ಕಲಬುರಗಿ: ಮೇ.5: ಅಪರಾಧಗಳನ್ನು ನಿಯಂತ್ರಿಸುವ ಉದ್ದೇಶದಿಂದ ಕೇಂದ್ರ ರ‍್ಕಾರದ ಮಹತ್ವಾಕಾಂಕ್ಷೆಯ ಒಂದೇ ಭಾರತ ಒಂದೇ ತರ‍್ತು ಕರೆ ಸಹಾಯವಾಣಿ ವ್ಯವಸ್ಥೆ ಜಾರಿಗಾಗಿ ಬುಧವಾರ ನಗರದ ಪೋಲಿಸ್ ಆಯುಕ್ತಾಲಯದ ಕಚೇರಿಯ ಆವರಣದಲ್ಲಿ ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ರೇವೂರ್ ಅವರು 8 ವಾಹನಗಳಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.
ವಾಹನದಲ್ಲಿ ಜಿಪಿಆರ್ ವ್ಯವಸ್ಥೆ ಇದೆ. ಇದರಿಂದಾಗಿ ಘಟನೆಯ ಕುರಿತು ತಕ್ಷಣವೇ ಮಾಹಿತಿ ದೊರಕಿ ವಾಹನವು ನೇರವಾಗಿ ಸ್ಥಳಕ್ಕೆ ಧಾವಿಸುತ್ತದೆ. ನಗರ ಪೋಲಿಸರು ಸಂಕಷ್ಟಕ್ಕೆ ಒಳಗಾದವರ ನೆರವಿಗೆ ನಿಲ್ಲುತ್ತಾರೆ. ಇದು ಕೇವಲ ಹದಿನೈದು ನಿಮಿಷಗಳಲ್ಲಿಯೇ ಆಗಲಿದೆ ಎಂದು ಅವರು ಹೇಳಿದರು.
ಈ ಸಂರ‍್ಭದಲ್ಲಿ ರೇವೂರ್ ಅವರು ಮಾತನಾಡಿ, ಕೇಂದ್ರ ರ‍್ಕಾರದ ಈ ಯೋಜನೆಯ ಜಾರಿಯಿಂದಾಗಿ ನಗರವನ್ನು ಅಪರಾಧ ಮುಕ್ತವನ್ನಾಗಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವಾಹನಗಳ ಸೌಲಭ್ಯದಿಂದಾಗಿ ಸರ‍್ವಜನಿಕರು ಸಮಸ್ಯೆಗೆ ಕೇವಲ 15 ನಿಮಿಗಳಿಗೆ ಪರಿಹಾರ ಪಡೆಯಲು ಸಾಧ್ಯವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಡೀ ರಾಷ್ಟ್ರದಲ್ಲಿಯೇ ಅಪರಾಧ ಕೃತ್ಯಗಳನ್ನು ನಿಗ್ರಹಿಸಲು ಈ ತರ‍್ತು ಹೊಸ ಸಹಾಯವಾಣಿ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ ಎಂದು ಅವರು ಶ್ಲಾಘಿಸಿದರು.
ಇಂತಹ ಯೋಜನೆಯ ಜಾರಿಗಾಗಿ ನಗರ ಪೋಲಿಸ್ ಆಯುಕ್ತ ಎನ್. ಸತೀಶಕುಮಾರ್ ಅವರು ಕಲ್ಯಾಣ ರ‍್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಒಂದು ಕೋಟಿ ರೂ.ಗಳ ನೆರವಿಗಾಗಿ ಪತ್ರ ಬರೆದಿದ್ದರು. ನಗರದ ಜನರ ಒಳಿತೇ ನನ್ನ ಧ್ಯೇಯವಾಗಿದೆ. ಸರ‍್ವಜನಿಕರ ಹಿತದೃಷ್ಟಿಗಾಗಿ ಸದಾ ಪೋಲಿಸ್ ಇಲಾಖೆಯೊಂದಿಗೆ ಇರುವುದಾಗಿ ಭರವಸೆ ನೀಡಿದ ಅವರು, ಸಂಚಾರಿ ಲೈಟ್ ಸುಧಾರಣೆಗಾಗಿ ಒಂದು ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಅದರ ಉಪಯೋಗ ಶೀಘ್ರ ಆಗಲಿ ಎಂದರು.
ಲಾಕ್‍ಡೌನ್ ಸಂರ‍್ಭದಲ್ಲಿ ಪೋಲಿಸರು ಬಹಳಷ್ಟು ಶ್ರಮವಹಿಸಿ ಕೆಲಸ ಕರ‍್ಯಗಳನ್ನು ಮಾಡುತ್ತಿದ್ದಾರೆ. ನಗರವು ಅಪರಾಧ ಮುಕ್ತವಾಗಬೇಕು. ಕಾನೂನು ಹಾಗೂ ಸುವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿ ಇರಬೇಕು ಎಂದು ಅವರು ಹೇಳಿದರು.
