ಪೋಲಿಸ್ ಕ್ರೀಡಾಕೂಟ ನಿಮಿತ್ಯ ಕ್ರಿಕೆಟ್ ಪಂದ್ಯ ಪತ್ರಕರ್ತರ ಸಂಘಕ್ಕೆ ರನ್ನರ್‌ಅಪ್ ಪ್ರಶಸ್ತಿ

0
839

ಕಲಬುರಗಿ, ಮಾ. 6: ಜಿಲ್ಲಾ ಪೋಲಿಸ್ ಕ್ರೀಡಾಕೂಟದ ಅಂಗವಾಗಿ ಕಳೆದ 4ರಂದು ನಡೆದ ಪೋಲಿಸ್ ಎಲೆವನ್ ತಂಡದ ವಿರುದ್ಧ ಸೋಲುನಭವಿಸಿದ ಪತ್ರಕರ್ತರ ಎಲೆವನ್ ತಂಡವು ಇಂದು ರನ್ನರ್‌ಅಪ್ ಪ್ರಶಸ್ತಿ ಪಡೆದುಕೊಂಡಿತ್ತು.
ಪೋಲಿಸ್ ಪರೇಡ ಮೈದಾನದಲ್ಲಿ ಶನಿವಾರ ನಡೆದ ಸಮಾರೋಪ ಸಮಾರಂಭದAಗವಾಗಿ ವಿಜೆತ್ ತಂಡಗಳಿಗೆ ಪ್ರಶಸ್ತಿಯನ್ನು ಇಂದು ನಗರ ಪೋಲಿಸ್ ಆಯುಕ್ತ ಸತೀಷಕುಮಾರ, ನಗರ ಉಪಪೋಲಿಸ ಆಯುಕ್ತ ಡಿ. ಕಿಶೋರಬಾಬು ಹಾಗೂ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸೆಮಿ ಮಾರಿಯಮ್ ಜಾರ್ಜ ಅವರುಗಳು ರನ್‌ರ್ ಅಪ್ ತಂಡಕ್ಕೆ ಕಪ್ ನೀಡಿ ಪ್ರೋತ್ಸಾಹಿಸಿದರು.
ಪತ್ರಕರ್ತರ ಕ್ರಿಕೆಟ್ ಟೀಮ್ ನಾಯಕ ಪ್ರವೀಣ ರೆಡ್ಡಿ, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಭವಾನಿಸಿಂಗ್ ಠಾಕೂರ, ಪತ್ರಕರ್ತರ ಸಂಘದ ಕೋಶಾಧ್ಯಕ್ಷ ರಾಜು ಎಂ. ದೇಶಮುಖ, ವಿಜಯ ಕರ್ನಾಟಕದ ಪತ್ರಿಕೆಯ ಸೂರ್ಯಕಾಂತ ಜಮಾದಾರ, ಬಿಟಿವಿ ವರದಿಗಾರ ಪುರುಷೋತ್ತಮ ಕುಲಕರ್ಣಿ, ಪ್ರಜಾವಾಣಿಯ ಪ್ರಶಾಂತ ಅಲಾಲೆ, ದಿಗ್ವಿಜಯ ಟಿವಯ ಓಂಪ್ರಕಾಶ ಮಣೂರ, ಪವರ್ ಟಿವಿಯ ಜಿಲ್ಲಾ ವರದಿಗಾರ ಅನೀಲ ಸ್ವಾಮಿ, ಮನೀಷ ಪತ್ರಿಕೆಯಿಂದ ಮಹೇಶ ಸ್ವಾಮಿ ಅವರುಗಳು ಕಪ್ ಸ್ವೀಕರಿಸಿದರು.
ಮಾ.4ರಂದು ನಡೆದ ಕ್ರಿಕೆಟ್ ಪಂದ್ಯದಲ್ಲಿ ಪತ್ರರ್ಕರ ಸಂಘವನ್ನು 21 ರನ್‌ಗಳಿಂದ ಸೋಲಿಸಿದ ಪೋಲಿಸ್ ತಂಡಕ್ಕೆ ಪ್ರಶಸ್ತಿ ನೀಡಲಾಯಿತು.
ಕಳೆದ 8 ವರ್ಷಗಳಿಂದ ಸತತ ಪತ್ರಕರ್ತರ ಸಂಘವು ಪೋಲಿಸ್ ತಂಡವನ್ನು ಸೋಲಿಸುತ್ತ ಬಂದಿದ್ದು, ಇದು ಮೊದಲ ಬಾರಿಗೆ ಪೋಲಿಸ್ ತಂಡವು ವಿಜಯವಾಗಿ ಪ್ರಶಸ್ತಿಗೆ ಭಾಜನವಾಯಿತು.

LEAVE A REPLY

Please enter your comment!
Please enter your name here