಡಿತನದಿಂದ ರಾಜ್ಯದ ಜನರಿಗೆ ಅನ್ಯಾಯವಾಗಿದೆ ಎಂದು ನುಡಿದರು.