ಶಹಾಬಾದ ನಗರಸಭೆಯ ವಾರ್ಡ್ ನಂ. 18ಕ್ಕೆ ಮಾರ್ಚ 30ರಂದು ಉಪಚುನಾವಣೆ

0
1042

ಕಲಬುರಗಿ,ಮಾ.10:ವಿವಿಧ ಕಾರಣಗಳಿಂದ ತೆರವಾದ ಕಲಬುರಗಿ ಜಿಲ್ಲೆಯ ಶಹಾಬಾದ ನಗರಸಭೆಯ ವಾರ್ಡ್ ಸಂಖ್ಯೆ 18ರ (ಲಕ್ಷಿö್ಮÃಗಂಜ್ ಮತ್ತು ಹರಳಯ್ಯ ನಗರ) ಸದಸ್ಯ ಸ್ಥಾನಕ್ಕೆ ಉಪ ಚುನಾವಣೆ ನಡೆಸಲು ಕಲಬುರಗಿ ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸಾö್ನ ಅವರು ಬುಧವಾರ ವೇಳಾಪಟ್ಟಿ ಪ್ರಕಟಿಸಿ ಅಧಿಸೂಚನೆ ಹೊರಡಿಸಿದ್ದಾರೆ.
ಶಹಾಬಾದ ನಗರಸಭೆಯ ವಾರ್ಡ್ ನಂ. 18ರ (ಲಕ್ಷಿö್ಮÃಗಂಜ್ ಮತ್ತು ಹರಳಯ್ಯ ನಗರ) ಸದಸ್ಯ ಸ್ಥಾನವನ್ನು ಅನುಸೂಚಿತ ಪಂಗಡಕ್ಕೆ ಮೀಸಲಿಡಲಾಗಿದೆ. ನಾಮಪತ್ರ ಸಲ್ಲಿಸಲು ಮಾರ್ಚ್ 17ರಂದು ಕೊನೆಯ ದಿನವಾಗಿದ್ದು, ಮಾರ್ಚ್ 18ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಉಮೇದುವಾರಿಕೆ ಹಿಂಪಡೆಯಲು ಮಾರ್ಚ್ 20ರಂದು ಅಂತಿಮ ದಿನವಾಗಿರುತ್ತದೆ. ಅವಶ್ಯವಿದ್ದಲ್ಲಿ ಮತದಾನವು ಮಾರ್ಚ್ 29 ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು. ಮರುಮತದಾನದ ಅವಶ್ಯವಿದ್ದಲ್ಲಿ ಮತದಾನವನ್ನು ಮಾರ್ಚ್ 30 ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯವರೆಗೆ ನಡೆಸಲಾಗುವುದು ಮಾರ್ಚ್ 31ರಂದು ಬೆಳಿಗ್ಗೆ 8 ಗಂಟೆಯಿAದ ತಾಲೂಕು ಕೇಂದ್ರ ಸ್ಥಳದಲ್ಲಿ ಮತ ಎಣಿಕೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here