ಗಡಿಕೇಶ್ವರದಲ್ಲಿ ಮತ್ತೆ ಕಂಪಿಸಿದ ಭೂಮಿ ಭಯಭೀತಗೊಂಡ ಜನತೆ

0
589

ಕಲಬುರಗಿ, ಆಗಸ್ಟ. 23: ಕಳೆದ ನಾಲ್ಕು ದಿನಗಳ ಹಿಂದೆಯಷ್ಟ ಚಿಂಚೋಳಿ ತಾಲೂಕಿನ ಗಡಿಕೇಶ್ವರ ಗ್ರಾಮದಲ್ಲಿ ಭೂಮಿಯಿಂದ ಭಾರೀ ಸದ್ದು ಬಂದಿದ್ದು ಮತ್ತೆ ಇಂದು ಅದೇ ಅನುಭವ ಜನತೆಗೆ ಆಗಿದ್ದು, ಇದರಿಂದ ಭಯದ ವಾತಾವರಣ ನಿರ್ಮಾಣ ವಾಗಿದೆ.

ಸೋಮವಾರ ಮುಂಜಾಣ 7.30ರ ಸುಮಾರು ಎರಡು ಬಾರಿ ಭೂಮಿಯಿಂದ ಭಾರೀ ಸದ್ದು ಕೇಳಿ ಬಂದಿದೆ.
ಇದರಿAದಾಗಿ ಜನರ ಆತಂಕದಲ್ಲಿಯೇ ಕಾಲ ಕಳೆಯುವಂತಾಗಿದ್ದು, ಈ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದರು, ಗಡಿಕೇಶ್ವರ ಸೇರಿದಂತೆ ಹಲವಾರು ಗ್ರಾಮಗಳಲ್ಲಿನ ಭೂಮಿಯಲ್ಲಿ ಕೆಳಗಡೆ ಸುಣ್ಣದ ಕಲ್ಲುಗಳಿದ್ದು, ಮಳೆ ಹೆಚ್ಚಾಗಿ ಭೂಮಿಯೊಳಗೆ ನೀರಿನ ಹರಿವು ಉಂಟಾದ ಕಲ್ಲುಗಳು ಕರಗಿ ಈ ರೀತಿ ಸದ್ದು ಬರುವುದು ಸಾಮಾನ್ಯ ಎಂದು ಹೇಳಲಾಗಿದೆ.
ಇತ್ತೀಚೆಗೆ ಸೇಡಂ ಶಾಸಕ ರಾಜುಕುಮಾರ ಪಾಟೀಲ್ ತೇಲ್ಕೂರ್ ಮತ್ತು ಸಂಸತ್ ಸದಸ್ಯ ಡಾ. ಉಮೇಶ ಜಾಧವ ಅವರು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ, ಗಡಿಕೇಶ್ವರ ಒಂದೇ ಅಲ್ಲ ಇನ್ನು ಹಲವಾರು ಗ್ರಾಮಗಳಲ್ಲಿ ಈ ರೀತಿಯ ಶಬ್ಧ ಬರುತ್ತಿದ್ದು, ಈ ಬಗ್ಗೆ ಭೂ ಮತ್ತು ಗಣಿ ವಿಜ್ಞಾನ ಅಧಿಕಾರಿಗಳು ತನಿಖೆ ನಡೆಸಿ ವರದಿ ಸಲ್ಲಿಸುವ ಬಗ್ಗೆ ಹೇಳಿಕೆ ನೀಡಿದ್ದರಾದರು ಇನ್ನು ವರೆಗೆ ಯಾವ ವರದಿಯೂ ಕೂಡ ಜಿಲ್ಲಾಡಳಿತಕ್ಕೆ ಸಲ್ಲಿಕೆ ಆಗಿಲ್ಲ.

LEAVE A REPLY

Please enter your comment!
Please enter your name here