ರೈತರ ಮುಂಗಾರು ಬೆಳೆ ಬೆಂಬಲ ಬೆಲೆ ಖರೀದಿಗೆ ಸಿದ್ಧತೆಮಾಡಿಕೊಳ್ಳದ ಸರಕಾರ:ರೈತ ಸಂಘ ಆರೋಪ

0
1212

ಕಲಬುರಗಿ, ಆಗಸ್ಟ. 30: ಮುಂಗಾರು ಬೆಳೆಗಳಾದ ಹೆಸರು, ಉದ್ದು, ಸಜ್ಜೆ, ಸೋಯಾಬಿನ್ ಮಾರುಕಟ್ಟೆಗೆ ಬಂದಿದ್ದು ಇವುಗಳಿಗೆ ಬೆಂಬಲ ಬೆಲೆ ಖರೀದಿಗೆ ಸಿದ್ದತೆಮಾಡಿಕೊಳ್ಳದೆ ಇರುವ ಸರಕಾರ ರೈತರರಿಗೆ ಅನ್ಯಾಯಮಾಡುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ ಆರೋಪಿಸಿದೆ.
ರಾಜ್ಯದಲ್ಲಿ ಹೆಸರು, ಉದ್ದು ಮಾರುಕಟ್ಟೆಗೆ ಬರಲು ಆರಂಭಿಸಿದ್ದು, ಶೇ. 20ರಷ್ಟು ಹೆಸರು ಮಾರುಕಟ್ಟೆಗೆ ಬಂದಿದ್ದು, ಮಳೆ ನಿಂತರೆ ಶೇಕಡ 50ರಷ್ಟು ಹೆಸರು ಮಾರುಕಟ್ಟೆಗೆ ಬರಲಿದೆ. ರಾಜ್ಯದಲ್ಲಿ ಗದಗ, ಕಲಬುರಗಿ, ಧಾರವಾಡ, ಕೂಪ್ಪಳ, ಬೀದರ, ರಾಯಚೂರು ಹಾಗೂ ಯಾದಗಿರಿ ಮುಂತಾದ ಹತ್ತು ಜಿಲ್ಲೆಗಳಲ್ಲಿ ಸುಮಾರು ನಾಲ್ಕುವರೆ ಲಕ್ಷ ಹೆಕ್ಟೇರ ಪ್ರದೇಶದಲ್ಲಿ ಹೆಸರು ಬೆಳೆ ಬಿತ್ತಲಾಗಿದೆ. ಬೆಳದ ಬೆಳೆಯು ಮಾರುಕಟ್ಟೆಗೆ ಬರಲು ಆರಂಭಿಸಿದ. ಅದೇ ರೀತಿ ಉದ್ದು ಸಹ ಸುಮಾರು 3 ಲಕ್ಷ ಹೆಕ್ಕರ್ ಪ್ರದೇಶದಲ್ಲಿ ಬೆತ್ತಲಾಗಿದೆ. ಅದು ಸಹ ಇನ್ನು 15 ದಿನಗಳಲ್ಲಿ ಮಾರುಕಟ್ಟೆಗೆ ಬರಲಿದೆ. ಇಷ್ಟಲ್ಲಾ ಬೆಳೆ ಬರುತ್ತದೆ ಎಂದು ತಿಳಿದರೂ ಸಹ ರಾಜ್ಯ ಸರ್ಕಾರ ಖರೀದಿಗಾಗಿ ಯಾವುದೇ ಸಿದ್ದತೆಗಳನ್ನು ಮಾಡಿಕೊಂಡಿಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಮಾರುತಿ ಮಾನಪಡೆ ಅವರು ಹೇಳಿದ್ದಾರೆ.
ಅವರಿಂದಿಲ್ಲಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತ, ಒಂದು ಕ್ಯಾಬಿನೆಟ್ ಸಬ್ ಕಮಿಟಿ ನಡೆಸಿ, ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಆದರೆ ಈವರೆಗೂ ಸಹ ಕ್ಯಾಬಿನೆಟ್ ಸಬ್ ಕಮಿಟಿಯ ದಿನಾಂಕ ಫಿಕ್ಸ್ ಆಗಿಲ್ಲ. ಈ ಕ್ಯಾಬಿನೆಟ್ ಸಬ್ ಕಮಿಟಿಯ ಅಧ್ಯಕ್ಷರನ್ನಾಗಿ ಉಪಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರಾದ ಲಕ್ಷಣ ಸವದಿ ಅವರನ್ನು ನೇಮಿಸಲಾಗಿದೆ. ಅವರ ಜೊತೆ ಸಂಪುಟದ ಉಪ ಸಮಿತಿಯಲ್ಲಿ ಕಾನೂನು ಸಚಿವರು, ಕೃಷಿ ಸಚಿವರು. ಮತು ಗ್ರಹಸಚಿವರಾದ ಬಸವರಾಜ್ ಬೊಮ್ಮಾಯಿ ಅವರಂಥ ಪ್ರಮುಖ ಸಚಿವರು ಸಮಿತಿಯ ಸದಸ್ಯರಾಗಿರುತ್ತಾರೆ. ಆದರೆ ಈವರೆಗೂ ಸಹ ಕ್ಯಾಬಿನೆಟ್ ಸಮಿತಿಯ ಒಂದು ಸಭೆ ನಡೆಸಿ ಕನಿಷ್ಠಪಕ್ಷ ಅದರ ದಿನಾಂಕ ಫಿಕ್ಸ್ ಮಾಡುವಂತ ಕಾರ್ಯ ಇನ್ನೂ ಆಗಲ್ಲ ಎಂದು ಖೇದ ವ್ಯಕ್ತಪಡಿಸಿದರು.
