ಕಲಬುರಗಿ, ಮೇ. 15: ಕಳೆದ ನಾಲ್ಕು ದಿನಗಳ ಹಿಂದೆಯಷ್ಟೆ ಬ್ಲಾö್ಯಕ್ ಫಂಗಸ್ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಲ್ಲಿಕಾರ್ಜುನ ಬೆಳಗುಂಪಿ ಅವರು ಶುಕ್ರವಾರ ತಡರಾತ್ರಿ ನಿಧನ ಹೊಂದಿದ್ದಾರೆ.
ಅವರನ್ನು ಚಿಕಿತ್ಸೆಗಾಗಿ ನಗರದ ರಿಂಗ್ ರಸ್ತೆಯ ಕ್ಯೂಪಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆಗೆ ಸ್ವಲ್ಪವೂ ಸ್ಪಂದಿಸದೇ ಇದ್ದಾಗ ವೈದ್ಯರು ನಿನ್ನೆ ಮಧ್ಯಾಹ್ನ ಅಷ್ಟೇ ಅವರನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದರು.
ನಂತರ ಅವರನ್ನು ಅವರ ಸ್ವಂತ ಮನೆಯಾದ ರಾಜಾಪೂರದ ಬಡಾವಣೆಗೆ ಕರೆದುಕೊಂಡು ಆರ್ಯುವೇದ ಚಿಕಿತ್ಸೆ ಮೂಲಕ ಗುಣಪಡಿಸಲು ಹಲವು ಚಿಕಿತ್ಸೆ ನೀಡಿದಾಗ ಅರ್ಧ ಗಂಟೆ ಕಾಲ ಕಣ್ಣುತೆರೆದು, ಅರ್ಧ ಲೋಟ ನೀರು ಕುಡಿದ ನಂತರ ಒಂದು ಗಂಟೆಯಲ್ಲಿ ಸಂಪೂರ್ಣವಾಗಿ ಅವರ ದೇಹ ನಿರ್ಷ್ಕಿಯವಾದ ಅವರನ್ನು ಜೀಮ್ಸ್ಗೆ ರಾತ್ರಿ ಕರೆದುಕೊಂಡು ಹೋದಾಗ ವೈದ್ಯರು ಮರಣ ಹೊಂದಿದ ಬಗ್ಗೆ ದೃಢಪಡಿಸಿದರು.
ನಿನ್ನೆ ತಾನೇ ಬ್ಲಾö್ಯಕ್ ಫಂಗಸ್ ಬಗ್ಗೆ ನಮ್ಮ ಮನೀಷ ಪತ್ರಿಕೆಯು ಮೊದಲನೇಯದಾಗಿ ಸುದ್ದಿ ಪ್ರಕಟಿಸಿತ್ತು.