
ಕಲಬುರಗಿ, ಜೂ.16: ವೈದ್ಯರ ಸೂಚನೆ ಅಥವಾ ಚೀಟಿ (Prescription) ಇಲ್ಲದೆ ಕೆಲವು ನಿರ್ದಿಷ್ಟ ಔಷಧಿಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವುದು ಕಾನೂನುಬಾಹಿರವಾಗಿದ್ದು, ಇಂತಹ ಕೃತ್ಯಗಳಲ್ಲಿ ತೊಡಗುವ ಮೆಡಿಕಲ್ ಅಂಗಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ವಿಶೇಷವಾಗಿ ಆಂಟಿಬಯೋಟಿಕ್, ನಿದ್ರಾಜನಕ ಮಾತ್ರೆಗಳು, ನೋವು ನಿವಾರಕ ಪ್ರಬಲ ಔಷಧಿಗಳು ಹಾಗೂ ಇತರ ನಿಯಂತ್ರಿತ ಔಷಧಿಗಳನ್ನು ವೈದ್ಯರ ಚೀಟಿ ಇಲ್ಲದೆ ಮಾರಾಟ ಮಾಡುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ. ಔಷಧಿಗಳ ದುರ್ಬಳಕೆ ಹೆಚ್ಚುವುದರ ಜೊತೆಗೆ ಔಷಧಿ ಪ್ರತಿರೋಧಕತೆ (Antibiotic Resistance) ಸಮಸ್ಯೆಯೂ ಹೆಚ್ಚಾಗುತ್ತಿದೆ ಎಂದು ತಜ್ಞರು ತಿಳಿಸಿದ್ದಾರೆ.
ಔಷಧಿ ಮತ್ತು ಸೌಂದರ್ಯವರ್ಧಕ ವಸ್ತುಗಳ ಕಾಯ್ದೆ ಅನ್ವಯ ವೈದ್ಯರ ಚೀಟಿ ಕಡ್ಡಾಯವಾಗಿರುವ ಔಷಧಿಗಳನ್ನು ಚೀಟಿ ಇಲ್ಲದೆ ಮಾರಾಟ ಮಾಡಿದರೆ ಸಂಬAಧಿಸಿದ ಅಂಗಡಿಗಳ ಪರವಾನಗಿ ಅಮಾನತು ಅಥವಾ ರದ್ದುಗೊಳಿಸುವ ಕ್ರಮ ಕೈಗೊಳ್ಳಬಹುದಾಗಿದೆ. ಅಲ್ಲದೆ ದಂಡ ಹಾಗೂ ಕಾನೂನು ಕ್ರಮಕ್ಕೂ ಅವಕಾಶವಿದೆ.
ಸಾರ್ವಜನಿಕರು ಯಾವುದೇ ಔಷಧಿಯನ್ನು ವೈದ್ಯರ ಸಲಹೆ ಮೇರೆಗೆ ಮಾತ್ರ ಖರೀದಿಸಿ ಬಳಸಬೇಕು. ಔಷಧಿ ಅಂಗಡಿಗಳ ಮಾಲೀಕರು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆರೋಗ್ಯ ಇಲಾಖೆ ಮನವಿ ಮಾಡಿದೆ.
ಯಾವುದೇ ಮೆಡಿಕಲ್ ಸ್ಟೋರ್‌ಗಳಲ್ಲಿ ವೈದ್ಯರ ಚೀಟಿಯಿಲ್ಲದೇ ನಿದ್ರಾಮಾತ್ರೆ, ನಿಕೋಟಿನ್, ಜೀವನಿರೋಧಕಗಳನ್ನು ಮಾರಾಟ ಮಾಡಿದ್ರೇ ಕೂಡಲೇ ಸಮೀಪದ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಬಹುದಾಗಿದೆ.
ಈ ಮುಂಚೆ ಇಂತಹ ಪ್ರಕರಣಗಳು ಸಂಭವಿಸಿದರೆ ಔಷಧ ನಿಯಂತ್ರಕರ ಕಛೇರಿಗೆ ದೂರು ಸಲ್ಲಿಸಬೇಕಾಗುತ್ತಿತ್ತು. ಈಗ ಹಾಗಿಲ್ಲ ಪೋಲಿಸರೇ ನೇರವಾಗಿ ದಾಳಿ ಮಾಡಿ ಎಫ್‌ಐಆರ್ ಹಾಕಿ 1 ಲಕ್ಷದಿಂದ 3 ಲಕ್ಷದವರೆಗೂ ದಂಡ ವಿಧಿಸಬಹುದಾದ ಕಾನೂನು ಜಾರಿಯಾಗಿದೆ.
ಕೂಡಲೇ ನಾಗರೀಕರು ಜಾಗೂರಿಕರಾಗಿರಿ, ಜಾಣರಾಗಿರಿ, ಎಂದು ಹೇಳಲು ಇಚ್ಚಿಸುತ್ತದೆ.



