ಚಿಂಚೋಳಿ, ಸೆ. 19-ಮನೆಗೆ ಕನ್ನ ಹಾಕಲು ಬಂದಿದ್ದ ಕಳ್ಳರು ಇಳಿವಯಸ್ಸಿನ ಅಜ್ಜಿಯೋರ್ವಳ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಘಟನೆ ಶನಿವಾರ ರಾತ್ರಿ ನಡೆದಿದೆ.
ಚಿಂಚೋಳಿ ತಾಲೂಕಿನ ಕೊಳ್ಳುರ ಗ್ರಾಮದಲ್ಲಿ ಶನಿವಾರ ಮಧ್ಯರಾತ್ರಿ ಕಳ್ಳರು ಕಳ್ಳತನ ಮಾಡಲು ಬಂದಿದ್ದ ಸಮಯದಲ್ಲಿ ಎಚ್ಚರಗೊಂಡ ಗುಂಡಮ್ಮ ಲಾಲಪ್ಪ ಭೂತಪಳ್ಳಿ ಎಂಬ ಅಜ್ಜಿ ಕೂಗಿಕೊಂಡಾಗ ಕಳ್ಳರು ಆಕೆಯ ಕುತ್ತಿಗೆಯ ಮೇಲೆ ಮಚ್ಚಿನಿಂದ ಆದ ದಾಳಿಗೆ ಗುಂಡಮ್ಮ ಲಾಲಪ್ಪ ಬೂತಪಳ್ಳಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಆಕೆಯನ್ನು ಕಲಬುರಗಿ ಜಿಲ್ಲೆಯ ಸರಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಘಟನಾ ಸ್ಥಳಕ್ಕೆ ಚಿಂಚೋಳಿ ಪೋಲಿಸರು ಭೇಟಿ ನೀಡಿದ್ದಾರೆ.