ಏ. 2ರಂದು ನಡೆವ ಶ್ರೀ ಶರಣಬಸವೇಶ್ವರ ಜಾತ್ರೆ ಮನೆಯಲ್ಲ್ಲಿಯೇ ಶರಣನ ಕೃಪೆಗೆ ಪಾತ್ರರಾಗಿ ಡಾ. ಅಪ್ಪಾಜಿ ಮನವಿ

0
1319

ಕಲಬುರಗಿ;ಮಾ.24: ಶ್ರೀ ಶರಣಬಸವೇಶ್ವರ ಸಂಸ್ಥಾನದ 8ನೇ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪಾಜಿಯವರು ಮಹಾದಾಸೋಹಿ ಶ್ರೀ ಶರಣಬಸವೇಶ್ವರರ ಪುಣ್ಯಸ್ಮರಣೋತ್ಸವದ ಅಂಗವಾಗಿ ಏಪ್ರಿಲ್ 2 ರಂದು ಜರುಗಲಿರುವ 199ನೇ ಜಾತ್ರಾ ಮಹೋತ್ಸವ ನಿಮಿತ್ತ ಸಾವಿರಾರು ಭಕ್ತರು ತಮ್ಮ ತಮ್ಮ ಮನೆಗಳಲ್ಲಿದ್ದುಕೊಂಡೆ ಶರಬಸವೇಶ್ವರರ ಕೃಪೆಗೆ ಪಾತ್ರರಾಗಬೇಕೆಂದು ಭಕ್ತರಲ್ಲಿ ಡಾ. ಅಪ್ಪಾಜಿ ಮನವಿ ಮಾಡಿಕೊಂಡಿದ್ದಾರೆ.

ಡಾ. ಅಪ್ಪಾಜಿ ಅವರು ಮಾತನಾಡುತ್ತಾ, ಹೆಚ್ಚುತ್ತಿರುವ ಕೊರೋನಾ ಮತ್ತು ಸರಕಾರ ಹಾಗೂ ಜಿಲ್ಲಾಡಳಿತ ಹೊರಡಿಸಿದ ಹೊಸ ಮಾರ್ಗಸೂಚಿ, ಸ್ಟ್ಯಾಂಡರ್ಡ್ ಆಫ್ ಆಪರೇಷನ್ ಪೊಸೀಜರ್ಸ್ ಗಮನದಲ್ಲಿಟ್ಟುಕೊಂಡು ಜಾತ್ರಾಮಹೋತ್ಸವ ಮತ್ತು ಇತರ ಕಾರ್ಯಗಳಲ್ಲಿ ಭಕ್ತರು ಪಾಲ್ಗೊಳುವದನ್ನು ಮೊಟಕುಗೊಳಿಸಿದೆ ಎಂದು ಹೇಳಿದರು.
ಶ್ರೀ ಶರಣಬಸವೇಶ್ವರರ ಭಕ್ತರಿಗೆ ಏಪ್ರಿಲ್ 2 ಅತ್ಯಂತ ಶುಭದಿನ. ಹೀಗಾಗಿ ದೇವರ ದರ್ಶನ ಪಡೆಯಬೇಕೆಂದು ಭಕ್ತರೆಲ್ಲರೂ ಶ್ರೀ ಶರಣಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವದನ್ನು, ಹೆಚ್ಚುತ್ತಿರುವ ಕೋವಿಡ್- 19 ರ ಹೊಸ ಪ್ರಕರಣಗಳಿಂದಾಗಿ ತಡೆಹಿಡಿಯಲಾಗಿದೆ, ತದನಿಮಿತ್ತ ದೇವಸ್ಥಾನಕ್ಕೆ ಆಗಮಿಸಬಾರದೆಂದು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಡಾ. ಅಪ್ಪಾಜಿ ಮಾತನಾಡಿ, ಈ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಡುತ್ತಿರುವ ಸರಕಾರಿ ಅಧಿಕಾರಿಗಳೊಂದಿಗೆ ಕೈಜೋಡಿಸುವುದು ಮತ್ತು ಸಹಕರಿಸುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದರು. ಶರಣಬಸವೇಶ್ವರರ ಭಕ್ತರಿಗೆ ತಮ್ಮ ಧಾರ್ಮಿಕ ದಿನಚರಿಯಲ್ಲಿ ಶ್ರೀ ಶರಣಬಸವೇಶ್ವರ ಜಾತ್ರೆಯೂ ಅತ್ಯಂತ ಮಹತ್ವದ ದಿನವಾಗಿರುತ್ತದೆ. ಭಕ್ತರೆಲ್ಲರೂ ದಿನಪೂರ್ತಿ ಉಪವಾಸವಿದ್ದು, ಶ್ರೀ ಶರಣಬಸವೇಶ್ವರರ ರಥೋತ್ಸವದಲ್ಲಿ ಭಾಗಿಯಾಗಿ, ರಥೋತ್ಸವ ಜರುಗಿದ ನಂತರ ಪ್ರಸಾದ ಸೇವಿಸುವ ಮೂಲಕ ದೇವರಲ್ಲಿ ತಮ್ಮ ಭಕ್ತಿ ಪ್ರದರ್ಶಿಸುವ ವಾಡಿಕೆಯಿತ್ತು. ಆದರೆ ಈ ವರ್ಷ ಭಕ್ತರೆಲ್ಲರೂ ರಥೋತ್ಸವದಲ್ಲಿ ಭಾಗಿಯಾಗದೇ, ತಮ್ಮ ತಮ್ಮ ಮನೆಯಲ್ಲಿದ್ದುಕೊಂಡು ದೇವರ ದಯೆಗೆ ಪಾತ್ರರಾಗಬೇಕು ಎಂದರು.
ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇ???ಪರ್ಸ???ರಾದ ಪೂಜ್ಯ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ ಮಾತನಾಡಿ, ಭಕ್ತರೆಲ್ಲರೂ ಏಪ್ರಿಲ್ 2ರಂದು ದೇವಾಲಯಕ್ಕೆ ಭೇಟಿ ನೀಡುವ ಬದಲು, ತಮ್ಮ ತಮ್ಮ ಮನೆಗಳಲ್ಲಿ ಇದ್ದು, ಇಡೀ ಮಾನವಕುಲದ ಕಲ್ಯಾಣಕ್ಕಾಗಿ ಪ್ರಾರ್ಥಿಸಬೇಕು ಮತ್ತು ಶ್ರೀ ಶರಣಬಸವೇಶ್ವರರ ಆಶೀರ್ವಾದ ಪಡೆಯಬೇಕು ಹಾಗೂ ಈ ಕೋವಿಡ-19ರ ಭೀತಿಯನ್ನು ಕೊನೆಗೊಳಿಸುವಂತೆ ಶ್ರೀ ಶರಣಬಸವೇಶ್ವರರಲ್ಲಿ ಪ್ರಾರ್ಥಿಸಬೇಕು ಎಂದರು.

LEAVE A REPLY

Please enter your comment!
Please enter your name here