ಮಾನವೀಯತೆಗೆ ಇನ್ನೊಂದು ಹೆಸರೆ ಕಾಯಕ ಯೋಗಿ ಸೇವಾ ಸಂಸ್ಥೆ

0
883

ಕಲಬುರಗಿ ಜಿಲ್ಲೆಯಲ್ಲಿ “ಮಾನವ ಕುಲವೆ ತಲೆ ಎತ್ತಿ ನೋಡಬೇಕಾದಂತಹ”, ನಿಷ್ಕಲ್ಪಷ ಮನೋಭಾವದ, ನಿರ್ಗತಿಕರ ಬಾಳಿನ ಜೀವನ ಜ್ರ‍್ಯೋತಿ ಹೆಸರೇ ಸೂಚಿಸುವಂತಹ ಕಾಯಕ ಯೋಗಿ ಸೇವಾ ಸಂಸ್ಥೆ.ಹೌದು, ಈ ಸಂಸ್ಥೆಯ ಅಧ್ಯಕ್ಷ ಕೇದಾರನಾಥ ಕುಲಕರ್ಣಿ ಎಂಬುವರು. ಮೂಲಶಃ ಆಳಂದ ತಾಲೂಕಿನ ಎಲೆನಾವದಗಿ ಗ್ರಾಮದವರು. ಆತ್ಯಂತ ಬಡ ಕುಟುಂದಲ್ಲಿ ಬೆಳೆದು ಬಂದ ಇವರು ತಮ್ಮ ಶೈಕ್ಷಣಿಕ ಜೀವನದ ಜೊತೆಗೆ. ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ.

ಈಗ “ಕಾಯಕ ಯೋಗಿ ಸೇವಾ ಸಂಸ್ಥೆ” ಒಂದನ್ನು ನಿರ್ಮಿಸಿಕೊಂಡು ಯಾವುದೇ ಅಪೇಕ್ಷೆ ಇಲ್ಲದೆ, ಯಾರ ಸಹಕಾರ ಬಯಸದೆ, ಅಸಹಾಯಕರಲ್ಲಿ, ನಿರ್ಗತಿಕರಲ್ಲಿ ವಯಸ್ಕರರದಲ್ಲ್ಲಿ ನಾ ಭಗವಂತನನ್ನು ಕಾಣುವೆ ಎಂಬ ಮನೋಭಾವದಿ ಕಾರ್ಯಗೈಯುತ್ತಾ ಬಂದಿದ್ದಾರೆ.

2015 ರಲ್ಲಿ ಪ್ರಾರಂಭವಾದ ಈ ಸಂಸ್ಥೆ ಈಗ ಇಡೀ ಮಾನವೆ ಕುಲವೆ ನೋಡಿ ಹೆಮ್ಮೆ ಪಡುವಂತೆ ಬೆಳೆದು ನಿಂತಿದೆ. ಯಾಕೆ ಆಂದ್ರೆ. ಕಲಿಯುಗ ದಂತಹ ಯುಗದಲ್ಲಿ ಇಂತಹ ಒತ್ತಡದ ಪರಿಸ್ಥಿತಿಗಳಲ್ಲಿ ಮನುಷ್ಯ ಸ್ನಾರ್ಥವೆ0ಬ ಭೂತಕ್ಕೆ ಆರಟಿಕೊಂಡು, ನಾನು ನನ್ನದು ಎನ್ನುವ ಆಹಂ ಭಾವದಿ ಮೆರೆಯುತ್ತಾ ಇದ್ದಾನೆ. ಆತ್ಮೀಯರು ಮುಂದೆ ಸಿಕ್ಕಾಗ ನಮಸ್ಕಾರ ಹೇಳಲು ಪುರುಸೊತ್ತು ಇರದ ಈ ಜನರ ನಡುವೆ ಇಂತಹ ಅತ್ಯದ್ಭುತ

