ಕಲಬುರಗಿ, ಫೆ. 3: ಕರ್ನಾಟಕದ ರಾಜ್ಯದಲ್ಲಿ ಕುರುಬರು ಪರಿಶಿಷ್ಟ ಪಂಗಡದಲ್ಲಿ ಸೇರ್ಪಡೆಯಾಗಬೇಕೆಂದು ಮತ್ತು ಅವರಿಗೆ ಪರಿಶಿಷ್ಟ ಪಂಗಡದ ಎಲ್ಲಾ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಕುರಬರಿಗೆ ಎಸ್‌ಟಿ ಮೀಸಲಾತಿ ನೀಡಲಾಗಿದೆ ಅದರಂತೆ ಅದರಲ್ಲೂ ಕಲ್ಯಾಣ ಕರ್ನಾಕಟದ ಭಾಗವಾದ ಕಲಬುರಗಿ, ಬೀದರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅತ್ಯಂತ ಹಿಂದುಳಿದ ಕುರುಬರನ್ನು ಗೊಂಡ ಪರ್ಯಾಯ ಪದವಾಗಿ ಕುರಬರಿಗೆ ಎಸ್.ಟಿ ಮೀಸಲಾತಿ ನೀಡಬೇಕೆಂದು ಈಗಾಗಲೇ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಸಿಲಾಗಿದೆ ಅಲ್ಲದೇ ರಾಜ್ಯದಾದ್ಯಂತ ಕುರುಬರಿಗೆ ಎಸ್ಟಿ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಮಹಾಸಮಾವೇಶವನ್ನು ಹಮ್ಮೆಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ಕುರಬರ ಎಸ್.ಟಿ. ಹೋರಾಟ ಸಮಿತಿಯ ರಾಜ್ಯ ಉಪಾಧ್ಯಕ್ಷರಾದ ಧರ್ಮಣ್ನ ದೊಡ್ಡಮನಿ ಅವರು ತಿಳಿಸಿದ್ದಾರೆ.
ಅವರು ಇಂದು ಬುಧುವಾರ ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಈ ಸಮಾವೇಶದಲ್ಲಿ ಸುಮಾರು ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 10 ಲಕ್ಷ ಜನ ಸೇರುವ ಸಾಧ್ಯತೆಯಿದ್ದು, ಕಲಬುರಗಿ ಜಿಲ್ಲೆಯಲ್ಲಿ 15 ಸಾವಿರಕ್ಕೂ ಹೆಚ್ಚು ಕುರುಬ ಸಮಾಜದವರು ಪಾಲ್ಗೋಳ್ಳಲಿದ್ದು, ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾವಹಿಸುವ ನಿರೀಕ್ಷೆಯಿದೆ ಎಂದು ಹೇಳಿದರು.
ಬೆಂಗಳೂರಿನ ಮಾದಾವರದ ಹತ್ತಿರದ ತುಮಕೂರು ರಸ್ತೆಯ ಅಂತರಾಷ್ಟಿçÃಯ ಪ್ರದರ್ಶನ ಸೆಂಟರ್ ಮೈದಾನದಲ್ಲಿ ಕುರುಬರ ಎಸ್.ಟಿ. ಮೀಸಲಾತಿಯ ಹಕ್ಕೋತ್ತಾಯ ಮಹಾಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ.
ಈಗಾಗಲೇ ಜನೆವರಿ 15 ರಿಂದ ಕಾಗಿನೆಲೆಯಿಂದ ಪಾದಯಾತ್ರೆ ಆರಂಭವಾಗಿದ್ದು, ಫೆ. 7ರಂದು ಬೆಂಗಳೂರಿಗೆ ಪಾದಯಾತ್ರೆ ಆಗಮಿಸಿ ಅಲ್ಲಿ ಸಮಾರೋಪಗೊಳ್ಳಲಿದೆ ಎಂದರು.
ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠದ ಜಗದ್ಗುರುಗಳಾದ ಶೀ ನೀರಂಜAನಾನAದ ಪುರಿ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಪಂಚಾಯತ ರಾಜ್ ಸಚಿವರಾದ ಕೆ. ಎಸ್. ಈಶ್ವರಪ್ಪ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಕುರುಬ ಸಮಾಜದ ಅಧ್ಯಕ್ಷರಾದ ವೀರುಪಾಕ್ಷಪ್ಪ ಅವರ ಸಾರಥ್ಯದಲ್ಲಿ ಈ ಮಹಾಸಮಾವೇಶ ನಡೆಯಲಿದೆ ಎಂದರು.
ಕುರಬರಿಗೆ ಕರ್ನಾಟಕ ಮತ್ತು ಕೇಂದ್ರ ಸರಕಾರ ಕುರಬರನ್ನು ಎಸ್ಟಿ ಸೇರಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ತರಲು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂತಹ ಹಲವಾರು ಹೋರಾಟಗಳನ್ನು ರೂಪಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಟಿಯಲ್ಲಿ ಕರ್ನಾಟಕ ಪ್ರದೇಶ ಕುರುಬ ಸಂಘದ ಜಿಲ್ಲಾಧ್ಯಕ್ಷ ತಿಪ್ಪಣ್ಣ ಬಳಬಟ್ಟಿ, ಸಮಾಜದ ಮುಖಂಡರಾದ ಬೀರಣ್ಣ ಕಲ್ಲೂರ್, ಲಿಂಗರಾಜ ಬಿರಾದಾರ, ಹಣಮಂತ ಪೂಜಾರಿ, ನ ಭಗವಂತರಾಯಗೌಡ ಪಾಟೀಲ್ ಅವರುಗಳು ಉಪಸ್ಥಿತಿರಿದ್ದರು.
Home Featured Kalaburagi ಪರಿಶಿಷ್ಟ ಪಂಗಡಕ್ಕೆ ಕುರಬರನ್ನು ಸೇರಿಸಲು ಆಗ್ರಹಿಸಿ ಫೆ. 7ರಂದು ಬೆಂಳೂರಿನಲ್ಲಿ ಮಹಾಸಮಾವೇಶ:ದೊಡ್ಡಮನಿ