ಕಲಬುರಗಿ, ಮಾ. 12:ನಗರ ಮತ್ತು ಕಲಬುರಗಿ ಜಿಲ್ಲೆಯಾದ್ಯಂತ ಹೊಳಿ ಹಬ್ಬ ಆಚಣೆ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಮದ್ಯಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶ ಜಾರಿ ಮಾಡಿದ್ದಾರೆ.
ದಿನಾಂಕ 13 ಮತ್ತು 14ರಂದು ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ಹೊಳಿ ಹಬ್ಬ ಆಚರಿಸಲಿದ್ದು, ಈ ಸಮಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತತೆಯನ್ನು ಕಾಪಾಡುವ ದೃಷ್ಟಿಯಿಂದ ದಿನಾಂಕ 13.03.2025ರ ಬೆಳಿಗ್ಗೆ 6.00 ಗಂಟೆಯಿAದ ದಿನಾಮಕ 15.03.2025ರ ಸಂಜೆ 6.00 ಗಂಟೆಯವರೆಗೆ ಕಲಬುರಗಿ ತಾಲೂಕ ಸೇರಿದಂತೆ ಕಲಬುರಗಿ ಜಿಲೆಯಾದ್ಯಂತ
ಮದ್ಯ ಮಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಳಾದ ಫೌಜಿಯಾ ಬಿ. ತರನುಮ್ ಅವರು ಆದೇಶ ಜಾರಿಮಾಡಿದ್ದಾರೆ.ಈ ಎರಡು ದಿನಗಳ ಅವಧಿಯಲ್ಲಿ ೆ ಕಲಬುರಗಿ
ನಗರ ಹಾಗೂ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮಧ್ಯ ಮಾರಾಟ ಮಾಡುವುದನ್ನು ನಿಷೇಧಿಸಿ ಬಾರ್ ಮತ್ತು ರೆಸ್ಟೋರೆಂಟಗಳನ್ನು ಮುಚ್ಚುವಂತೆ ಆದೇಶಿಸಿದ್ದಾರೆ.