ಕಲಬುರಗಿ, ಸೆ. 10: ನಗರದಲ್ಲಿ ಒಟ್ಟು 11 ಸಾವಿರ ಟ್ರೇಡ್ ಪರವಾನಿಗಿದಾರರಿದ್ದು, ದೇಶಾದ್ಯಂತ ಹರಡಿದ ಕೋವಿಡ್ ಸೋಂಕಿನಿAದಾಗಿ ಸರಕಾರ ವಿಧಿಸಿದ ಲಾಕ್‌ಡೌನ್‌ನಿಂದಾಗಿ ಅದರಲ್ಲಿ 10 ಸಾವಿರ ಟ್ರೇಡ್‌ದಾರರು ತಮ್ಮ ಲೈಸೆನ್ಸ್ ನವೀಕರಿಸಿಕೊಂಡಿದ್ದಾರೆ ಎಂದು ಮಹಾನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ. ವಿನೋದ ಅವರು ತಿಳಿಸಿದ್ದಾರೆ.
ನಗರದಲ್ಲಿ ವ್ಯಾಪಾರ ವಹಿವಾಟಿಗಾಗಿ ಕಡ್ಡಾಯವಾಗಿ ಉದ್ದಿಮೆ ಪರವಾನಿಗೆ ಪಡೆಯುವಲ್ಲಿ ಮಹಾನಗರಪಾಲಿಕೆಯ ನೂತನ ಆಯುಕ್ತರು ಯೋಜನೆಯೊಂದನ್ನು ರೂಪಸಿ, ಪ್ರಥಮ ಪ್ರಾಯೋಗಿಕ ಹಂತವಾಗಿ ನಗರದ ಸೂಪರ್ ಮಾರ್ಕೇಟ್ ಹತ್ತಿರದ ದತ್ತ ಮಂದಿರದ ಆವರಣ ದಲ್ಲಿ ಕಳೆದ ಎರಡು ದಿನಗಳಿಂದ ಕ್ಯಾಂಪ್ ಆಯೋಜಸಿದ್ದು, ಅದು ಬಹುತೇಕವಾಗಿ ಯಶಸ್ವಿಯಾದಂತೆ ಕಂಡುಬAದಿದೆ.
9.9.2020 ರಿಂದ ಆರಂಭವಾದ ಈ ಕ್ಯಾಂಪ್‌ನಲ್ಲಿ ಇಂದಿನ ವರೆಗೆ ಅಂದರೆ 10.9.2020ರ ವರೆಗೆ ಸುಮಾರು 300 ಅರ್ಜಿಗಳಿಂದ ಉದ್ದಿಮೆ ಪರವಾನಿಗಾಗಿ ಅರ್ಜಿ ಬಂದಿದ್ದು ಅದರಲ್ಲಿ ಕ್ರಮವಾಗಿ 58 ಮತ್ತು 38 ಉದ್ದಿಮೆದಾರರ ಅರ್ಜಿ ಪರಿಶೀಲಿಸಿ ಅವರಿಗೆ ಪರವಾನಿಗೆ ನೀಡಲು ಅನುಮತಿ ನೀಡಲಾಗಿದೆ ಎಂದರು.
ಇನ್ನು ನಾಳೆ ಅಂದರೆ ದಿನಾಂಕ 11.9.2020 ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ಕನಿಷ್ಟ ಪಕ್ಷ 500 ರವರೆಗೆ ಟ್ರೇಡ್ ಲೈಸೆನ್ ಗಾಗಿ ಅರ್ಜಿ ಬರುವ ಸಾಧ್ಯತೆಯಿದೆ.
ಈ ಹಿಂದೆ ಉದ್ದಿಮೆದಾರರು ತಮ್ಮ ತಮ್ಮ ವ್ಯಾಪಾರ ವಹಿವಾಟಿಗಾಗಿ ಮಹಾನಗರಪಾಲಿಕೆಯಿಂದ ಉದ್ದಿಮೆ ಪರವಾನಿಗಾಗಿ ಅಲೇದಾಡಿದರೂ ಕೂಡಾ ಸಿಗದ ಟ್ರೇಡ್ ಲೈಸೆನ್ಸ್ ಈಗ ವ್ಯಾಪಾರಸ್ಥರಿಗಾಗಿ ಅವರದ್ದಿಲ್ಲಿಗೆ ಕ್ಯಾಂಪ್‌ಮಾಡಿ ಅನುಕೂಲ ಮಾಡಿಕೊಟ್ಟಿದ್ದು ಮಹಾನಗರಪಾಲಿಕೆಗೆ ವ್ಯಾಪಾರಸ್ಥರು ಧನ್ಯವಾದಗಳನ್ನು ಹೇಳಿದ್ದಾರೆ.
ಹಂತ ಹಂತವಾಗಿ ಈ ಯೋಜನೆಯನ್ನು ಬರುವ ದಿನಗಳಲ್ಲಿ ಸ್ಟೇಷನ್ ಬಜಾರ, ಎಂ.ಎಸ್.ಕೆ.ಮಿಲ್. ಗಂಜ್ ಪ್ರದೇಶ, ಬ್ರಹ್ಮಪೂರ ಸೇರಿದಂತೆ ಹಲವಾರು ಬಡಾವಣೆಗಳಲ್ಲಿ ಕ್ಯಾಂಪ್ ಮಾಡುವ ಮೂಲಕ ಲೈಸೆನ್ಸ್ ನೀಡುವ ಯೋಜನೆಯನ್ನು ಕೂಡಾ ಮಾಡಲಾಗಿದೆ ಎಂದು ಡಾ. ವಿನೋದ ಅವರು ಹೇಳಿದರು.
Home Featured Kalaburagi ಮಹಾನಗರಪಾಲಿಕೆಯ ಉದ್ದಿಮೆ ಪರವಾನಿಗಾಗಿ ಯಶಸ್ವಿ ಕ್ಯಾಂಪ್ ಎರಡು ದಿನಗದಲ್ಲಿ ಸುಮಾರು 100 ಟ್ರೇಡ್ ಲೈಸೆನ್ಸ್ಗೆ ಅನುಮತಿ