ಕಲಬುರಗಿ, ಆಗಸ್ಟ. 28: ಪ್ರಪ್ರಥಮವಾಗಿ ಕಲಬುರಗಿ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಮಹಿಯೊಬ್ಬರನ್ನು ಸರಕಾರ ನೇಮಿಸಿ ಆದೇಶ ಹೊರಡಿಸಿದೆ.
2010 ಬ್ಯಾಚ್‌ನ್ ಐಎಎಸ್ ಅಧಿಕಾರಿಯಾದ ಶ್ರೀಮತಿ ವಾಸಿರೆಡ್ಡಿ ವಿಜಯಾ ಜ್ಯೋತ್ಸನಾ ಅವರನ್ನು ಕಲಬುರಗಿ ಜಿಲ್ಲಾಧಿಕಾರಿಯಾಗಿ ನೇಮಕಗೊಂಡ ಮಹಿಳಾ ಐಎಎಸ್ ಅಧಿಕಾರಿಯಾಗಿದ್ದಾರೆ.
ಈ ಹಿಂದೆ ವರ್ಗವಾಗಿದ್ದ ಜಿಲ್ಲಾಧಿಕಾರಿ ಶರತ್ ಬಿ. ಅವರನ್ನು ವರ್ಗವಾದ ವೇಗದಲ್ಲೆಯೇ ಮತ್ತೆ ವರ್ಗಾವಣೆ ಆದೇಶ ರದ್ದುಪಡಿಸಿದ ಸರಕಾರ ಈಗ ಮತ್ತೊಮ್ಮೆ ಅವರನ್ನು ಕಲಬುರಗಿಯಿಂದ ವರ್ಗಮಾಡಿದೆ.
ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಜ್ಯೋತ್ಸನಾ ಅವರನ್ನು ನೇಮಕಮಾಡಿ ಆಡಳಿತಾತ್ಮಕ ಸುಧಾರಣೆಗಳ ಇಲಾಖೆಯ ಅಧೀನ ಕಾರ್ಯದರ್ಶಿ ಜೆಮ್ಸ್ ಥರಕನ್ ಅವರು ಆದೇಶ ಹೊರಡಿಸಿದ್ದಾರೆ.
ನೂನತ ಜಿಲ್ಲಾಧಿಕಾರಿಯಾದ ಜ್ಯೋತ್ಸನಾ ಅವರು ಈ ಮುಂಚೆ ಕರ್ನಾಟಕ ಕಟ್ಟಡ ಮತ್ತು ಇತೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡ ಳಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಅವರು ಅದಕ್ಕೂ ಮೊದಲು ಜಿಲ್ಲಾಧಿಕಾರಿಯಾಗಿ ಚಿತ್ರದರ್ಗುದಲ್ಲಿ ಸೇವೆಗೈದಿದ್ದರು.
ಶರತ್ ಬಿ. ಅವರನ್ನು ಮೈಸೂರು ಜಿಲ್ಲಾಧಿಕಾರಿಯಾಗಿ ವರ್ಗ ಮಾಡಲಾಗಿದ್ದು, ಈ ಮುಂಚೆ ಮೈಸೂರಿನಲ್ಲಿ ಅಭಿರಾಮ ಜಿ. ಶಂಕರ ಅವರು ಜಿಲ್ಲಾಧಿಕಾರಿಯಾಗಿದ್ದು ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ಶರತ್ ಬಿ. ಅವರು ನೇಮಕಗೊಂಡಿದ್ದಾರೆ.
ಪ್ರಸ್ತುತ ಕಲಬುರಗಿಯಲ್ಲಿ ಎಸ್ಪಿ ಹಾಗೂ ಜಿಲ್ಲಾಧಿಕಾರಿ ಎರಡು ಹುದ್ದೆಗಳಿಗೆ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗಿದ್ದು ಪ್ರಥಮವಾಗಿದೆ.
ಅಲ್ಲದೇ ಶರತ್ ಬಿ. ಅವರನ್ನು ವರ್ಗಾವಣೆ ಮಾಡಲು ಹಲವಾರು ಬಾರಿ ಜಿಲ್ಲೆಯ ಪ್ರಭಾವಿ ರಾಜಕಾರಣಿಗಳು ಯತ್ನಿಸಿದ್ದರು.