ರಾಜ್ಯದಲ್ಲಿ ನಾಳೆಯಿಂದ 14 ದಿನ ಸಂಪೂರ್ಣ ಲಾಕ್‌ಡೌನ್

    0
    1201

    ಬೆಂಗಳೂರು, ಏ. 26: ಕೊರೊನಾ 2.0 ಅಲೇಯ ಹಿನ್ನೆಲೆಯಲ್ಲಿ ಹೆಚ್ಚುತ್ತಿರುವ ಸೋಂಕು ಹಾಗೂ ಸಾವಿನ ಪ್ರಕರಣಗಳ ಹಿನ್ನಲೆಯಲ್ಲಿ ಏಪ್ರಿಲ್ 27ರ ಸಂಜೆಯಿAದ ಮೇ 12ರ ವರೆಗೆ ರಾಜ್ಯದಲ್ಲಿ ಸಂಪೂರ್ಣ ಲಾಕ್‌ಡೌನ್ ಹೇರಲಾಗಿದೆ.
    ಈ ಕುರಿತಂತೆ ಇಂದು ನಡೆದ ಸಂಪುಟ ಸಭೆಯ ಬಳಿಕ ವಿಧಾನಸಭೆಯ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಘೋಷಣೆಯನ್ನು ಪ್ರಕಟಿಸಿದ ಸಿ.ಎಂ. ಯಡಿಯೂರಪ್ಪ ಅವರು, ಸಂಪುಟ ಸಹೊದ್ಯೋಗಿಗಳ ಹಾಗೂ ಕೋವಿಡ್ ಪರಿಣಿತರಿಂದ ಬದ ಸಲಹೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆಯಿಂದ 11 ದಿನಗಳು ಸಂಪೂರ್ಣ ಲಾಕ್‌ಡೌನ್ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಗಿದೆ. ನಂತರ ಯಾರಾದರೂ ವ್ಯಾಪಾರಕ್ಕಾಗಿ ಅಂಗಡಿ, ಮುಂಗಟ್ಟುಗಳು ತೆರೆದರೆ ಪೋಲಿಸರಿಂದ ಲಾಠೀ ರುಚಿ ನೋಡಬೇಕಾಗುತ್ತದೆ, ಲಾಕ್‌ಡೌನ್‌ನಿಂದ ಕೃಷಿ ಚಟುವಟಿಕೆ, ಕಟ್ಟಡ ಕೆಲಸ, ಹಲವು ಕಾರಖಾನೆಗಳಿಗೆ ವಿನಾಯಿತಿ ನೀಡಲಾಗಿದ್ದು, ಈ ಹದಿನಾಲ್ಕು ದಿನಕ್ಕೆ ಕರೊನಾ ಸಂಕಟ ಮುಗಿಯದಿದ್ದರೆ ಮುಂದೆ ಮತ್ತೆ ಒಂದು ವಾರ ಲಾಕ್‌ಡೌನ್ ರಾಜ್ಯದಲ್ಲಿ ಮುಂದುವರಿಸಲು ಸಹ ನಿರ್ಧರಿಸಲಾಗಿದೆ.
    ಹಾಲು, ತರಕಾರಿಗಳನ್ನು ಬೆಳಿಗ್ಗೆ 6 ರಿಂದ 10ರ ವರೆಗೆ 4 ಗಂಟೆಗಳ ಕಾಲ ಗ್ರಾಹಕರು, ಸಾರ್ವಜನಿಕರು ಖರಿದಿಗೆ ಅವಕಾಶ ಕಲ್ಪಿಸಲಾಗಿದೆ.
    ಜನರ ಸಹಕಾರಕೊಟ್ಟರೆ ಲಾಕ್‌ಡೌನ್ ಸಮಯದಲ್ಲಿ ಇಡೀ ದೇಶದಲ್ಲಿಯೇ ರಾಜ್ಯ ಕೊರೊನಾ ಓಡಿಸಲು ಸಹಕಾರಿಯಾಗುತ್ತದೆ, ಸಾರ್ವಜನಿಕರು ಮನೆಯಲ್ಲಿಯೇ ಇದ್ದು, ಅನಗತ್ಯವಾಗಿ ಹೋರಗೆ ಓಡಾಡಬಾರದು, ಎಲ್ಲರೂ ಕಡ್ಡಾಯವಾಗಿ ಕೈಗಳನ್ನು ಸೈನಿಟೈಸರ್‌ನಿಂದ ತೊಳೆದುಕೊಳ್ಳಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು.
    ಇನ್ನು ಸಾರಿಗೆ ಸಂಚಾರವನ್ನು ಸಹ ಸಂಪುರ್ಣವಾಗಿ ನಿಷೇಧಿಸಲಾಗಿದೆ.
    ಇನ್ನು ರಾಜ್ಯದಲ್ಲಿ ಕೊರೊನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಬೆಡ್‌ಗಳು, ಆಕ್ಸಿಜನ್ ಹಾಗೂ ರೆಮ್ಡಿಸಿವಿರ್‌ಗಳನ್ನು ಸಾಕಷ್ಟು ಪ್ರಮಾಣದಲ್ಲಿ ಒದಗಿಸಲು ಸರಕಾರ ಕಟ್ಟು ನಿಟ್ರಟಿನ ಕ್ರಮ ತೆಗೆದುಕೊಂಡಿದೆ.
    ಅಲ್ಲದೇ ಕೋವಿಡ್ ಸೋಂಕು ತಡೆಯಲು ರಾಜ್ಯದಾದ್ಯಂತ ಉಚಿತವಾಗಿ ಲಸಿಕೆ ನೀಡಲು ಸಹ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
    ಲಾಕ್‌ಡೌನ್ ಸಂದರ್ಭದಲ್ಲಿ ಯಾವುದೇ ಚುನಾವಣೆಗಳು ನಡೆಯದಂತೆ ಆಯೋಗಕ್ಕೆ ಶಿಫಾರಸ್ಸು ಮಾಡುತ್ತೇವೆ ಎಂದು ತಿಳಿದಿ ಬಿಎಸ್‌ವೈ. ಲಾಕ್‌ಡೌನ್ ಸಮಯದಲ್ಲಿ ಲೀಕರ್ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಮದ್ಯದಂಗಡಿಗಳು ಬಂದ್ ಇಲ್ಲ, ಪಾರ್ಸಲ್ ಮಾತ್ರ ಅವಕಾಶ ಮುಂದುವರೆಯಲಿದೆ.
    ಪತ್ರಿಕಾಗೋಷ್ಠಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಚಿವ ಆರ್. ಅಶೋಕ, ಆರೋಗ್ಯ ಸಚಿವ ಡಾ. ಸುಧಾಕರ್ ಸೇರಿದಂತೆ ಇನ್ನು ಹಲವಾರು ಜನ ಸಚಿವರು, ಶಾಸಕರು ಉಪಸ್ಥಿತರಿದ್ದರು.

    LEAVE A REPLY

    Please enter your comment!
    Please enter your name here