ಅಗಲಿದ ಮಾವನೂರ್ ಕುಟುಂಬಕ್ಕೆ ಆರ್ಥಿಕ ಸಹಾಯ

0
895

ಕಲಬುರಗಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಇತ್ತೀಚಿಗೆ ನಿಧನರಾದ ಹಿರಿಯ ಪತ್ರಕರ್ತರಾದ ಎಸ್, ಕೆ, ಮಾವನೂರ್ ಕುಟುಂಬಕ್ಕೆ ಆರ್ಥಿಕ ಸಹಾಯ ಕಲ್ಪಿಸಲಾಯಿತು.
ಪತ್ರಕರ್ತರ ಸಂಘವು ಪತ್ರಕರ್ತರ ಶ್ರೇಯೋಭಿವೃದ್ಧಿಗೆ ಕೆಲಸಕಾರ್ಯಗಳು ಮಾಡುತ್ತಾ ಬರುತ್ತಿದ್ದು ಯಾವುದೇ ಪತ್ರಕರ್ತರು ಸಂಕಷ್ಟದಲ್ಲಿದ್ದಾಗ ಹಾಗೂ ಅನಾರೋಗ್ಯಕ್ಕಿಡಾದ ಹಾಗೂ ಮರಣಹೊಂದಿದಾಗ ಅವರಿಗೆ ಆರ್ಥಿಕ ನೆರವು ನೀಡುತ್ತಾ ಬರಲಾಗುತ್ತಿದೆ.
ಈಗ ಈಚೆಗೆ ನಿಧನ ಹೊಂದಿದ ಹಿರಿಯ ಪತ್ರಕರ್ತರಾಗಿದ್ದ ದಿವಂಗತ ಎಸ್,ಕೆ, ಮಾವನೂರ್ ಅವರ ಕುಟುಂಬಕ್ಕೆ ಸಹಾಯ ನಿಟ್ಟಿನಲ್ಲಿ ಆರ್ಥಿಕ ಸಹಾಯ ನೀಡಲಾಯಿತು.
ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಭವಾನಿ ಸಿಂಗ್ ಠಾಕೂರ್ ಅವರು ಇಂದು ಎಸ್ಕೆ ಮಾವನೂರ್ ಅವರ ಧರ್ಮಪತ್ನಿ ಶಾರದಾ ಸಿದ್ದರಾಮಪ್ಪ ಅವರಿಗೆ ಚೆಕ್ ಮುಖಾಂತರ ಅಲ್ಪ ಧನ ಸಹಾಯ ಮಾಡಿ, ಮಾವನೂರ್ ಅವರ ಆತ್ಮಕ್ಕೆ ಶಾಂತಿ ಕೋರಿ ಅವರ ಕುಟುಂಬಕ್ಕೆ ಪತ್ರಕರ್ತರ ಸಂಘವು ಸದಾ ನಿಮ್ಮ ಹಿಂದೆ ಇರುತ್ತದೆ ಸಹಾಯ-ಸಹಕಾರ ನೀಡುತ್ತದೆ ಎಂದು ಸಾಂತ್ವನ ಹೇಳಿದರು.
ಸಂಘದ ಪ್ರಧಾನ ಕಾರ್ಯದರ್ಶಿ ದೇವೇಂದ್ರಪ್ಪ ಅವಟಿ, ಖಜಾಂಚಿ ರಾಜು ದೇಶಮುಖ್, ರಾಜ್ಯ ಸಮಿತಿಯ ಸದಸ್ಯರಾದ ದೇವೇಂದ್ರಪ್ಪ ಕಪನೂರ್, ಹಣಮಂತರಾವ್ ಭೈರಾಮಡಗಿ, ಕಾರ್ಯಕಾರಿ ಸಮಿತಿ ಸದಸ್ಯರಾದ ಅರುಣ್ ಕದಮ್, ವಿಜಯ ಕುಮಾರ್ ವಾರದ್, ಭೀಮಪ್ಪ, ಶೇಕ್ ಬಾಬಾ, ಶರಣು ಕ ಡಾ ಳೆ, ಶರಣ ಬಸಪ್ಪ ಮಾವನೂರ್ ಅಣ್ಣಾರಾವ್ ಭೋಗ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here