ಕಲಬುರಗಿ, ಅ. 06: ಮಕ್ಕಳಿಗಾಗಿ ಸರಕಾರದ ಕ್ಷೀರಭಾಗ್ಯ ಯೋಜನೆಯ ಹಾಲಿನ ಪುಡಿ ಅಕ್ರಮವಾಗಿ ಕಳ್ಳಸಂತೆಯಲ್ಲಿ ಮಾರಾಟ ಮಾಡಲು ಯತ್ನಿಸಿದ ಲಾರಿಯೊಂದನ್ನು ಸ್ಥಳೀಯರ ಸಹಾಯದಿಂದ ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಜಿಲ್ಲೆಯ ಅಫಜಲಪೂರ ತಾಲೂಕಿನ ಜೇರಟಗಿ ಗ್ರಾಮದ ಬಳ್ಳಿ ಈ ಲಾರಿ ಪತ್ತೆಯಾಗಿದ್ದು, ಲಾರಿ ಬಿಟ್ಟು ಚಾಲಕ ಮತ್ತು ಕ್ಲೀನರ್ ಪರಾರಿಯಾಗಿದ್ದಾರೆ.
ಮಕ್ಕಳಿಗೆ ಸೇರಬೇಕಾದ ಹಾಲಿನ ಪುಡಿ ಅಕ್ರಮವಾಗಿ ಬೇರೆ ರಾಜ್ಯಗಳಿಗೆ ರವಾನೆ ಮಾಡುತ್ತಿದ್ದ ಸಂದರ್ಭದಲ್ಲಿ ಪೋಲಿಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದರು.
ಒಂದು ಸಾವಿ ಕಿಲೋ ಹಾಲಿನ ಪುಡಿಯ ಪಾಕೆಟ್‌ಗಳು ಲಾರಿಯಲ್ಲಿ ಪತ್ತೆಯಾಗಿವೆ. ಜೇವರಗಿಯಿಂದ ವಿಜಯಪುರ ಮಾರ್ಗವಾಗಿ ನೆರೆ ರಾಜ್ಯಗಳಿಗೆ ಸಾಗಾಟ ಮಾಡಲಾಗುತ್ತಿತ್ತು.
ಆದ್ರ ಯಾರು ಸಾಗಾಟ ಮಾಡುತ್ತಿದ್ದರು ಅನ್ನೊಂದು ಇನ್ನು ಪತ್ತೆಯಾಗಿಲ್ಲ.
ಈ ಬಗ್ಗೆ ನೆಲೋಗಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.