ಈ ಹಿಂದ ತೊಗರಿ ಖರೀದಿ ಮಾಡುವಂತಹ ಸಮಯದಲ್ಲಿ ಖುದ್ದು ಲಕ್ಷ್ಮಣ್ ಸವದಿ ಅವರು “ಮಾರುತಿ ಮಾನಪಡಯವರೆ ನನ್ನ ಕೈಯಲ್ಲಿ ಎನು ಅಧಿಕಾರ ಇದೆ” ಮುಖ್ಯಮಂAತ್ರಿಗಳು ಈ ಕ್ಯಾಬಿನೆಟ್ ಸಬ್ ಕಮಿಟಿ ಏತಕ್ಕಾಗಿ ರಚಿಸಿದ್ದಾರೆ ಎಂದು ತಿಳಿಯದು ಎಂದು ಹೇಳಿದ್ದಾರೆ. ಲಕ್ಷಣ ಸವದಿ ಹಾಗೂ ಯಡಿಯೂರಪ್ಪ ರವರ ವೈಯಕ್ತಿಕ ಸಂಬAಧಗಳು ಸರಿಯಿಲ್ಲ. ಬೆಲೆ ನಿಗದಿ ಪಡಿಸುವ ಕೆಲಸವೇನಿದೆ. ಕೃಷಿ ಮಾರುಕಟ್ಟೆಯು ಸಹಕಾರಿ ಸಚಿವರಿಗೆ ಬರುತ್ತದೆ. ಅಂದರೆ ಸಹಕಾರಿ ಸಚಿವರ ಹತ್ತಿರ ಸಚಿವ ಖಾತೆ, ಆದರೆ ಕ್ಯಾಬಿನೆಟ್ ಸಬ್ ಕಮಿಟಿಯ ಚೇರ್ಮನ್ ಸಾರಿಗೆ ಸಚಿವರು. ಕೃಷಿ ಸಚಿವರ ಕೈಯಲ್ಲಿ ಏನೂ ಇಲ್ಲ . ಇಂಥವರೆಲ್ಲ ಸೇರಿಕೂಂಡು ಈ ಸರ್ಕಾರದಲ್ಲಿ ರೈತರಿಗೆ ಯಾವ ನ್ಯಾಯ ದೊರಕಿಸಿಕೂಡುತ್ತಾರೆ ಎಂದು
ನಮಗೆ ಆತಂಕ ಮೂಡಿಸಿದೆ ಎಂದರು.
ಒಂದು ದೇಶ-ಒಂದು ಮಾರುಕಟ್ಟೆ ಎಂ ದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪದೇಪದೇ ಹೇಳಿದ್ದಾರೆ. ದೇಶದ ಅಗ್ರಿಕಲ್ಬರ್ ಮಾರ್ಕಟಿಂಗ್ ಆಕ್ಟ್ ಅನ್ನು ಬದಲಿ ಮಾಡಿದ್ದಾರೆ. ಸುಗ್ರೀವಾಜ್ದೆ ಮೂಲಕ ಒಂದು ಕಾನೂನನ್ನು ಜಾರಿ ಮಾಡಲು ಹೊರಟಿದ್ದಾರೆ. ಈ ಜಾರಿ ಮಾಡಿರುವಂತಹ ಸುಗ್ರೀವಾಜ್ನೆ ಮೂಲಕ ರೈತರಿಗೆ ಬೆಂಬಲ ಬೆಲೆ ಕೊಡಿಸೋಕೆ ಇವರಿಂದ ಆಗೋದಿಲ್ಲ ಎಂದು ವಿವರಿಸಿದರು.
ಮುಖ್ಯಮಂತ್ರಿಗಳು ಎಚ್ಚೆತ್ತುಕೊಂಡು ಕ್ಯಾಬಿನೆಟ್ ಸಬ್ ಕಮಿಟಿಯನ್ನು ಮಾಡಲು ಸಂಬAಧಪಟ್ಟವರಿಗೆ ಹೇಳಬೇಕು . ಇದನ್ನ ಹೇಳಿ ರೈತರಿಗೆ ನ್ಯಾಯ ದೊರಕಿಸುವ ಕೆಲಸ ಮಾಡಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಒತ್ತಾಯ ಮಾಡುತ್ತದೆ ಎಂದರು.
