ಕಲಬುರಗಿ, ಆಗಸ್ಟ. 20: ಶುಕ್ರವಾರ ರಾತ್ರಿ 9 ಗಂಟೆಯಿAದ ದಿನಾಂಕ 23ರ ಬೆಳಿಗ್ಗೆ 6 ಗಂಟೆಯವರೆಗೆ ವೀಕೆಂಡ್ ಕರ್ಫ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿಗಳಾದ ವಿವಿ ಜೋತ್ಸö್ನ ಅವರು ಆದೇಶ ಜಾರಿ ಮಾಡಿದ್ದಾರೆ.
ನೆರೆ ರಾಜ್ಯಗಳಲ್ಲಿನ ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಕಳೆದ 15 ದಿನಗಳ ಹಿಂದೆ ಹೊರಡಿಸಿದ ಆದೇಶವೆ ಮುಂದುವರೆಯಲಿದೆ ಎಂದು ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
23ರ ರಾತ್ರಿ 9 ಗಂಟೆಯಿAದ ದಿನಾಂಕ 30.8.2021ರ ವರೆಗೆ ರಾತ್ರಿ ಕರ್ಫ್ಯೂ ಜಾರಿಯಲಿರುತ್ತದೆ.
ಸರಕಾರ ಈ ಹಿಂದೆ ಹೊರಡಿಸಿರುವ ಎಲ್ಲಾ ಮಾರ್ಗ ಸೂಚಿಗಳು ಈ ವೀಕೆಂಡ್ ಕರ್ಫ್ಯೂನಲ್ಲಿ ಹಾಗೂ ಉಳಿದ ದಿನಗಳಲ್ಲಿ ಜಾರಿಯಲ್ಲಿರುತ್ತವೆ ಎಂದು ತಿಳಿಸಲಾಗಿದೆ.
ಅವಶ್ಯಕ ಹಾಲು, ಹಣ್ಣು, ಕಾಯಿಪಲ್ಲೆ, ದಿನಸಿಸಾಮಾನುಗಳು ಸೇರಿದಂತೆ ಹಲವಾರು ಅಂಗಡಿಗಳು ಮಧ್ಯಾಹ್ನ 2 ಗಂಟೆಯವರೆಗೆ ಅಲ್ಲದೇ ಔಷಧ ಅಂಗಡಿಗಳು, ಆಸ್ಪತ್ರೆಗಳಿಗೆ ವಿನಾಯಿತಿ ನೀಡಲಾಗಿದೆ.
ಮದ್ಯದ ಅಂಗಡಿಗಳು ಮಧ್ಯಾನ್ನ 2ರ ವರೆಗೆ ಮಾತ್ರ
ಬಾರ್ ವೈನ್ ಶಾಪಿ, ಮದ್ಯದ ಔಟ್‌ಲೆಟ್‌ಗಳು ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ.