ಕಲಬುರಗಿಯಲ್ಲಿ ಆಕ್ಸಿಜನ್ ಕೊರತೆ ರೆಮಡಿಸಿವಿರ್‌ಗಾಗಿ ಹಾಹಾಕಾರ

0
1326

ಕಲಬುರಗಿ, ಏ. 19: ಕೊರೊನಾ ಈ ಶತಮಾನದ ಮಾನವ ಜನಾಂಗಕ್ಕೆ ಘೋರ ರೋಗವೆಂಬAತೆ ಎರಡು ವರ್ಷಗಳ ಹಿಂದೆ ಜನ್ಮತಾಳಿದ ಕೋವಿಡ್ 19ರಿಂದ ಇಡೀ ಜಗತ್ತೇ ತಲ್ಲಣಗೊಂಡಿದ್ದು, ಈ ಸೋಂಕು ಕಡಿಮೆಯಾಗುತ್ತಿದೆ ಅನ್ನುವಾಗಲೇ ಮತ್ತೇ ರೂಪಾಂತರಗೊAಡು 2ನೇ ಅಲೆ ಭಾರೀ ಜನ ಜೀವಕ್ಕೆ ಮಾರಕವಾಗಿ ಪರಿಣಮಿಸಿದೆ.
ಇದರಿಂದಾಗಿ ಕಲಬುರಗಿಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕುತರ ಸಂಖ್ಯೆ ಹೆಚ್ಚುತ್ತಿದ್ದು, ಸರಕಾರಿ ಸೇರಿದಂತೆ ಕೊರೊನಾ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಕೃತಕ ಉಸಿರಾಟಕ್ಕಾಗಿ ಬಳಸಲಾಗುತ್ತಿರುವ ಆಕ್ಸಿಜನ್ ಸಿಲೆಂಡರ್ ಕೊರೆತೆ ಉಂಟಾಗಿದ್ದಲ್ಲದೇ ಕೊರೊನಾಗೆ ರಾಮಬಾಣವೆಂಬAತೆ ರಿಮಡಿಸಿವಿರ್ ವಾಯಿಲ್ ಇಂಜಕಷನ್ ಕೂಡಾ ಎಲ್ಲಿಯೂ ಸಿಗದೇ ರೋಗಿಗಳ ಪಾಲಕರು ಕಂಗಾಲಾಗಿದ್ದಾರೆ.
ಇನ್ನು ನಗರದಲ್ಲಿ ರೆಮಿಡಿಸಿವಿರ್ ಚುಚ್ಚುಮದ್ದಿಗಾಗಿ ಆನ್‌ಲೈನ್‌ನಲ್ಲಿ ನೊಂದಣಿ ಮಾಡಿದರೆ ಯಾರಿಗೆ ಈ ರೆಮಡಿಸಿವಿರ್ ಅಗತ್ಯವಿದಯೇ ಅಂತಹ ಪೆಸೆಂಟ್ ಮೊಬೈಲ್ ಸಂಖ್ಯೆಗೆ ಓಟಿಪಿ ಬಂದು ಅವರಿದ್ದಲ್ಲಿಗೆ ಆ ಔಷಧಿ ಲಭ್ಯವಾಗುವುದು. ಅಲ್ಲದೇ ಈ ಔಷಧಿಗಾಗಿ ಹೆಚ್ಚಿನ ಹಣ ಕೊಟ್ಟು ಕಾಳ ಸಂತೆಯಲ್ಲಿ ಖರೀದಿಸುವುದು ತಪ್ಪುತದೆ ಎಂದು ನಗರದ ಯುನೈಟೆಡ್ ಆಸ್ಪತ್ರೆಯ ವೈದ್ಯರಾದ ಡಾ. ವಿಕ್ರಂ ಸಿದ್ದಾರೆಡ್ಡಿ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here