ಸಚಿವರಾದ ಬಿ. ಸಿ. ಪಾಟೀಲ ಅವರ ಮುಂದಾಗಬೇಕು, ಸಹಕಾರಿ ಸಚಿವರು ಮುಂದಾಗಬೇಕು, ನಮ್ಮ ಇವತ್ತಿನ ಸಾರಿಗೆ ಸಚಿವರು ಹಾಗೂ ಕ್ಯಾಬಿನೆಟ್ ಉಪಸಮಿತಿಯ ಅಧ್ಯಕ್ಷರಾದ ಶ್ರೀ ಲಕ್ಷ್ಮಣ ಸವದಿ ರವರು ಇದನ್ನು ಸರಿಪಡಿಸಿಲಿಕ್ಕೆ ಸಾಧ್ಯವಿದೆ. ಈ ಮೂವರು ಸೇರಿಕೊಂಡು ಅಂಕಿ-ಸAಖ್ಯೆಗಳನ್ನು ಸರಿಪಡಿಸಿಕೊ0ಡು ಆದಷ್ಟು ಬೇಗ ಈ ಸಬ್ ಕಮಿಟಿ ಸೇರಿದರೆ ಇನ್ನು 35 ದಿನಗಳಲ್ಲಾದರೂ ಖರೀದಿ ಶುರುವಾಗುತ್ತದೆ. ಇಲ್ಲದೆ ಹೋದರೆ ತಿಂಗಳುಗಟ್ಟಲೆ ಖರೀದಿ ಶುರುವಾಗುವುದಿಲ್ಲ ನಮ್ಮ ಸಂಸದರು ಚಿಂಚೋಳಿಯಿAದ ಬಂದಿದ್ದಾರೆ. ನಮ್ಮ ಎಂಎಲ್‌ಎಗಳು ಸೇಡಂ, ಚಿಂಚೋಳಿ, ಗ್ರಾಮೀಣ ಕ್ಷೇತ್ರ ಮುಂತಾದ ಹಲವು ಪ್ರದೇಶಗಳಿಂದ ಬಿಜಿಪಿ ಶಾಸಕರಿದ್ದಾರೆ. ಎಲ್ಲಿ ಹೆಸರು ಉದ್ದು ಹೆಚ್ಚು ಬೆಳೆದಿದ್ದಾರೆ ಅವರು ಬಾಯಿ ಮುಚ್ಚಿ ಕೂತಿದ್ದಾರೆ. ಗದಗದಲ್ಲಿ ಶಿವಕುಮಾರ್ ಉದಾಸಿ, ಸಂಸತ್ ಸದಸ್ಯರು, ಅವರು ರೈತರ ಮಗ ಎಂದು ಹೇಳಿಕೊಳ್ಳುತ್ತಾರೆ, ನಮ್ಮ ಧಾರವಾಡದ ಪ್ರಹ್ಲಾದ್ ಜೋಷಿಯವರು ಇದ್ದಾರೆ. ಇಂತಹ ಘಟಾನುಘಟಿಗಳು ಹೆಸರು ಮತ್ತು ಉದ್ದಿನ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಮತ್ತು ರಾಜ್ಯ ಸರ್ಕಾರ ಇದರ ಬಗ್ಗೆ ಗಂಭೀರ ಆಲೋಚನೆ ಮಾಡುತ್ತಾ ಇಲ್ಲ. ಇದರ ಬಗ್ಗೆ ನಾವು ಸರ್ಕಾರದ ನಡೆಯನ್ನು ನಮ್ಮ ಸಂಘ ಖಂಡಿಸುತ್ತದೆ ಅಲ್ಲದೇ ಮುಂದಿನ ದಿನಗಳಳ್ಲಿ ಅನಿವಾರ್ಯವಾಗಿ ರಾಜ್ಯಾದ್ಯಂತ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಉಪಾಧ್ಯಕ್ಷರಾದ ಶರಣಬಸಪ್ಪ ಮಮಶಟ್ಟಿ ಕರ್ನಾಟಕ ರೈತ ಸಂಘ ರಾಜ್ಯ ಸಮಿತಿ. . ಜಂಟಿ ಕಾರ್ಯದರ್ಶಿ ಅಶೋಕ್ ಮಡ್, ಪಾಂಡುರAಗ ಮಾವಿನಕರ, ಶಾಂತಪ್ಪ ಪಾಟೀಲ, ರಾಜ್ಯ ಸಮಿತಿ ಸದಸ್ಯರು ರಾಜ್ಯ ಸಮಿತಿ ಸದಸ್ಯರು ರಾಜ್ಯ ಸಮಿತಿ ಸದಸ್ಯರು ಅವರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here