ಕಲಬುರಗಿ, ಸೆ. 28: ನಿನ್ನೆ ಸೆ. 27 ರಿಂದ ಅಕ್ಟೋಬರ್ 11 ರ ವರೆಗೆ ರಾತ್ರಿ ಕರ್ಫ್ಯೂ ಜಾರಿ ಮಾಡಿ ನಗರ ಪೋಲಿಸ್ ಆಯುಕ್ತರಾದ ಡಾ. ರವಿಕುಮಾರ ಅವರು ಆದೇಶ ಜಾರಿಮಾಡಿದ್ದಾರೆ.
ಸರ್ಕಾರದ ಆದೇಶದ ಮೆರೆಗೆ ಈ ಸೆಪ್ಟೆಂಬರ್ 27 ರಿಂದ ಅಕ್ಟೋಬರ್ 11 ರವರೆಗೆ ನೈಟ್ ಕರ್ಫ್ಯೂ ಜಾರಿಮಾಡಿದ್ದು, ರಾತ್ರಿ 9 ಗಂಟೆಯಿAದ ಬೆಳಗ್ಗೆ 5 ಗಂಟೆವರೆಗೆ ಜಾರಿಯಲಿರುತ್ತದೆ.
ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರದಿಂದ ಕರ್ಫ್ಯೂ ಜಾರಿಮಾಡಲಾಗಿದ್ದು, ನೈಟ್ ಕರ್ಫ್ಯೂ ಉಲ್ಲಂಘಿಸಿದ್ರೆ ದಂಡದ ಜೊತೆ ಕಾನೂನು ಕ್ರಮವನ್ನು ಪೋಲಿಸ್ ಇಲಾಖೆ ಕೈಗೊಳ್ಳಲಿದೆ.
ಆದರೆ ಸರಕಾರ ಈ ಆದೇಶಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವಯಕ್ತವಾಗಿದ್ದು, ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸಂಪೂರ್ಣ ಹತೋಟಿಯಲ್ಲಿದ್ದು, ದಿನಕ್ಕೆ ಒಂದೋ ಎರಡು ಪ್ರಕರಣಗಳು ದಾಖಲಾಗುತ್ತಿದ್ದು, ಪ್ರಸ್ತುತ ಜಿಲ್ಲೆಯಲ್ಲಿ 30ರೊಳಗೆ ಕೊರೊನಾ ಸೋಂಕಿನ ರೋಗಿಗಳು ಆಸ್ಪತ್ರೆಯಲ್ಲಿದ್ದು, ದಿನಕ್ಕೆ 2-4 ಜನ ಆಸ್ಪತ್ರೆಯಿಂದ ಬಿಡುಗಡೆ ಹೊಂದುತ್ತಿದ್ದು, ಸಂಪೂರ್ಣವಾಗಿ ಜಿಲ್ಲೆಯಲ್ಲಿ ಕೊರೊನಾ ಹತೋಟಿಯಲ್ಲಿದೆ ಆದರೆ ಸರಕಾರದ ಎಡಬಿಡಂಗಿ ಆದೇಶ ಸಾರ್ವಜನಿಕರ ಆಕ್ರೋಶಕ್ಕೆ ತುತ್ತಾಗಿದೆ.
ಸದ್ಯ ಕಲಬುರಗಿ ಜಿಲ್ಲೆಯಲ್ಲಿ 0.1/0.2 ಕೊರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದರೂ ಸಹ ಸರಕಾರದ ಈ ಆದೇಶಕ್ಕೆ ಏನೇನ್ನಬೇಕೋ ತಿಳಿಯದಾಗಿದೆ.