![](https://manishpatrike.com/wp-content/uploads/2021/02/200211145704-04-coronavirus-0206-wuhan-exlarge-169.jpg)
![](https://manishpatrike.com/wp-content/uploads/2021/02/200211145704-04-coronavirus-0206-wuhan-exlarge-169.jpg)
ಕಲಬುರಗಿ, ಏ. 16: ಶುಕ್ರವಾರ ಕಲಬುರಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿಗೆ 3 ಜನರು ಬಲಿಯಾಗಿದ್ದು, ಹೊಸದಾಗಿ 488 ಜನರು ಸೋಂಕಿನಿAದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದ ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದೆ.
ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 246 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇಂದಿನ ಈ ಸಂಖ್ಯೆ ಸೇರಿ 25037 ಜನರು ಬಿಡುಗಡೆಯಾದಂತಾಗಿದೆ.
ನಿನ್ನೆ ಗುರುವಾರ ಜಿಲ್ಲೆಯಲ್ಲಿ 624 ಜನರಿಗೆ ಸೋಂಕು ತಗುಲಿದ್ದು, ಇಂದು ಸ್ವಲ್ಪ ಮಟ್ಟಿಗೆ ಈ ಸಂಖ್ಯೆ ಇಳಿದಂತಾಗಿದೆ.
ಶುಕ್ರವಾರ 3 ಜನ ಸೇರಿ ಒಟ್ಟು ಇಲ್ಲಿಯವರೆಗೆ 375 ಜನರು ಸಾವನ್ನಪ್ಪಿದ್ದಾರೆ.
ಇಂದು 488 ಸೇರಿದಂತೆ ಈ ವರೆಗೆ 28317 ಪಾಸಿಟೀವ್ ಪ್ರಕರಣಗಳಾಗಿವೆ.
ಒಟ್ಟು 2908 ಸಕ್ರೀಯ ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.