ಕಸವಿಲೇವಾರಿ ಮಾಡುವ ವಾಹನದಲ್ಲಿ ಊಟ ಸರಬರಾಜು ಮಾಡುತ್ತಿಲ್ಲ ವಲಯ ಆಯುಕ್ತ ಡಾ. ವಿನೋದ ಸ್ಪಷ್ಟೀಕರಣ

0
738

ಕಲಬುರಗಿ, ಏ. 24: ಕಸ ವಿಲೇವಾರಿ ಮಾಡುವ ವಾಹನದಲ್ಲಿ ಕೋವಿಡ್ ಹೆಲ್ಪಡೆಸ್ಕ್ ಸಿಬ್ಬಂದಿಗಳಿಗೆ ಊಟ ಸರಬರಾಜು ಮಾಡುತ್ತಿಲ್ಲ, ಸರಬರಾಜು ಮಾಡುತ್ತಿರುವ ವಾಹನ ಮಹಾನಗರಪಾಲಿಕೆಯ ಮಟೆರಿಯಲ್ ಹಾಗೂ ಉದ್ಘೋಷಣಾ ವಾಹನವಾಗಿದೆ ಎಂದು ಕಲಬುರಗಿ ಮಹಾನಗರಪಾಲಿಕೆಯ ವಲಯ ಆಯುಕ್ತ ಹಾಗೂ ಆರೋಗ್ಯಾಧಿಕಾರಿ ಡಾ. ವಿನೋದ ಅವರು ಸ್ಪಷ್ಟೀಕರಣ ನೀಡಿದ್ದಾರೆ.
ಈ ಕುರಿತು ದೂರವಾಣಿಯಲ್ಲಿ ಈ ಬಗ್ಗೆ ಮಾತನಾಡಿದ ಅವರು, ಬಿಸಿಲಿನ ಮಧ್ಯೆ ಹಾಕಿರುವ ತಾತ್ಕಾಲಿಕ ಹೆಲ್ಪಡೆಸ್ಕಗಳನ್ನು ನೆರಳಿರುವ ಕಡೆ ಸ್ಥಳಾಂತರಿಸುವದಾಗಿ ಹೇಳಿದ್ದು, ಅಲ್ಲದೇ ಇನ್ನು ಹೆಚ್ಚಿನ ವಾಹನದ ವ್ಯವಸ್ಥೆ ಕೂಡ ಮಾಡುವದಾಗಿ ಆಯುಕ್ತರು ಹೇಳಿದ್ದಾರೆ.

LEAVE A REPLY

Please enter your comment!
Please enter your name here