ಕ್ತಿತ್ವ ಉಳ್ಳ ವ್ಯಕ್ತಿಗಳು ಇದ್ದಾರೆ ಎಂದರೆ ಆದು ಕೇದಾರನಾಥ ಕುಲಕರ್ಣಿ ಅವರು.
ಯಾಕೆ ಅಂದ್ರೆ, ನಿರ್ಗತಿಕರ ಅಳಲನ್ನು ಆಲಿಸಿ ವಯಸ್ಮರ ಮನದ ಭುಗಿಲಿಗೆ ಸ್ಪಂದಿಸಿ ಅಂತವರಿಗೆ ಊಟ, ವಸತಿ, ಉಡಲು ಬಟ್ಟೆ, ನೀರು ಮುಂತಾದ ಮೂಲಭೂತ ಸೌಕರ್ಯಗಳನ್ನು ವದಗಿಸುವ ಮೂಲ ಮಾನವೀಯ ಮೌಲ್ಯ ಎಂದರೇನೆAಬ ಪದದ ಅರ್ಥ ತಳಸಿ ಕೊಟ್ಟಿದ್ದಾರೆ. ಅಪ್ಟೇ ಅಲ್ಲದೆ. ಈ ಕೊರೋನಾ ಎಂಬ ಮಹಾಮಾರಿ ರೋಗ ಅವರಿಸಿದ ಕಾರಣ ಎಲ್ಲೆಡೆಯು ಲಾಕ್‌ಡೌನ್. ಆದ್ದರಿಂದ ನಾವು ನೀವುಗಳೆಲ್ಲರು ಕಂಡು ಕಾಣರಿಯದಂತೆ ನಮ್ಮ ಕುಟುಂಬ ನಮ್ಮ ಸಂಸಾರ ಸೇಫ್ ಎಂದು ಮನೆಯೊಳಗೆ ಲಾಕ್ ಆದದ್ದು ನಿಜ.

ಅಂತಹ ತುರ್ತು ಸ0ದರ್ಭದಲ್ಲಿಯೂ ನಿರರ್ಗಳ ಮನದಿ, ಸತತವಾಗಿ ಸರಿ ಸುಮಾರು 4 ತಿಂಗಳುಗಳ ಕಾಲ ಜಕ್ಕಿ, ಗೋಧಿ. ಬೇಳೆ. ಎಣ್ಣೆ. ಉಪ್ಪು. ಖಾರ. ತರಕಾರಿ ಈ ರೀತಿಯಾದ 600 ಪ್ಯಾಕೆಟ್ ಕಿಟ್ ಗಳನ್ನು ಮತ್ತು ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುವ ಆನೇಕ ಜನರಿಗೆ ಔಷಧಗಳನ್ನು ಸ್ವಂತವಾಗಿ ವೆಚ್ಚ ಭರಿಸಿ ಬೀದಿ ಬದಿಯ ನಿರ್ಗತಿಕರಿಗೆ. ಅಂಧರಿಗೆ. ಅನಾಥ ಮಕ್ಕಳಿಗೆ ಹಾಗೂ ವಯಸ್ಕರರಿಗೆ ನೀಡಿ ಮಾನವ ಧರ್ಮ ವತ್ತಿ ಹಿಡಿದಿದ್ದಾರೆ.

ಈಗಲೂ ಕೂಡ ಪತಿನಿತ್ಯ ಬೆಳಿಗ್ಗೆ 6 ಗಂಟೆಯಿAದ ನಿರ್ಗತಿಕರಿಗೆ ಊಟ ನೀಡಿ ಅವರ ಯೋಗ ಕ್ಷೇಮ ಏಜಾರಿಸಿ ತಮ್ಮ ಪ್ರತಿನಿತ್ಯದ ಕಾಯಕಕ್ಕೆ ತೆರಳುತ್ತಾರೆ.
ಇಷ್ಟೆ: ಅಲ್ಲದೆ, ತಮ್ಮ ವೈಯಕ್ತಿಕ ಬದುಕಿನಲ್ಲೂ ಮತ್ತೊಬ್ಬರು ನೋಡಿ ಅನುಸರಿಸುವಂತೆ ಬದುಕಿದ್ದಾರೆ. ಇಂತಹ ಹಲವಾರು ಜನರ ಬಾಳಿಗೆ ಬೆಳಕಾಗಿ ಬಾಳು ಬೆಳಗಿಸಿದ ಜ್ಯೋತಿ ಇವರು, ಇವರ ಸೇವೆ ಹೀಗೆ ಮುಂದುವರಿಯಲಿ ಮತ್ತೊಬ್ಬರಿಗೆ ಪ್ರೇರಣೆಯಾಗಲಿ.

LEAVE A REPLY

Please enter your comment!
Please enter your name here