ಕಲಬುರಗಿ, ನ. 13: ನನಗಂತು ಮಂತ್ರಿ ಯಾಗುವ ಆಸೆಯಿಲ್ಲ, ಅದಕ್ಕಾಗಿ ಬೀಕ್ಷೆ ಬೇಡುವುದಿಲ್ಲ, ತಾನಾಗಿಯೇ ಮಂತ್ರಿಗಿರಿ ಬಂದರೆ ಒಲ್ಲೆ ಅನ್ನುವುದಿಲ್ಲ ಎಂದು ಬಿಜೆಪಿ ರಾಜ್ಯ ಹಿರಿಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಹೇಳಿ ದ್ದಾರೆ.
ಅವರಿಂದಿಲ್ಲಿ ಪತ್ರಿಕಾಭವನದಲ್ಲಿ ಪತ್ರ ಕರ್ತರೊಂದಿಗೆ ಮಾತನಾಡುತ್ತ, ನಮ್ಮ ಪಕ್ಷ ಶಿಸ್ತಿನ ಪಕ್ಷ, ಕೆಲಸ ಮಾಡುವ ಕಾರ್ಯಕರ್ತ ರನ್ನು ಹುಡುಕಿ ಗುರುತಿಸುವ ಪಕ್ಷವಾಗಿದೆ ಎಂದರಲ್ಲದೇ, ಜಿಲ್ಲೆಗೊಬ್ಬರಂತೆ ಉಸ್ತುವಾರಿ ಸಚಿವರನ್ನು ನೇಮಿಸಬೇಕು, ಒಬ್ಬ ಸಚಿವರಿಗೆ ಎರಡು ಜಿಲ್ಲೆ ನೀಡುವುದು ಸೂಕ್ತವಲ್ಲ ಎಂಬ ಭಾವನೆಯನ್ನು ಅವರು ವ್ಯಕ್ತಪಡಿಸಿದರು.