ಕಲಬುರಗಿ, ಸೆ. 10: ಕೊಟ್ಟ ಸಾಲ ಮರಳಿ ಕೊಡಲು ಕೇಳಿದ್ದಕ್ಕೆ ವ್ಯಕ್ತಿಯೋರ್ವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ನಗರದ ಕಾಕಡೆ ಚೌಕ್ ಬಳಿಯ ಲಂಗರ್ ಆಂಜನೇಯ ದೇವಸ್ಥಾನದ ಬಳಿ ನಡೆದಿದೆ.
ರವಿಕುಮಾರ ಎಂಬ ವ್ಯಕ್ತಿಯೇ ಹಲ್ಲೆಗೊಳಗಾಗಿದ್ದು, ಆತನ ತಲೆಗೆ ಗಂಭೀರ ಗಾಯವಾಗಿದ್ದು, ಚಿಕಿತ್ಸೆಗೆಗಾಗಿ ಜಿಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ.
ಗಾಯಗೊಂಡ ರವಿಕುಮಾರ ಅವರು ಗಣಪತಿ ಅವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದಾರೆ.
ರವಿಕುಮಾರ ಮತ್ತು ಗಣಪತಿ ಸ್ನೇಹಿತರು, ಕಳೆದ ಏಳು ವರ್ಷಗಳ ಹಿಂದೆ ರವಿಕುಮಾರ ಬಳಿ ಗಣಪತಿ ಎರಡು ಲಕ್ಷ ರೂ. ಸಾಲ ಪಡೆದಿದ್ದನಂತೆ ಎಷ್ಟೋ ಸಾರಿ ವಾಪಸ್ ಕೇಳಿದ್ದು ಕೊಡದೆ ಸತಾಯಿಸುತ್ತಿದ್ದನಂತೆ ಈ ಹಿನ್ನೆಲೆಯಲ್ಲಿ ರವಿಕುಮಾರ ಹೆಂಡತಿ ಮಾಲಾಶ್ರೀ ಗಣಪತಿ ಮನೆಗೆ ಗಂಡ ಕೊಟ್ಟ ಸಾಲ ಮರಳಿ ಕೇಳು ಹೋದಾಗ ಕಲ್ಲು, ಕಬ್ಬಿಣ ರಾಡ್‌ನಿಂದ ಗಣಪತಿ ಕುಟುಂಬಸ್ಥರು ಹಲ್ಲೆ ಮಾಡಿರೋ ಆರೋಪವಿದೆ.
ಅಲ್ಲದೇ ಹಲ್ಲೆ ನಡೆಸಿದ್ದಲ್ಲೇ ಜಾತಿ ನಿಂದನೆ ಆರೋಪವನ್ನು ಸಹ ಮಾಡಲಾಗಿದೆ.
ಈ ಬಗ್ಗೆ ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.