ಹಿಂದೆoದೂ ಆಗದ ನಿರ್ಣಯಗಳು ಮೋದಿ ಸರಕಾರದಲ್ಲಿ 7 ವರ್ಷದಲ್ಲಿಯೇ ಆಗಿವೆ: ಖೂಬಾ

0
708

ಕಲಬುರಗಿ, ಆಗಸ್ಟ. 18: ದೇಶ ಸ್ವಾತಂತ್ರö್ಯವಾಗಿ 75 ವರ್ಷಗಳಲ್ಲಿ ತೆಗೆದುಕೊಳ್ಳದ ನಿರ್ಣಯಗಳಣ್ನು ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಏಳೆ ಏಳು ವರ್ಷಗಳಲ್ಲಿ ಹಲವಾರು ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ ಅವರು ತಿಳಿಸಿದ್ದಾರೆ.
ಈ ಹಿಂದೆ ದಲಿತರಿಗೆ, ಮಹಿಳೆಯರಿಗೆ ಮತ್ತು ಆದಿವಾಸಿಗಳಿಗೆ ಸಂಪುಟದಲ್ಲಿ ಸ್ಥಾನಮಾನ ಸಿಕ್ಕಿರಲಿಲ್ಲ, ಆದರೆ ಮೋದಿ ಅವರ ಸಂಪುಟದಲ್ಲಿ ಈ ಎಲ್ಲಾ ವರ್ಗದವರಿಗೆ ಸಾಕಷ್ಟು ಅವಕಾಶ ಕೊಟ್ಟಿದ್ದು, ಕೇಂದ್ರ ಸಂಪುಟದಲ್ಲಿ ಕರ್ನಾಟಕಕ್ಕೆ ಸಿಂಹಪಾಲು ದೊರಕಿರೊದು ಐತಿಹಾಸವೇ ಸರಿ ಎಂದು ನುಡಿದರು.
ಇತ್ತೀ್ತಚೆಗೆ ಲೋಕಸಭೆಯ ಸಂಸತ್ ಕಲಾಪದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಚರ್ಚೆಗೆ ಯಾವ ವಿಷಯಗಳು ಇಲ್ಲದಿದ್ದರೂ ಮೊಂಡುತನದಿAದ ಇಡೀ ಸಂಸತ್ತಿನ ಅಧಿವೇಶನ ಹಾಳು ಮಾಡಿದ್ದು ಇಡೀ ದೇಶದ ಜನರೇ ನೋಡಿದ್ದಾರೆ ಎಂದರು.
ಅಧಿವೇಶನ ನಡೆಯದಂತೆ ಸಂಸತ್ ಸಮಯ ಮತ್ತು ದೇಶದ ಹಲವಾರು ಯೋಜನೆಗಳನ್ನು ಜಾರಿಗೆ ತರುವಲ್ಲಿ ಚರ್ಚೆಗೆ ಅವಕಾಶ ನೀಡದೆ ಪ್ರಧಾನಿ ನರೇಂದ್ರ ಮೋದಿಯವರ ಜನಪರ ಕಾಳಜಿಯ ಕೆಲಸಗಳನ್ನು ಸಹಿಸದೇ ಈ ರೀತಿಯಾಗಿ ಸದನದಲ್ಲಿ ಗದ್ದಲ, ಕೋಲಾಹಲ ಎಬ್ಬಿಸಿ ಹಾಳು ಮಾಡಿದ್ದಾರೆ ಎಂದು ತಿಳಿಸಿದರು.
ಅವರಿಂದಿಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ನೂತನ ಸಚಿವರ ಪರಿಚಯಕ್ಕೆ ಸದನದಲ್ಲಿ ಕಾಂಗ್ರೆಸ್ ಅಡ್ಡಿಪಡಿಸಿರುವದರ ವಿಚಾರವಾಗಿ ಜನರಿಗೆ ಸತ್ಯಾಂಶ ತಿಳಿಸಲು ಮೋದಿ ಅವರ ಸಂಪುಟದ 39 ನೂತನ ಸಚಿವರುಗಳು 214 ಲೋಕಸಭಾ ಕ್ಷೇತ್ರದಗಳಲ್ಲಿ ಸುಮಾರು 400 ರಿಂದ 500 ಕಿ.ಮಿ. ವ್ಯಾಪ್ತಿಯಲ್ಲಿ ಸಂಚರಿಸಿ, ಜನಾಶೀರ್ವಾದ ಯಾತ್ರೆಯ ಮೂಲಕ ತಲುಪಿ, ಜನಾಶೀರ್ವಾದ ಪಡೆಯಲಿದ್ದಾರೆ ಎಂದರು.
ಈ ಹಿಂದೆಯೂ ಕೂಡ ಜನರು ನಮ್ಮನ್ನು ಆಶೀರ್ವದಿಸುವ ಮೂಲಕ ಸಂಸದರನ್ನಾಗಿ ಮಾಡಿದ್ದಾರೆ, ಈಗ ಮತ್ತೇ ಜನಾಶೀರ್ವಾದ ಪಡೆಯಲು ಪ್ರಧಾನಿ ಮೋದಿ ನೇತೃತ್ವದ ನಮ್ಮ ನೂತನ ಸಚಿವರ ತಂಡ ಸ್ವತಂತ್ರ ಭಾರತದಲ್ಲಿ ವಿನೂತನವಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿದೆ ಎಂದು ವಿವರಿಸಿದರು.
ಈಗಾಗಲೇ ಕಾಂಗ್ರೆಸ್‌ನವರಿಗೆ ಎಲ್ಲ ವರ್ಗಗಳ ಮತಗಳು ಕೈಬಿಟ್ಟು ಹೋಗಿರುವ ಆತಂಕದಿAದಾಗಿ ಚರ್ಚೆ ನಡೆದರೆ ಎಲ್ಲಿ ಮೋದಿ ಸರಕಾರ ಸಚಿವರುಗಳು ಕಾಂಗ್ರೆಸ್ ಬಣ್ಣ ಬಯಲು ಮಾಡುತ್ತಾರೊ ಎಂಬ ಭಯದಿಂದ ಸದನದ ಸಂಪದ್ರಾಯವನ್ನು ಹಾಳು ಮಾಡಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಲಬುರಗಿ ಸಂಸತ್ ಸದಸ್ಯ ಡಾ. ಉಮೇಶ ಜಾಧವ, ಜಿಲ್ಲಾ ಬಿಜೆಪಿ ಅಧ್ಯಕ್ಷ ಶಿವರಾಜ ರದ್ದೆವಾಡಗಿ ಸೇರಿದಂತೆ ಇನ್ನಿತರರು ಉಪಸ್ತಿತರಿದ್ದರು.

LEAVE A REPLY

Please enter your comment!
Please enter your name here