ದ್ವೀಚಕ್ರವಾಹನಗಳಾಗಲೀ, ನಾಲ್ಕು ಚಕ್ರ ವಾಹನಗಳಾಗಲೀ ಖರೀದಿಸಿದರೆ, ಒಂದೇರಡು ಕಂತುಗಳು ನೀವು ಕಟ್ಟದಿದ್ದರೆ ನಿಮ್ಮ ಮನೆ ಬಾಗಿಲಿಗೆ ಅಥವಾ ನಿಮ್ಮ ವಾಹನ ಎಲ್ಲೆ ಇರಲ್ಲಿ ಅದನ್ನು ವಶಕ್ಕೆ ಪಡೆಯಲು ಹಾಜರಾಗುತ್ತಾರೆ ಗುಂಡಾಪ್ರವೃತಿ ಹೊರಗುತ್ತಿಗೆ ಸೀಜರ‍್ಸಗಳು.
ಉದಾಹರಣಗೆ ಕಲಬುರಗಿಯ ಮುತ್ತೂಟ್ ಫಿನ್‌ಕಾರ್ಪ ಖಾಸಗಿ ಲೇವಾದೇವಿಯಿಂದ ಖರೀದಿಸಿದ ವಾಹನವೊಂದು ಬೆಂಗಳೂರಿನಲ್ಲಿ ಗುಂಡಾಗಿರಿ ಮಾಡಿ ಸೀಜ್ ಮಾಡಿ, ಸಿಕ್ಕಾಪಟ್ಟೆ ಹಣ ಕೇಳುವುದಲ್ಲದೇ ತಾವು ಸೀಜರ‍್ಸ್ ಆಗಿದ್ದು, ಏನಿದ್ದರೂ ನಮ್ಮ ಬಾಸ್‌ಗೆ ಮಾತಾಡಿ ಎಂದು ಬೆದರಿಕೆ ಹಾಕಿ ವಾಹನ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಸೀರ‍್ಸ್ ಕಂಪನಿಯ ಮಾಲೀಕರಾಗಲೀ, ಅದರ ವ್ಯವಸ್ಥಾಪಕರಾಗಲೀ ಸರಿಯಾದ ಉತ್ತರ ನೀಡದೇ, ನೀವು ವಿಜಯ್ ನಗರದ ಲ್ಲಿರುವ ಬ್ರಾö್ಯಂಚ್‌ಗೆ ಹಣ ಕಟ್ಟಬೇಕು, ಇಲ್ಲದಿದ್ದರೆ ನಮಗೆ ಹಣ ಕೊಡಿ ಎಂದು ಹೇಳಿ ದ್ವೀಚಕ್ರವಾಹನ ಎತ್ತಾಹಾಕಿಕೊಂಡು ಹೋಗಿದ್ದಾರೆ.
ಈ ಬಗ್ಗೆ ವಿಜಯ ನಗರ ಮುತ್ತೂಟ್ ಫಿನ್‌ಕ್ರಾಪ್ ಶಾಖೆಗೆ ಹೋಗಿ ವಿಚಾರಿಸಲಾಗಿ ನಮಗೇನು ಗೋತ್ತಿಲ್ಲ, ಈ ಬಗ್ಗೆ ಹೆಡ್ ಆಫಿಸ್‌ಗೆ ಕೇಳಿ ಎಂಬ ಹಾರಿಕೆ ಉತ್ತರ, ಹೆಡ್ ಆಫಿಸ್‌ಗೆ ಕೇಳಿದರೆ ನಮಗೇನು ಇದರ ಬಗ್ಗೆ ಮಾಹಿತಿಇಲ್ಲ, ನಿಮ್ಮ ವಾಹನ ಸೀಸ್ ಮಾಡಿದ ಏಜನ್ಸಿಗೆ ವಿಚಾರಿಸಿ, ಇಲ್ಲವಾದರೆ ಸೋಮವಾರ ಬನ್ನಿ ನೋಡಣ.. ಇದು ಉತ್ತರ.
