ಮದ್ಯ ಮಾರಾಟಕ್ಕಿಲ್ಲ ಲಾಕ್‌ಡೌನ್ ನಾಚಿಗೇಡು ಸರಕಾರ:ಚಂದ್ರಿಕಾ

0
1101

ಕಲಬುರಗಿ, ಏ. 26: ರಾಜ್ಯ ಅಷ್ಟೇ ಅಲ್ಲ ಇಡೀ ದೇಶದಲ್ಲಿ ಕೊರೊನಾ ತನ್ನ ಎರಡನೇ ಅಲೆಯಲ್ಲಿ ಸಾವಿರಾರು ಸಂಖ್ಯೆ ಯಲ್ಲಿ ಜನ ಪ್ರಾಣ ಹಿಂಡುತ್ತಿದ್ದರೇ ಇತ್ತ ಕರ್ನಾಟಕ ಸರಕಾರ ಮದ್ಯದಂಗಡಿಗಳಿಗೆ ಲಾಕ್‌ಡೌನ್ ವಿನಾಯಿತಿ ನೀಡುವುದರೊಂದಿಗೆ ಬಡ ಸಂಸಾರಗಳನ್ನು ಹಾಳುಮಾಡಲು ಹೊರಟಿದೆ ಎಂದು ಮಾಜಿ ಕವಿಕಾ ಅಧ್ಯಕ್ಷೆ ಚಂದ್ರಿಕಾ ಪರಮೇಶ್ವರ ಅವರು ಕಿಡಿಕಾರಿದ್ದಾರೆ.
ಇದಕ್ಕೆ ಮಹಿಳೆಯರೆಲ್ಲರೂ ಪ್ರತಿಭಟಿಸಬೇಕು, ರಾಜ್ಯ ಸರಕಾರ ನಡೆಯುವುದ ಮದ್ಯದಿಂದ ಬಂದ ಸುಂಕದಿAದಲೇ ಹೆಚ್ಚು ಎಂಬ ಅನಿಸಿಕೆ ಹಿನ್ನೆಲೆಯಲ್ಲಿ ಜನರ ಸುಲಿಗೆಗಿಳಿದಿದೆ, ಬೇರೆ ಯಾವ ವ್ಯವಹಾರದಿಂದ ಇಷ್ಟು ದೊಡ್ಡ ಮೊತ್ತದ ಟೆಕ್ಸ್ ಸರಕಾರಕ್ಕೆ ಬರದಿರುವುದರಿಂದ ಮದ್ಯದಂಡಗಳಿಗೆ ಬಂಪರ್ ಆಫರ್ ನೀಡಿದೆ.
ಲಾಕ್‌ಡೌನ್ ಸಮಯದಲ್ಲಿ ಎಲ್ಲವು ಬಂದ್ ಆಗಿದ್ದರಿಂದ ಮೊದಲೇ ಕೆಲಸವಿಲ್ಲದೇ ಬಡ ಕೂಲಿಕಾರ್ಮಿಕರು ಮನೆಯಲ್ಲಿಯೇ ಇದ್ದು ಊಟಕ್ಕೂ ಕೂಡ ಗತಿಯಿಲ್ಲದ ಇಂತಹ ಸಮಯದಲ್ಲಿ ಸರಕಾರ ಅವರ ನೆರವಿಗೆ ಬರದೇ ಇನ್ನಷ್ಟು ಅವರ ಹಣ, ರಕ್ತ ವನ್ನು ಹೀರುತ್ತಿದೆ ಎಂದಿದ್ದಾರೆ.
ಈ ಕೂಡಲೇ ಮುಖ್ಯಮಂತ್ರಿಗಳು ಎಚ್ಚೇತ್ತು, ಸರಕಾರ ಹೊರಡಿಸಿದ ಮದ್ಯದಂಗಡಿಗಳ ಬಂದ್ ಇಲ್ಲ ಎಂಬ ಆದೇಶವನ್ನು ಹಿಂಪಡೆದು, ಬಡ ಕೂಲಿಕಾರ್ಮಿಕರ ಕುಟುಂಬವನ್ನು ಉಳಿಸಿಬೇಕು, ಅಲ್ಲದೇ ಅವರ ನೇರವಿಗಾಗಿ ವಿಶೇಷ ಕೊರೊನಾ ಪ್ಯಾಕೇಜ್ ಘೋಷಿಸಿ, ಪಡಿತರ ಅಂಗಡಿಗಳ ಮೂಲಕ ಹೆಚ್ಚಿನ ಪಡಿತರ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here