ಕಲಬುರಗಿ, ಆಗಸ್ಟ. 12: ಪ್ರಥಮ ಬಾರಿಗೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾದ ನಂತರ ಮೂರು ಮಹಾನಗರಪಾಲಿಕೆಗಳಿಗೆ ಚುನಾವಣೆ ನಡೆಯುತ್ತಿದ್ದು, ಬೆಳಗಾಂವಿ, ಹುಬ್ಬಳಿ, ಧಾರವಾಡ, ಕಲಬುರಗಿ ಸೇರಿದಂತೆ ಎಲ್ಲ ವಾರ್ಡಗಳಲ್ಲಿ ಕಮಲ ಅರಳಿಸಲಾಗುವುದು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಬಿ. ವೈ. ವಿಜಯೇಂದ್ರ ಅವರು ಹೇಳಿದ್ದಾರೆ.
ನಿನ್ನೆ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಕುಟುಂಬ ಸಮೇತ ಹೋಗಿ ದರ್ಶನ ಪಡೆದಿದ್ದೇನೆ ಎಂದ ಅವರು ಪ್ರತಿಯೊಂದು ವಾರ್ಡನಲ್ಲಿ ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುದು ಎಂದು ನುಡಿದರು.
ಅಲ್ಲದೇ ಸಿಂದಗಿ, ಹಾನಗಲ್ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿಯೂ ಬಿಜೆಪಿ ಯಶಸ್ವಿಯಾಗುವ ಮೂಲಕ ಎಲ್ಲ ಎರಡು ಕ್ಷೇತ್ರಗಳಲ್ಲಿಯೂ ಕಮಲ ಅರಳಲಿದೆ ಎಂದರು.
ಮಹಾನಗರಪಾಲಿಕೆ ಹಿಡಿದು, 2 ಕ್ಷೇತ್ರಗಳ ಉಪಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದ್ದು, ಯಡಿಯೂರಪ್ಪ ಅವರ ಜನಪರ ಕೆಲಸಗಳೆ ಈ ಕ್ಷೇತ್ರದಲ್ಲಿ ಕಮಲಕ್ಕೆ ಮತ ನೀಡಿ, ಮತದಾರರು ಗೆಲ್ಲಿಸಲಿದ್ದಾರೆ ಎಂದು ವಿಜಯೇಂದ್ರ ನುಡಿದರು.