ಎಸ್ಟಿಗೆ ಸೇರಿಸಲು ಆಗ್ರಹಿಸಿ ಎಪ್ರಿಲ್ 15ರಂದು ದೆಹಲಿಯಲ್ಲಿ ಕೋಲಿ ಸಮಾಜದ ಬ್ರಹತ್ ಸಮಾವೇಶ

0
1710

ಕಲಬುರಗಿ, ಮಾ. 10: ಕೋಲಿ ಸಮಾಜವನ್ನು ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆಗೊಳಿಸಲು ಆಗ್ರಹಿಸಿ ಮುಂದಿನ ತಿಂಗಳು ಎಪ್ರಿಲ್ 15ರಂದು ದೆಹಲಿಯ ರಾಮಲೀಲಾ ಮೈದಾದನದಲ್ಲಿ ಕೋಲಿ ಸಮಾಜದ ಬೃಹತ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ರಾಜ್ಯ ಟೋಕರೆ ಕೋಲಿ, ಕಬ್ಬಲಿಗ ಸಂಘದ ರಾಜ್ಯಾಧ್ಯಕ್ಷರಾದ ಬಸವರಾಜ ಎಸ್. ಹರವಾಳ ಅವರು ಹೇಳಿದ್ದಾರೆ.
ಅವರಿಂದಿಲ್ಲಿ ಪತ್ರಿಕಾ ಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಈ ಸಮಾವೇಶದ ಸಾನಿಧ್ಯವನ್ನು ಹೊಸಳ್ಳಿಯ ಅಲ್ಲಂಪ್ರಭು ಪೀಠದ ಮಹಾಸ್ವಾಮಿಗಳಾದ ಶ್ರೀ ಶ್ರೀ ಶ್ರೀ ಮಲ್ಲಣಪ್ಪ ಅವರು ವಹಿಸಲಿದ್ದಾರೆ.
ಕೇಂದ್ರ ಸಚಿವರಾದ ಸಾದ್ವಿ ನಿರಂಜನಾ ಜ್ಯೋತಿ ಉದ್ಘಟನೆಯನ್ನು ನೆರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಖಿಲ ಭಾರತೀಯ ಕೋಲಿ ಸಮಾಜದ ಅಧ್ಯಕ್ಷರಾದ ಕುಮಾರಭಾಯಿ ಭಾವಲಿಯ, ಮಾಜಿ ಅಧ್ಯಕ್ಷರಾದ ಸತ್ಯನಾರಾಯಣ ಪವಾರ್, ಮುಂಬಯಿ ಕೋಲಿ ಸಮಾಜದ ಅಧ್ಯಕ್ಷರೂ ಹಾಗೂ ವಿಧಾನ ಪರಿಷತ್ ಸದಸ್ಯರಾದ ರಮೇಶ ದಾದಾ ಪಾಟೀಲ್, ರಾಷ್ಟಿçà ಮುದಿರಾಜ ಮಹಾಸಂಘದ ಅಧ್ಯಕ್ಷರಾದ ಕಸಾನಿ ಜ್ಞಾನೇಶ್ವರ, ಲೋಕಸಭಾ ಸದಸ್ಯರುಗಳಾದ ಡಾ. ಉಮೇಶ ಜಾಧವ, ಭಗವಂತ ಖೂಬಾ, ಪ್ರವೀಣ ಭಾಯಿ ಗುಜರಾತ, ವಿಕ್ರಂಭಾಯಿ ಸೊಲಾನಿ, ಅಲ್ಲದೇ ಹಲವಾರು ರಾಜ್ಯಗಳ ಕೋಲಿ ಸಮಾಜದ ಮುಖಂಡರು, ವಿಧಾನ ಸಭೆಯ, ಪರಿಷತ್‌ನ ಸದಸ್ಯರುಗಳು ಆಗಮಿಸಲಿದ್ದಾರೆ.
ಈ ಬೃಹತ್ ಸಮಾವೇಶದಲ್ಲಿ ಕೋಲಿ ಸಮಾಜದ ಬಾಂಧವರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸುವ ಪರಿಶಿಷ್ಟ ಪಂಗಡಕ್ಕೆ ಸಮಾಜವನ್ನು ಸೇರ್ಪಡೆಗೊಳಿಸಲು ಕೇಂದ್ರದ ಮೇಲೆ ಒತ್ತಾಯ ಹೇರಲು ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಅವರು ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯಾಧ್ಯಕ್ಷರಾದ ರೇವಣಸಿದ್ದಪ್ಪಾ ಹಲಚೇರಿಕರ್, ಪ್ರಧಾನ ಕಾರ್ಯದರ್ಶಿ ತಿಪ್ಪಣ್ಣ ಸರಡಗಿ, ಸಹ ಕಾರ್ಯದರ್ಶಿ ದೇವೀಂದ್ರ ಹರವಾಳ ಅವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here