ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಆರೋಗ್ಯ ಇಲಾಖಾಧಿಕಾರಿಗಳಿಗೆ ಹಕ್ಕೋತ್ತಾಯ ಪತ್ರ ಸಲ್ಲಿಕೆ

0
709

ಕಲಬುರಗಿ, ಜುಲೈ 02: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಇಂದು ‘ವೈದ್ಯಕೀಯ ವಲಯದಲ್ಲಿ ಕನ್ನಡದ ಬಳಕೆ’ ಕುರಿತಾದ ಅಭಿಯಾನದಲ್ಲಿ ಪ್ರಾಧಿಕಾರದ ಸದಸ್ಯ ಸುರೇಶ ಡಿ.ಬಡಿಗೇರ ನೇತೃತ್ವದಲ್ಲಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಶರಣಬಸಪ್ಪ ಗಣಜಲಖೇಡ ಅವರಿಗೆ ಹಕ್ಕೋತ್ತಾಯದ ಪತ್ರ ಸಲ್ಲಿಸಲಾಯಿತು.
ಅಭಿಯಾನದಲ್ಲಿ ಡಾ ಶ್ರೀಶೈಲ್ ನಾಗರಾಳ, ಡಾ ಆನಂದ ಸಿದ್ದಮಣಿ, ಬಿ.ಹೆಚ್.ನಿರಗುಡಿ, ಸಂಗಮನಾಥ ರೇವತಗಾಂವ, ಗೋಪಾಲ ನಾಟೀಕಾರ, ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಗುರುಬಸಪ್ಪ ಸಜ್ಜನಶೆಟ್ಟಿ, ಮಂಜುನಾಥ ಕಂಬಳಿಮಠ, ಸಂತೋಷ ಕುಡ್ಡಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here