ಪ್ರಾದೇಶಿಕ ಆಯುಕ್ತ ಡಾ. ಎನ್.ವಿ. ಪ್ರಸಾದ್ ಅವರು ಮಾತನಾಡಿ, ನಗರದಲ್ಲಿ ದಿನದಿಂದ ದಿನಕ್ಕೆ ಜನಸಂಖ್ಯೆ ವೇಗವಾಗಿ ಬೆಳೆಯುತ್ತಿದೆ. ಈ ಸಂಬಂಧ ಪೋಲಿಸ್ ಆಯುಕ್ತರ ಕಚೇರಿ ಸ್ಥಾಪನೆಯಾಗಿ ಈಗಾಗಲೇ ಮೂರು ರ‍್ಷಗಳು ಕಳೆದಿವೆ. ಪೋಲಿಸರ ಎಲ್ಲ ತರ‍್ತು ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದು, ಕಾನೂನು ಹಾಗೂ ಸುವ್ಯವಸ್ಥೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದರು.
ನಗರ ಪೋಲಿಸ್ ಉಪ ಆಯುಕ್ತ ಎನ್. ಸತೀಶಕುಮಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಇಂತಹ ಸೇವೆ ರಾಷ್ಟ್ರವ್ಯಾಪಿಯಾಗಿದೆ. ಯಾವುದೇ ಸಮಸ್ಯೆ ಇದ್ದರೂ ಕೂಡಲೇ 112 ಸಂಖ್ಯೆಗೆ ಕರೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದರು.
ಅಮೇರಿಕದಲ್ಲಿ ತಂದೆ, ತಾಯಿ ಹೊಡೆದರೆ ಮಕ್ಕಳು 119ಕ್ಕೆ ಕರೆ ಮಾಡುತ್ತಾರೆ. ಈ ಕುರಿತು ಶಾಲಾ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ತಿಳುವಳಿಕೆ ನೀಡಲಾಗುತ್ತಿದೆ. ಭಾರತದಲ್ಲಿಯೂ ಸಹ 112 ಸಂಖ್ಯೆ ಸಹಾಯವಾಣಿ ಜಾರಿಯಾಗಿದೆ. ಯಾವುದೇ ಸಮಸ್ಯೆಯಾದರೂ ತಮಗೆ ಬೇಕಾದ ದೂರವಾಣಿ ಸಂಖ್ಯೆ ಸಿಗದೇ ಇದ್ದಾಗ ಹಾಗೂ 100 ತರ‍್ತು ಸಹಾಯವಾಣಿ ಸಂರ‍್ಕಕಕ್ಕೆ ಸಿಗದೇ ಇದ್ದಾಗ ಅದನ್ನು ಸರಿಪಡಿಸುವ ದಿಸೆಯಲ್ಲಿ 112 ಸಹಾಯವಾಣಿ ಸೌಲಭ್ಯ ಜಾರಿಗೆ ತರಲಾಗಿದೆ ಎಂದು ಅವರು ವಿವರಿಸಿದರು.
ಸರ‍್ವಜನಿಕರು ಅಪಘಾತ, ಕೊಲೆ, ಸರಗಳ್ಳತನ, ದರೋಡೆ, ಅತ್ಯಾಚಾರ, ರ‍್ಯಾಗಿಂಗ್, ಪುಡಿ ರೌಡಿಗಳ ಕಿರುಕುಳ, ವಂಚನೆ, ಅಗ್ನಿ ಅವಘಡ, ವಿಪತ್ತು ಸೇರಿದಂತೆ ಯಾವುದೇ ಸಮಸ್ಯೆ ಇದ್ದರೂ 112 ಸಹಾಯವಾಣಿಗೆ ಕರೆ ಮಾಡುವ ಮೂಲಕ ಪರಿಹಾರ ಕಂಡುಕೊಳ್ಳಿ ಎಂದು ಅವರು ಮನವಿ ಮಾಡಿದರು.
ಕರ‍್ಯಕ್ರಮದಲ್ಲಿ ನಗರ ಪೋಲಿಸ್ ಉಪ ಆಯುಕ್ತ ಡಿ. ಕಿಶೋರಬಾಬು, ಎಸಿಪಿ ಅಂಶುಕುಮಾರ್, ಪಿಐ ಮಹಾದೇವಪ್ಪ ಮುಂತಾದವರು ಉಪಸ್ಥಿತರಿದ್ದರು. ಪಿಐ ಸಿದ್ದೇಶ್ವರ್ ಗಡೆದ್ ಅವರು ಕರ‍್ಯಕ್ರಮ ನಿರೂಪಿಸಿದರು.