ಎರಡು ಬೈಕ್‌ಗಳ ಪರಸ್ಪರ ಡಿಕ್ಕಿ: ಮೂವರ ಸಾವು

0
1258

ಕಲಬುರಗಿ :ಸೆ.09: ಬೈಕ್‌ಗಳ ನಡುವಿನ ಪರಸ್ಕರ ಡಿಕ್ಕಿಯಿಂದಾಗಿ ಎರಡೂ ಬೈಕ್‌ನ ಮೂವರು ಸವಾರರು ಮೃತಪಟ್ಟಿದ್ದಾರೆ.
ಈ ದುರ್ಘಟನೆ ಕಲಬುರಗಿ ಜಿಲ್ಲೆಯ ಕಮಲಾಪೂರ ತಾಲ್ಲೂಕಿನ ಮಡಕಿ ತಾಂಡಾ ಬಳಿ ಗುರುವಾರ ನಡೆದಿದೆ.
ಲಾಡ್ ಮುಗಳಿ ಗ್ರಾಮದ ಅಂಬ್ರೀಶ ಅಶೋಕ ಛತ್ರಿ (24) ಅನೀಲ (ಪಿಂಟು) ಮಲ್ಲಯ್ಯ ಗುತ್ತೇದಾರ (26) ಹಾಗೂ ಕಲಬುರಗಿ ಸಮೀಪದ ಬೇಲೂರ ಕ್ರಾಸ್ ನಿವಾಸಿ ನಾಗೇಶ ಅಣ್ಣಪ್ಪ ವಡ್ಡರ್ (24) ಮೃತಪಟ್ಟಿದ್ದಾರೆ. ಇದೆ ಗ್ರಾಮದ ನಾಗೇಶ ಮುಕುಂದ (28) ತೀವ್ರಗಾಯಗೊಂಡಿದ್ದು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿದೆ.
ಮಹಾಗಾಂವ ಕ್ರಾಸ್‌ಗೆ ತೆರಳಿದ್ದ ಅಂಬ್ರೀಶ ಹಾಗೂ ಅನೀಲ ಬೈಕ್ ಮೂಲಕ ಸ್ವಗ್ರಾಮ ಲಾಡ ಮುಗಳಿಗೆ ಮರಳುತ್ತಿದ್ದರು.
ವಿ.ಕೆ.ಸಲಗರಗೆ ತೆರಳಿದ್ದ ಬೇಲೂರ ಕ್ರಾಸ್ ನಿವಾಸಿಗಳಾದ ನಾಗೇಶ ವಡ್ಡರ್ ಹಾಗೂ ನಾಗೇಶ ಮುಖುಂದ ಅವರು ಸಹ ಬೈಕ್ ಮೂಲಕ ಬೇಲೂರ ಕ್ರಾಸ್ ಗೆ ಮರಳುತ್ತಿದ್ದರು. ಮಧ್ಯ ಮಡಕಿ ತಾಂಡಾ ಬಳಿ ಡಿಕ್ಕಿ ಸಂಭವಿಸಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here