ಕಲಬುರಗಿ- ಯಾದಗಿರಿ ಡಿಸಿಸಿ ಬ್ಯಾಂಕಿನಲ್ಲಿ ಬಿಜೆಪಿ ಬ್ಯಾಕ್ ಡೋರ್ ಎಂಟ್ರಿ- ಅಜಯ್ ಸಿಂಗ್ ಆಕ್ರೋಶ

0
1032

ಬೆಂಗಳೂರು/ ಕಲಬುರಗಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಕೆಲ ಗಂಟೆ ಮುಂಚಿತವಾಗಿ ಚುನಾಯಿತ ಮೂವರು ನರ‍್ದೇಶಕರನ್ನು ಚಿಲ್ಲರೆ ಕಾರಣ ಮುಂದೆ ಮಾಡಿ ಅರ‍್ಹಗೊಳಿಸುವ ಮೂಲಕ ಬಿಜೆಪಿಯವರು ಹಿಂಬಾಗಿಲಿನಿಂದ, ವಾಮಮರ‍್ಗದಿಂದ ಅಧಿಕಾರ ಗದ್ದುಗೆಗೆ ಏರಿದ್ದಾರೆ ಎಂದು ಕಾಂಗ್ರೆಸ್ ಜೇರ‍್ಗಿ ಶಾಸಕರು ಹಾಗೂ ವಿಧಾನಸಬೆ ವಿರೋಧ ಪಕ್ಷದ ಮುಖ್ಯ ಸಚೇತಕರಾದ ಡಾ. ಅಜಯ್ ಸಿಂಗ್ ಮೇಲೆ ಹೇಗೆ ರಾಜ್ಯ ಸರಕಾರದಲ್ಲಿ ಬಿಜೆಪಿ ಹಿಂಬಾಗಿಲ ಎಂಟ್ರಿ ಪಡೆಯಿತೋ, ಥೇಟ್ ಅದೇ ರೀತಿ ಡಿಸಿಸಿ ಬ್ಯಾಂಕಿನಲ್ಲಿಯೂ ಹಿಂಬಾಗಿಲಿನ ಪ್ರವೇಶ ಪುನರಾರ‍್ತನೆಯಾಗಿದೆ ಎಂದು ಗೇಲಿ ಮಾಡಿದ್ದಾರೆ.
ಇಂತಹ ಆಟ ಬಹಳ ದಿನ ನಡೆಯಲ್ಲ. ಡಿಸಿಸಿ ಬ್ಯಾಂಕಿನ ಇತಿಹಾಸದಲ್ಲೇ ಇಂತಹ ಕೆಟ್ಟ ರಾಜಕೀಯ ಕೆಲಸ ಯಾರೂ ಮಾಡಿಲ್ಲ. ಇಂತಹ ಘಟನೆಗಳು ಎಂದೂ ನಡೆದಿಲ್ಲ. ಬಿಜೆಪಿ ಶಾಸಕರನ್ನು ಬ್ಯಾಂಕಿಗೆ ಅಧ್ಯಕ್ಷರನ್ನಾಗಿಸಬೇಕು ಎಂಬ ಒಂದೇ ಕಾರಣದಿಂದ ಇಡೀ ಸರಕಾರಿ ಯಂತ್ರ ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ದೂರಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿಗೆ ನಂಬಿಕೆೆಯೇ ಇಲ್ಲ ಎಂಬುದಕ್ಕೆ ಡಿಸಿಸಿ ಬ್ಯಾಂಕಿನ ಈ ಚುನಾವಣೆಯೇ ಕನ್ನಡಿ. ರಾಜ್ಯದಲ್ಲಿ ಸರಕಾರ ರಚಿಸುವುದಾಗಲೀ ಅಥವಾ ಡಿಸಿಸಿ ಬ್ಯಾಂಕ್ ಅಧ್ಯP್ಷÀರಾಗಲಿ ನೇರ ಮರ‍್ಗದಲ್ಲಿ ಬಿಜೆಪಿಗೆ ಕೆಲಸವೇ ಆಗೋದಿಲ್ಲ. ಅದೇನಿದ್ದರೂ ಬ್ಯಾಕ್ ಡೋರ್ ಎಂಟ್ರಿನೇ ಮಾಡೋ ಅನಿವರ‍್ಯತೆ ಎದುರಾಗುತ್ತಿದೆ. ಬಿಜಿಪಿ ಆಡಳಿತ ದುರಪಯೋಗಪಡಿಸಿಕೊಂಡು, ಆಮಿಷವೊಡ್ಡಿ ,ಬೆದರಿಸುತ್ತ ಅಧಿಕಾರಕ್ಕೆ ಬಂದಿದೆ. ಡಿಸಿಸಿ ಬ್ಯಾಂಕಿನಿಂದ ಇನ್ನು ಮುಂದೆ ರೈತರ ಹಿತ ಕಾಯುವ ಕೆಲಸಗಲು ಅದ್ಹೇಗೆ ಸಾಧ್ಯ? ಜನರು, ರೈತರು ಎಲ್ಲವನ್ನು ಗಮನಿಸುತ್ತಿದ್ದಾರೆ. ಬರುವ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದು ಡಾ. ಜಯ್ ಸಿಂಗ್ ಹೇಳಿಕೆಯಲ್ಲಿ ಕಿಡಿ ಕಾರಿದ್ದಾರೆ.

LEAVE A REPLY

Please enter your comment!
Please enter your name here