ಕಲಬುರಗಿ ಏ 21: ಸಿಮೆಂಟ್ ಮಿಕ್ಸರ್ ಲಾರಿ ಮತ್ತು ಟಂಟA ನಡುವೆ ಭೀಕರ ಅಪಘಾತ ಸಂಭವಿಸಿ ಐವರ ಮಹಿಳೆಯರು ಸಾವನ್ನಪ್ಪಿಧ್ದ ದಾರುಣ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಎಂ. ಕೋಳೂರು ಗ್ರಾಮದ ಬಳಿ ಇಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಸಂಭವಿಸಿದೆ.
ಮೃತರನ್ನು ಮನಮಟಗಿ ಗ್ರಾಮದ ದೇವೀಂದ್ರಮ್ಮ (57),ಅಯ್ಯಮ್ಮ (45), ಶರಣಮ್ಮ (35), ಉಮಾದೇವಿ (40) ಹಾಗೂ ಕಾಶೀಮ್‌ಬಿ (55) ಎಂದು ಗುರುತಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಮಲ್ಲಮ್ಮ (36) ಶರಣಗೌಡ (28), ಹಂಪಮ್ಮ (25), ಭಾಗ್ಯಶ್ರೀ (14) ಮತ್ತು ಗಂಗಮ್ಮ (38) ಎಂಬುವವರನ್ನು ಶಹಾಫುರ ತಾಲೂಕು ಆಸ್ಪತ್ರೆಗೆ ಸೇರಿಸಲಾಗಿದೆ.ಅವರಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ.
ವಡಗೇರಿ ತಾಲೂಕಿನ ಮನಮಟಗಿಯಿಂದ ದೇವದುರ್ಗ ತಾಲೂಕಿನ ಹೂವಿನ ಹಡಗಿಗೆ ಈ ಮಹಿಳೆಯರು ಕೂಲಿ ಕೆಲಸಕ್ಕೆ ಹೋಗುತ್ತಿದ್ದರು.
ಸಿಮೆಂಟ್ ಮಿಕ್ಸರ್ ಲಾರಿ ಶಹಾಪುರ ಕಡೆ ಹೊರಟಿತ್ತು. ಟಂಟAಗೆ ಡಿಕ್ಕಿ ಹೊಡೆದ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಶಹಾಪುರ ಪಿ.ಐ ಚನ್ನಯ್ಯ ಹಿರೇಮಠ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.