ಹೀಗಿದ್ದು, ಅವರೊಂದು ದೂರವಾಣಿ ಸಂಖ್ಯೆಕೊಡುತ್ತಾರೆ, ಅದಕ್ಕೆ ಮಾತಾಡಿದರೆ ನಾವು ತುಂಬಾ ಬ್ಯುಜಿ ಇದ್ದೇವೆ, ನಿಮಗೆ ಮತ್ತೊಂದು ಸೆಲ್ ಸಂಖ್ಯೆ ಕೊಡುತ್ತೇನೆ ಅವರಿಗೆ ವಿಚಾರಿಸಿ… ಹೀಗೆ ಸುಮಾರು ಮೂರು ನಾಲ್ಕು ಸಂಖ್ಯೆಗಳ ದೂರವಾಣಿ ಕರೆಗಳಿಗೆ ಮಾಡಿದರೆ ಎಲ್ಲರದೂ ಒಂದು ನಮಗೆ ಈ ಬಗ್ಗೆ ಹೆಚ್ಚಿಗೆ ಗೊತ್ತಿಲ್ಲ, ಸೋಮವಾರ ನೋಡೊಣ…
ಇದು ಬೆಂಗಳೂರಿನ ಕಥೆ ಆದರೆ ನಗರದಲ್ಲಿ ರಾಜಾರೋಷವಾಗಿ ಮನೆಗೆ ನುಗ್ಗಿ ಸಾಲ ವಸೂಲಿಗೆ ಬರುವುದು ಎಲ್ಲಡೆ ಈಗಂತು ಮನೆಮಾತಾಗಿದೆ. ಕೆಲ ದಿನಗಳ ಹಿಂದೆಯಷ್ಟೆ ಸ್ಟೇಷನ್ ಬಜಾರ್ ಠಾಣೆಯಲ್ಲಿ ಇಂಥದೊAದು ದೂರು ದಾಖಲಾಗಿದ್ದು, ಸಾಲಕ್ಕಾಗಿ ಅವ್ಯಾಚ್ಚ ಶಬ್ಧಗಳಿಂದ ಬಯ್ದು, ನಂತರ ಹೊಡೆ ಬಡೆ ಮಾಡಲು ದೂರವಾಣಿಯಲ್ಲಿ ಬೆದರಿಕೆ ಹಾಕಿದ್ದ ಬಗ್ಗೆ ಗ್ರಾಹಕರೊಬ್ಬರು ದೂರು ನೀಡಿದ್ದರು.
ಅಂತಿಮವಾಗಿ ಸಾಲಕ್ಕೆ ಹೆದರುವುದಲ್ಲ ಸಾಲ ವಸೂಲಾತಿಗೆ ಬ್ಯಾಂಕ್‌ನವರು, ಖಾಸಗಿ ಲೇವಾದೇವಿ ಸಂಸ್ಥೆಗಳು ನೇಮಿಸಿದ ಸೀಜಿಂಗ್ ಕಂಪನಿಗಳಿoದಾಗಿ ಎಷ್ಟೋ ಆತ್ಮಹತ್ಯೆಗೆ ಕೂಡ ಶರಣಾಗಿರುವ ಘಟನೆಗಳು ನಡೆದಿವೆ.
ಕೊಟ್ಟ ಸಾಲ ವಸೂಲಿ ಮಾಡಲಿ ಅದು ಅವರ ಹಕ್ಕು, ಆದರೆ ಗೂಂಡಾಗಳAತೆ ವರ್ತಿಸಿ, ಭಯ ಹುಟ್ಟಿಸಿ, ಜನರನ್ನು ಸಾವಿನ ಕೂಪಕ್ಕೆ ತಳ್ಳುವುದು ಅದೇಷ್ಟೆ ಸಮಂಜಸ.