ಕಲಬುರಗಿ, ಮೇ. 26: ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಜೀವಾವಧಿ ಶಿಕ್ಷಾ ಬಂದಿಗಳನ್ನು ಸನ್ನಡತೆಯ ಆಧಾರದ ಮೇಲೆ ಅವಧಿಪೂರ್ವವಾಗಿ 125 ಕೈದಿಗಳನ್ನು ಬಿಡುಗಡೆ ಮಾಡಲು ಸರಕಾರ ಆದೇಶಿಸಿದ ಹಿನ್ನೆಲೆಯಲ್ಲಿ ಬುಧುವಾರ ಒಟ್ಟು 18 ಜನ ಕೈದಿಗಳನ್ನು ಬಿಡುಗಡೆ ಮಾಡಲಾಯಿತು.
ಬಿಡುಗಡೆಹೊಂದಿದವರಲ್ಲಿ 16 ಜನ ಪುರುಷ ಹಾಗೂ ಇಬ್ಬರು ಮಹಿಳಾ ಬಂದಿಗಳು ಸೇರಿದ್ದಾರೆ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರಾದ ಪಿ.ಎಸ್. ರಮೇಶ ಅವರು ತಿಳಿಸಿದ್ದಾರೆ.
ಬಿಡುಗಡೆ ಹೊಂದಿದ ಅರ್ಹ ಬಂದಿಗಳ ಹೆಸರುಗಳು ಇಂತಿವೆ. ಪಿ. ಕುಮಾರಸ್ವಾಮಿ ತಂದೆ ಪುಟ್ಟಸ್ವಾಮಿಗೌಡ, ರಶೀದ್ ತಂದೆ ಹೈದರ್‌ಖಾನ್, ಯಲಗೊಂಡ ತಂದೆ ಸಿದ್ದಪ್ಪ, ಶರಣಬಸವ ತಂದೆ ಹನುಮಂತಪ್ಪ, ಸೈಯದ ಮಹಮದ ಪಾಶಾ ತಂದೆ ಗುಲಾಮ ಮಹ್ಮದ, ಮಲ್ಲಣ್ಣ ತಂದೆ ಸಿದ್ದಣ್ಣ ಪಾಟೀಲ, ಮರಗಪ್ಪ ತಂದೆ ಸಾಬಣ್ಣ ಡೊಳ್ಳೆನೂರ, ಮರಗಪ್ಪ ತಂದೆ ಮಾರ್ಕಪ್ಪ ಬಾತಪ್ಪನೋರ, ಬಸವರಾಜ ತಂದೆ ಮಾಣಿಕರಾವ್, ರೇವಣಸಿದ್ದಪ್ಪ ತಂದೆ ಸಾಯಿಬಣ್ಣಪ್ಪ, ಗೋಪಾಲನಾಯ್ಕ ತಂದೆ ರೇಖ್ಯಾನಾಯ್ಕ, ಕಲ್ಲಪ್ಪ ತಂದೆ ಚನ್ನಮಲ್ಲಪ್ಪ ಕಾಡಾ, ಸಂಗಪ್ಪ ತಂದೆ ಹುಸೇನಪ್ಪ, ಸಣ್ಣ ಮುದುಕಪ್ಪ ತಂದೆ ಲಾಲಸಿಂಗ್, ಸಾಬಣ್ಣ ತಂದೆ ನಿಂಗಪ್ಪ ಮಾಸ್ತರ, ಶೆಟ್ಟೆವ್ವ ಗಂಡ ತಿಮ್ಮಣ್ಣ ಮತ್ತು ಲಕ್ಷಿö್ಮÃ ಗಂಡ ಲಕ್ಷö್ಮಣ ವಡ್ಡರ ಅವರುಗಳಾಗಿದ್ದಾರೆ.