ವಾರಾಂತ್ಯದ ಕಠಿಣ ಲಾಕ್‌ಡೌನ್ ಇಲ್ಲ ಸಾಮಾನ್ಯ ಲಾಕ್‌ಡೌನ್ ಮುಂದುವರಿಕೆ

0
2473

ಕಲಬುರಗಿ, ಜೂನ್. 02: ಕೊರೊನಾ ಮಾಮಾರಿಯನ್ನು ನಿಯಂತ್ರಿಸಲು ಹಾಗೂ ಕೊರೊನಾ ಕೊಂಡಿಯನ್ನು ಕಟ್ ಮಾಡಲು ಜಿಲ್ಲಾಡಳಿತ ಕೈಗೊಂಡ ವಾರಾಂತ್ಯದ ಲಾಕ್‌ಡೌನ್ ಫಲಶ್ರುತಿ ಕಂಡಿದ್ದು, ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ನೂರರ ಆಸುಪಾಸಿನಲ್ಲಿ ಬರುತ್ತಿದ್ದ ಕೊರೊನಾ ಹೊಸ ಪ್ರಕರಣಗಳ ಹಿನ್ನೆಲೆಯಲ್ಲಿ ಈ ಬಾರಿಯ ವಾರಾಂತ್ಯದ ಲಾಕ್‌ಡೌನ್ ಮಾಡದಿರಲು ಜಿಲ್ಲಾಡಳಿತ ನಿರ್ಧರಿಸಿದೆ.
ಸಾಮಾನ್ಯ ಲಾಕ್‌ಡೌನ್ ಜೂನ್ 7ರ ವರೆಗೆ ಮುಂದುವರೆಯಲಿದ್ದು, ಈ ಅವಧಿಯಲ್ಲಿ ಸಾರ್ವಜನಿಕರಿಗೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಮಾರುಕಟ್ಟೆಗಳಲ್ಲಿ ಖರೀದಿಗೆ ಅವಕಾಶ ನೀಡಲಿದೆ.
ಗುರುವಾರದಿಂದ ಜೂನ್ 7ರ ವರೆಗೆ ಸರಕಾರದ ಮಾರ್ಗಸೂಚಿಯಂತೆ ಲಾಕ್‌ಡೌನ್ ಮುಂದುವರೆಯಲಿದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜೂನ್ 7ರ ಬಳಿಕ ಸರಕಾರ ಪ್ರಕಟಿಸುವ ನಿರ್ಧಾರದ ಮೇಲೆ ಮುಂದಿನ ಲಾಕ್‌ಡೌನ್ ಅವಲಂಬಿಸಿದೆ. ರಾಜ್ಯದಲ್ಲಿ ಅನ್‌ಲಾಕ್ ಮಾಡಲು ಕೇಂದ್ರ ಸರಕಾರ ರಾಜ್ಯಗಳಿಗೆ ಮೂರು ಸಲಹೆಗಳನ್ನು ನೀಡಿದ್ದು, ಅದೆನೆಂದ್ರೆ ಕೊರೊನಾ ಪಾಸಿಟಿವಿಟ್ ದರ ಕನಿಷ್ಟ ಶೇ. 5ರ ಒಳಗೆ ಬರಬೇಕು, ಗ್ರಾಮಿಣ ಮತ್ತು ಸಮುದಾಯಗಳಲ್ಲಿ ಕೊರೊನಾ ಹಬ್ಬದಿರುವ ಬಗ್ಗೆ ದೃಡೀಪಡಿಸಿಕೊಳ್ಳಬೇಕು ಮತ್ತು ಅನ್‌ಲಾಕ್ ಅನ್ನು ಹಂತಹAತವಾಗಿ ಓಪನ್ ಮಾಡಿ, ಮತ್ತೆ ಕೊರನಾ ಹಬ್ಬದಿರಲಿ ಎಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಪಾಸಿಟಿವಿಟಿ ದರ ಕನಿಷ್ಟ ಒಂದು ವಾರ ಕಾಲವಾದರೂ ಶೇ. 5ರ ಒಳಗೆ ಬರಬೇಕು.

LEAVE A REPLY

Please enter your comment!
Please enter your name here