ಕಾಂಗೈ ನಾಯಕನ ಮೇಲೆ ಹಲ್ಲೆ ಪೋಲಿಸ್ ಆಯುಕ್ತರಿಂದ ನಿರಾಕರಣೆ

0
1236
An Insight into Karnataka's Coastal and Maritime Security | The Protector

ಕಲಬುರಗಿ, ಸೆ. 02: ಕಾಂಗ್ರೇಸ್ ನಾಯಕ ಆದೀಲ್ ಸುಲೇಮಾನ ಅವರ ಮೇಲೆ ನಾಣು ಹಲ್ಲೆ ಮಾಡಿದ್ದೇನೆ ಎಂದು ಹೇಳಿದ್ದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಕಲಬುರಗಿ ನಗರ ಪೋಲಿಸ್ ಆಯುಕ್ತರಾದ ಡಾ. ವೈ. ಎಸ್. ರವಿಕುಮಾರ ಅವರು ಸ್ಪಷ್ಟವಾಗಿ ಆರೋಪವನ್ನು ನಿರಾಕರಿಸಿದ್ದಾರೆ.
ಈ ಬಗ್ಗೆ ನಮ್ಮ ದೂರವಾಣಿಯಲ್ಲಿ ಮಾತನಾಡಿದ ಆಯುಕ್ತರು ಯಾರು ಈ ಆದಿಲ್ ನನಗೆ ಗೊತ್ತಿಲ್ಲ, ಹಾಗೂ ಅವರ ಮೇಲೆ ಯಾರು ಹಲ್ಲೆ ಮಾಡಿದ್ದಾರೆಂದೂ ನನಗೆ ಗೊತಿಲ್ಲ, ನಿನ್ನೆ ರಾತ್ರಿ ಗಸ್ತಿನಲ್ಲಿ ಯರ‍್ಯಾರು ಇದ್ದರೆಂಬುದು ನನಗೆ ತಿಳಿಯದು ಈ ಬಗ್ಗೆ ವಿಚಾರಿಸುತ್ತೀನೆ ಎಂದು ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದಾರೆ.
ನಾನೊಬ್ಬ ಪೋಲಿಸ್ ಆಯುಕ್ತರಾಗಿ ಇಂತಹ ಕೆಲಸ ಹೇಗೆ ಮಾಡುವುದು, ಇದೆಲ್ಲ ನನಗೆ ಗೊತ್ತಿಲ್ಲ ಎಂದು ನುಡಿದರು.

LEAVE A REPLY

Please enter your comment!
Please enter your name here