ಕಲಬುರಗಿ, ಸೆ. 10: ಕಲಬುರಗಿ ಮಹಾನಗರಪಾಲಿಕೆಗೆ ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿದ್ದು ಆಗಿದೆ, ಮುಂದಿನ ವಾರ ಮೇಯರ್ ಚುನಾವಣೆಗೆ ಅಧಿಸೂಚನೆ ಪ್ರಕಟವಾಗಲಿದೆ.
55 ಸ್ಥಾನಗಳ ಬಲದ ಕಲಬುರಗಿ ಮಹಾನಗರಪಾಲಿಕೆಯಲ್ಲಿ ಅತಂತ್ರ ಸ್ಥಿತಿ ಉಂಟಾಗಿದ್ದು, ಮೇಯರ್ ಯಾರು ಎಂಬುದು ಕಗ್ಗಾಂಟಾಗಿದೆ.
ಕಾAಗ್ರೆಸ್ ಮತ್ತು ರಾಜ್ಯದಲ್ಲಿ ಆಡಳಿತರೂಢ ಬಿಜೆಪಿ ಮೇಯರ್ ಸ್ಥಾನಕ್ಕಾಗಿ ಪೈಪೋಟಿ ನಡೆಸಿ ಸಮಾನಂತರ ಹೋರಾಟ ನಡೆಸಿದೆ, ಈ ಚುನಾವಣೆಯಲ್ಲಿ 27 ಸ್ಥಾನಗಳನ್ನು ಗಳಿಸಿ ಅತಿ ದೊಡ್ಡ ಪಕ್ಷವಾಗಿ ಮಹಾನಗರಪಾಲಿಕೆಯಲ್ಲಿ ಹೊರಹೊಮ್ಮಿದ ಕಾಂಗ್ರೆಸ್ ತನ್ನ ಪಕ್ಷದ ಅತಿರಥ ನಾಯಕರಿಂದ ಜೆಡಿಎಸ್ ಬೆಂಬಲಕ್ಕೆ ಪ್ರಯತ್ನಿಸುತ್ತಿದೆ.
ಇತ್ತ ಯಾವುದೇ ಸ್ಥಳೀಯ ಚುನಾವಣೆಗಳಿರಲಿ ತಂತ್ರಗಾರಿಕೆಯಿAದ ಅಧಿಕಾರ ಗಿಟ್ಟಿಸಿಕೊಳ್ಳುವಲ್ಲಿ ನಿಸ್ಸಿಮವಾದ ಬಿಜೆಪಿ ಕಲಬುರಗಿ ಮೇಯರ್ ಸ್ಥಾನ ಬಿಟ್ಟಿಕೊಡಲು ಸಿದ್ಧವಿಲ್ಲ. ಶತಾಯಗತಾಯವಾದರೂ ಈ ಸ್ಥಾನ ಉಳಿಸಿಕೊಳ್ಳಲು ಶತ ಪ್ರಯತ್ನ ನಡೆಸುತ್ತಿದೆ.
ಈಗಾಗಲೇ ತಮ್ಮ ಪಕ್ಷದಿಂದ ಆಯ್ಕೆಯಾದ ಸದಸ್ಯರು ಯಾರಿಗೆ ಬೆಂಬಲ ಕೊಡಬೇಕೆಂಬುದು ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರು ಸ್ಪಷ್ಟವಾಗಿ ತಿಳಿಸಿದ್ದು, ಕುಮಾರ ಸ್ವಾಮಿಯವರಿಗೆ ಯಾವ ಪಕ್ಷದ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕೇಂಬುದರ ಬಗ್ಗೆ ಅಧಿಕಾರ ನೀಡಲಾಗಿದೆ.
ರೆಸಾರ್ಟನಲ್ಲಿ ಉಳಿದ ಜೆಡಿಎಸ್ ನಾಲ್ವರು ಸದಸ್ಯರುಗಳು, ಸ್ಥಳೀಯ ಜೆಡಿಎಸ್ ಮುಖಂಡರು, ಕಳೆದ ಮೂರು ದಿನಗಳಿಂದ ಬೆಂಗಳೂರಿನಲ್ಲಿ ಬೀಡು ಬಿಟ್ಟಿರುವ ನಾಲ್ವರು ಸದಸ್ಯರು ಇಂದು ಬಿಡದಿ ಬಳಿಯ ಕುಮಾರಸ್ವಾಮಿಯವರ ನಿವಾಸದಲ್ಲಿ ಗಣೇಶನ ಹಬ್ಬದಲ್ಲಿ ಸಂಭ್ರಮಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ರಾಜ್ಯ ಉಪಾಧ್ಯಕ್ಷ ಉಸ್ತಾದ ನಾಸೀರ ಹುಸೇನ್, ಈಗಾಗಲೇ ನಮ್ಮ ನಿರ್ಧಾರ ಪ್ರಕಟಿಸಿ ಆಗಿದೆ, ಯಾರು ನಮ್ಮ ಬೇಡಿಕೆಗೆ ಒಪ್ಪುತ್ತಾರೋ ಅವರನ್ನೊಳಗೊಂಡ ಪಕ್ಷ ಪಾಲಿಕೆಯಲ್ಲಿ ಅಧಿಕಾರಕ್ಕೆ ಬರಲಿದೆ ಎಂದರು.
ನಮ್ಮ ನಾಯಕರಾದ ಹೆಚ್. ಡಿ. ಕುಮಾರಸ್ವಾಮಿಯವರು ಈ ಬಗ್ಗೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ, ಅವರ ನಿರ್ಧಾರದ ನಂತರವೇ ಸದಸ್ಯರೊಂದಿಗೆ ಕಲಬುರಗಿ ಪ್ರಯಾಣ ಬೆಳೆಸುವುದಾಗಿ ನುಡಿದರು.
ಬರುವ ವಾರದಲ್ಲಿ ಮೇಯರ್ ಆಗುವದಂತೂ ನಿಜ, ಆದರೆ ಯಾರು ಆಗುವರು ಎಂಬುದನ್ನು ಕಾದು ನೋಡಬೇಕಾಗಿದೆ, ಯಾರೂ ಆದರೂ ಕುತೂಹಲವೇ ಸರಿ.