ಹೆಚ್.ಕೆ.ಇ. ಚುನಾವಣೆ ಶೇ. 92ರಷ್ಟು ಮತದಾನ

0
1093

ಕಲಬುರಗಿ, ಫೆ. 27: ಕಲ್ಯಾಣ ಕರ್ನಾಟಕದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗೆ 2021-2024ನೇ ಸಾಲಿಗಾಗಿ ನಡೆದ ಚುನಾವಣೆಯಲ್ಲಿ ಶೇ. 92ರಷ್ಟು ಮತದಾನವಾದ ಬಗ್ಗೆ ವರದಿಯಾಗಿದೆ.
ಒಟ್ಟು 1571 ಮತದಾರರು ಹೊಂದಿದ ಈ ಸಂಸ್ಥೆ ಇಂದು 1465 ಮತದಾರರು ತಮ್ಮ ಮತವನ್ನು ಚಲಾಯಿಸಿದ್ದಾರೆ. ಬೀದರ ಮತ್ತು ರಾಯಚೂರ ಜಿಲ್ಲೆಯಿಂದ ಮತದಾನ ಸ್ಪಷ್ಟ ಚಿತ್ರಣ ಇನ್ನು ಲಭ್ಯವಾಗಿಲ್ಲ.

ಜಿದ್ದಾಜಿದ್ದಿನ ಹೋರಾಟದಲ್ಲಿ ಈ ಚುನಾವಣೆಯಲ್ಲಿ ತ್ರಿಕೋಣ ಸ್ಪರ್ಧೆ ಏರ್ಪಟ್ಟಿದ್ದು, ಅಧ್ಯಕ್ಷ ಗದ್ದುಗೆ ಯಾರು ಅಲಂಕರಿಸುತ್ತಾರೆAಬುದು ನಾಳೆ ರವಿವಾರ ಮಧ್ಯಾಹ್ನದ ವರೆಗೆ ತಿಳಿಯಲಿದೆ.
ಅಧ್ಯಕ್ಷ ಸ್ಥಾನಕ್ಕಾಗಿ ಶಶೀಲ್ ನಮೋಶಿ, ಬಸವರಾಜ ಭೀಮಳ್ಳಿ ಮತ್ತು ಭೀಮಾಶಂಕರ ಬಿಲಗುಂದಿ ಅವರುಗಳು ಸ್ಪರ್ಧಿಸಿ, ಮತದಾನ ಮಾಡಿ, ವಿಜಯದ ಸಂಕೇತ ತೋರಿಸುತ್ತಿದ್ದರು.

LEAVE A REPLY

Please enter your comment!
Please enter your name here