ಕಲಬುರಗಿ, ಸೆ. 23: ಪತ್ನಿಯ ಶೀಲ ಶಂಕಿಸಿ, ಅನುಮಾನಗೊಂಡು ಪತ್ನಿ ಹಾಗೂ ಮಗಳನ್ನೆ ಹತ್ಯೆ ಮಾಡಿದ ಘಟನೆ ಸೇಡಂನಲ್ಲಿ ನಡೆದಿದೆ.
46 ವರ್ಷದ ಪತಿ ದಿಗಂಬರ ತನ್ನ ಪತ್ನಿ ಹಾಗೂ ಮಗಳು ಮಲಗಿದ ಸಮಯದಲ್ಲಿ ಮಧ್ಯರಾತ್ರಿಯಲ್ಲಿ ಕಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದನೆಂದು ಹೇಳಲಾಗಿದೆ.
ಪತ್ನಿ ಜಗದೀಶ್ವರಿ (45) ಮತ್ತು ಪ್ರಿಯಾಂಕಾ (11) ಕೊಲೆಯಾದ ದುರ್ದೈವಿಗಳಾಗಿದ್ದಾರೆ.
ಜಿಲ್ಲೆಯ ಸೇಡಂ ಪಟ್ಟಣದ ಈಶ್ವರ್ ನಗರದಲ್ಲಿ ನಿನೆ ತಡ ರಾತ್ರಿ ಈ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಕೊಲೆ ಆರೋಪಿ ದಿಗಂಬರ್ ಈಗ ಪೋಲಿಸರು ವಶಕ್ಕೆ ಪಡೆದಿದ್ದು, ಈ ಬಗ್ಗೆ ಸೇಡಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆದಿದೆ.