ಕಲಬುರಗಿ, ಜುಲೈ. 16: ಇತ್ತೀಚೆಗೆ ಕಳೆದ 6 ದಿನಗಳಿಂದ ಸುರಿಯುತ್ತಿರುವ ಧಾರಾಕರದ ಮಳೆಯಿಂದಾಗಿ ಜಲಾಶಯಗಳು ತುಂಬಿದ್ದರಿAದ ಬೆಣ್ಣೆತೋರಾ ಜಲಾಶಯದಿಂದ ಬಿಟ್ಟ ಹಿನ್ನಿರಿನಲ್ಲಿ ಮುಳುಗಿ ಮಹಿಳೆಯೋರ್ವಳು ಸಾವನ್ನಪ್ಪಿದ ಘಟನೆ ಮಳಖೇಡ ಬಳಿಯ ಸಂಗಾವಿಯಲ್ಲಿ ಶುಕ್ರವಾರ ಬೆಳಿಗ್ಗೆ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಮಾಣಿಕಮ್ಮ ಗಂಡ ಸಂಗಣ್ಣ (28) ಎಂಬ ಮಹಿಳೆ ಬಟ್ಟೆ ಒಗೆಯಲು ಹೋದಾಗ ಒಮ್ಮಿದೊಮ್ಮೆಲೆ ನೀರಿನ ಹರಿವು ಹೆಚ್ಚಾಗಿ ಬಟ್ಟೆ ಸಮೇತ ನೀರು ಪಾಲಾಗಿದ್ದು, ್ಲ ಮಹಿಳೆಯ ಶವಕ್ಕಾಗಿ ಎನ್.ಡಿ.ಆರ್.ಎಫ್. ಪೋಲಿಸ ತಂಡ ಮತ್ತು ಸ್ಥಳೀಯ ಮೀನುಗಾರರ ತೀವ್ರ ಹುಡುಕಾಟ ನಡೆಸಿದರೂ ಸಂಜೆಯಾಗಿದ್ದರಿAದ ಮಹಿಳೆ ಶವ ಸಿಗದ ಹಿನ್ನೆಲೆಯಲ್ಲಿ ನಾಳೆ ಬೆಳಿಗ್ಗೆ ಮತ್ತೆ ಶವಕ್ಕಾಗಿ ಹುಡುಕಾಟ ಮುಂದುವರೆಯಲಿದೆ.
ಕೂಡಲೇ ಸ್ಥಳಕ್ಕೆ ತಹಸಿಲ್ದಾರ, ಮಳಖೇಡ ಠಾಣೆಯ ಪಿಎಸ್‌ಐ (ಅಪರಾಧ) ಪ್ರಥ್ವಿರಾಜ್, ಸಿಬ್ಬಂದಿಗಳು ಭೇಟಿ ನೀಡಿದ್ದರು.
ಈ ಬಗ್ಗೆ ಮಳಖೇಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.